More

    ಮುಜಾಹಿದ್ದೀನ್​​ ಅಂತ್ಯಗೊಂಡಿದೆ ಎಂದು ಭಾರತ ಭಾವಿಸುವ ಅಗತ್ಯವಿಲ್ಲ: ಹಿಜ್ಬುಲ್​ ಉಗ್ರರಿಂದ ಬೆದರಿಕೆ

    ಶ್ರೀನಗರ: 2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ (ಆರ್ಟಿಕಲ್​ 370)ನ್ನು ರದ್ದುಗೊಳಿಸಿದೆ. ಇದೆಷ್ಟು ವಿವಾದ ಸೃಷ್ಟಿಸಿತ್ತು ಎಂಬುದು ಗೊತ್ತೇ ಇದೆ.

    ಈ ಬಾರಿಯ ಆಗಸ್ಟ್​ 5ಕ್ಕೆ ಆರ್ಟಿಕಲ್​ 370 ರದ್ದುಗೊಂಡು ಒಂದು ವರ್ಷ ಪೂರ್ಣವಾಗುತ್ತದೆ. ಈಗಿದನ್ನು ಮತ್ತೊಮ್ಮೆ ನೆನಪು ಮಾಡಿಕೊಂಡಿರುವ ಜಿಜ್ಬುಲ್​ ಮುಜಾಹಿದ್ದೀನ್​ ಉಗ್ರಸಂಘಟನೆ ಜಮ್ಮು-ಕಾಶ್ಮೀರದ ಬಿಜೆಪಿ ನಾಯಕರಿಗೆ ಬೆದರಿಕೆ ಹಾಕಿದೆ.

    ಜಮ್ಮು-ಕಾಶ್ಮಿರದಲ್ಲಿ ಇಂಥ ಕಠಿಣ ಕಾನೂನು ಜಾರಿಗೊಳಿಸಲು ಕೇಂದ್ರಸರ್ಕಾರಕ್ಕೆ ಸಹಕಾರ ನೀಡಿದ ರಾಜಕೀಯ ನಾಯಕರಿಗೆ ಪಾಠ ಕಲಿಸುವುದು ಬಾಕಿ ಇದೆ. ಅವರೆಲ್ಲರೂ ಸದ್ಯ ಬಂಧನದಲ್ಲಿದ್ದಾರೆ. ಮುಜಾಹಿದ್ದೀನ್ ಕಾಲ ಮುಗಿಯಿತು ಎಂದು ಭಾರತ ಯಾವ ಕಾರಣಕ್ಕೂ ಭಾವಿಸುವ ಅಗತ್ಯವಿಲ್ಲ ಎಂದು ಉಗ್ರಸಂಘಟನೆ ವಿಡಿಯೋ ಮೂಲಕ ಸಂದೇಶ ಕಳಿಸಿದೆ ಎಂದು ವರದಿಯಾಗಿದೆ.

    ಜಮ್ಮುಕಾಶ್ಮೀರದಲ್ಲಿ ಉಗ್ರರ ಉಪಟಳವನ್ನು ಭಾರತೀಯ ಭದ್ರತಾ ಪಡೆಗಳು ಯಶಸ್ವಿಯಾಗಿ ಹತ್ತಿಕ್ಕುತ್ತಿವೆ. ಆಗಾಗ ಕಾಟ ಕೊಡುವ ಉಗ್ರರನ್ನು ಹೊಡೆದುರುಳಿಸುತ್ತಿವೆ. ಹಾಗೇ ಬಂಧಿಸಲಾಗುತ್ತಿದೆ.  ಕಳೆದ ತಿಂಗಳು ಹಿಜ್ಬುಲ್​ ಮುಜಾಹಿದ್ದೀನ್​ ಕಮಾಂಡರ್​ ಮಸೂದ್​​ನನ್ನು ಎನ್​ಕೌಂಟರ್​​ನಲ್ಲಿ ಕೊಲ್ಲಲಾಗಿತ್ತು.

    ರಿಯಾನಂಥವರು ನಮ್ಮ ನಡುವೆ ಬಹಳಷ್ಟು ಜನರಿದ್ದಾರೆ; ವಂಚಿಸುವುದೇ ಅವರ ಕೆಲಸ; ಸಿದ್ಧಿಕಿ ಸಹೋದರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts