More

    ಸರ್ಕಾರದ ಐದು ಗ್ಯಾರಂಟಿಗಳ ಅನುಷ್ಠಾನದಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು

    ಗದಗ: ಬಡವರ ಕಲ್ಯಾಣ ಹಾಗೂ ಆರ್ಥಿಕ ಚೇತರಿಕೆಗಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಘೋಷಿಸಿದಂತೆ ಸರ್ಕಾರದ ಐದು ಪ್ರಮುಖ ಗ್ಯಾರಂಟಿಗಳ ಅನುಷ್ಠಾನ ಕುರಿತಂತೆ ಅಧಿಕಾರಿಗಳು ಕಾರ್ಯಪೃವತ್ತರಾಗುವಂತೆ ಸಚಿವ ಎಚ್.ಕೆ.ಪಾಟೀಲ ಅವರು ಹೇಳಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜರುಗಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳ ಅನುಷ್ಠಾನದಿಂದ ಬಡವರ ಬದುಕು ಚೇತರಿಕೆಯಾಗುತ್ತದೆ. ಇಂತಹ ಪ್ರಮುಖ ಗ್ಯಾರಂಟಿಗಳನ್ನು ರಾಷ್ಟ್ರದಲ್ಲಿಯೇ ಜನಮನ್ನನೆಗೆ ಪಾತ್ರವಾಗಿವೆ. ಈ ಐದು ಗ್ಯಾರಂಟಿಗಳ ಅನುಷ್ಠಾನದಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಸರಾಸರಿ ನಾಲ್ಕರಿಂದ ಐದು ಸಾವಿರ ಧನ ಸಹಾಯ ದೊರೆತಂತಾಗುತ್ತದೆ. ಈ ಯೋಜನೆಗಳು ಉಚಿತ ಯೋಜನೆಗಳೆಲ್ಲಾ ಬಡವರ ಕಲ್ಯಾಣ ಕಾರ್ಯಕ್ಕೆ ಅವಶ್ಯಕವಾದ ಯೋಜನೆಗಳಾಗಿವೆ. ಇವುಗಳ ಅನುಷ್ಠಾನದಲ್ಲಿ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ಗದಗ ಜಿಲ್ಲೆ ಐದು ಗ್ಯಾರಂಟಿಗಳ ಅನುಷ್ಠಾನದ ಪ್ರಗತಿಯಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಸೂಚಿಸಿದರು.

    ಶಕ್ತಿ ಯೋಜನೆಯಡಿ ಜೂನ ೧೧ ರಿಂದ ೩೦ ರ ವರೆಗೆ ಶೇ. ೫೬ ರಷ್ಟು ಹಾಗೂ ಜುಲೈ ೧ ರಿಂದ ೮ ರ ವರೆಗೆ ಮಹಿಳೆರು ಶೇ.೬೦ ರಷ್ಟು ಪುರುಷರು ಶೇ.೪೦ ರಷ್ಟು ಪ್ರಯಾಣಿಸಿದ್ದಾರೆ. ಜೂನ್. ೧೧ ರಿಂದ ೩೦ ರ ವರೆಗೆ ೮.೧೦ ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದರೇ, ಜುಲೈ ೧ ರಿಂದ ೮ ರ ವರೆಗೆ ೩.೬೪ ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಈಗಗಾಗಲೇ ಜಿಲ್ಲೆಯಲ್ಲಿ ಎ.ಎ.ವಾಯ್ ಹಾಗೂ ಬಿ.ಪಿ.ಎಲ್. ಹೊಂದಿರುವ ೨,೫೬,೫೦೦ ಕಾರ್ಡದಾರರಿದ್ದು ಇದರಲ್ಲಿ ಮಹಿಳೆ ಯಜಮಾನಿಯಾಗಿರುವ ೨,೩೫,೬೩೩ ಕಾರ್ಡುಗಳು ಹಾಗೂ ಪುರುಷರು ಯಜಮಾನರಾಗಿರುವ ೧೯,೬೧೧ ಕಾರ್ಡುಗಳಿವೆ. ಮಹಿಳೆ ಹಾಗೂ ಪುರುಷರ ಇರ್ವರೂ ಯಜಮಾನನಲ್ಲದ ೧,೨೫೬ ಕಾರ್ಡುಗಳು ಇವೆ ಎಂದು ಗುರುತಿಸಲಾಗಿದೆ.

    ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ೨,೮೯,೨೦೭ ಸಂಪರ್ಕಗಳಿದ್ದು ಈ ಪೈಕಿ ೧,೮೦,೯೫೪ ಸಂಪರ್ಕಗಳ ನೋಂದಣಿಯಾಗಿದೆ. ಶೀಘ್ರವೇ ಉಳಿದ ಸಂಪರ್ಕಗಳನ್ನು ನೋಂದಣಿ ಮಾಡಿಸಲಾಗುವದು. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ೫ ಸಾವಿರಕ್ಕೂ ಅಧಿಕ ಫಲಾನುಭವಿಗಳನ್ನು ಗುರುತಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ನೋಂದಣಿ ಕಾರ್ಯ ಮಾಡಲಾಗುವುದು. ಗೃಹ ಲಕ್ಷ್ಮೀ ಯೋಜನೆಯನ್ನು ಸಹ ಸರ್ಕಾರದ ಮಾರ್ಗಸೂಚಿಯಂತೆ ಶೀಘ್ರವಾಗಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

    ತದನಂತರ ಮಾತನಾಡಿದ ಸಚಿವರು ಸರ್ಕಾರದ ಈ ಪ್ರಮುಖ ಐದು ಗ್ಯಾರಂಟಿಗಳ ಅನುಷ್ಠಾನದಲ್ಲಿ ಅಧಿಕಾರಿಗಳಿಂದ ವಿಳಂಭ ನೀತಿ ಹಾಗೂ ಉದಾಸಿನತೆ ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಗಂಭೀರವಾದ ಕ್ರಮಗಳನ್ನು ಜರುಗಿಸಲಾಗುವದು. ಗ್ಯಾರಂಟಿ ಅನುಷ್ಠಾನದಲ್ಲಿ ಗದಗ ಜಿಲ್ಲೆ ಮುಂಚೂಣಿಯಲ್ಲಿರಬೇಕು. ಯಾವುದೇ ತರಹದ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು. ಸಾರ್ವಜನಿಕರಿಗೆ ಸರ್ಕಾರದ ಗ್ಯಾರಂಟಿಗಳ ಸೌಲಭ್ಯ ನಿಗದಿತ ಅವಧಿಯೊಳಗೆ ತಲುಪಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ತದನಂತರ ಗದಗ-ಬೆಟಗೇರಿ ನಗರಸಭೆಯಲ್ಲಿ ಫಾರಂ.ನಂ.೩ ವಿರಣೆಯಲ್ಲಿ ವಿಳಂಭವಾಗುತ್ತಿರುವ ಕುರಿತು ಮಾಹಿತಿ ಪಡೆದು ಮಾತನಾಡಿ ಒಂದು ವಾರದೊಳಗಾಗಿ ಬಾಕಿ ಇರುವ ಫಾರಂ. ನಂ. ೩ ಅರ್ಜಿಗಳು ಇತ್ಯರ್ಥವಾಗಬೇಕು ಎಂದು ಸಚಿವರಾದ ಎಚ್.ಕೆ.ಪಾಟೀಲ ಸೂಚಿಸಿದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ಉಪವಿಭಾಗಾಧಿಕಾರಿ ಅನ್ನಪೂರ್ಣ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಆಹಾರ ಇಲಾಖೆ ಉಪನಿರ್ದೇಶಕ ಗಂಗಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವಾಯ್.ಶೆಟ್ಟಪ್ಪನವರ, ವಾ.ಕ.ರಾ.ರ.ಸಾ.ಸಂಸ್ಥೆಯ ವಿಭಾಗೀಯ ನಿಯಂತ್ರಕ ಶೀನಪ್ಪ, ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿ ಬಸವರಾಜ ಮಲ್ಲೂರ, ರವಿ ಗುಂಜಿಕರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts