More

    ಓವಲ್ ಟೆಸ್ಟ್‌ನಲ್ಲಿ ರೋಹಿತ್ ಶತಕ, ಆಂಗ್ಲರಿಗೆ ಭಾರತ ಭರ್ಜರಿ ತಿರುಗೇಟು

    ಲಂಡನ್: ಹಿಟ್‌ಮ್ಯಾನ್ ಖ್ಯಾತಿಯ ಆರಂಭಿಕ ರೋಹಿತ್ ಶರ್ಮ (127 ರನ್, 256 ಎಸೆತ, 14 ಬೌಂಡರಿ, 1 ಸಿಕ್ಸರ್) ವಿದೇಶಿ ನೆಲದಲ್ಲಿ ಸಿಡಿಸಿದ ಚೊಚ್ಚಲ ಟೆಸ್ಟ್ ಶತಕ ಮತ್ತು ಚೇತೇಶ್ವರ ಪೂಜಾರ (61 ರನ್, 127 ಎಸೆತ, 9 ಬೌಂಡರಿ) ಜತೆಗೂಡಿ ನಡೆಸಿದ 150 ಪ್ಲಸ್ ರನ್ ಜತೆಯಾಟದ ಬಲದಿಂದ ಭಾರತ ತಂಡ 4ನೇ ಟೆಸ್ಟ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ದಿಟ್ಟ ತಿರುಗೇಟು ನೀಡಿದೆ. ಆಂಗ್ಲರಿಗೆ ಕಠಿಣ ಸವಾಲು ನೀಡುವತ್ತ ಭಾರತ ತಂಡ ದಿಟ್ಟ ಹೆಜ್ಜೆ ಇಟ್ಟಿದ್ದು, ಸದ್ಯ 1-1 ಸಮಬಲದಲ್ಲಿರುವ 5 ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಸಾಧಿಸುವತ್ತ ಸಾಗಿದೆ.

    ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಶನಿವಾರ ವಿಕೆಟ್ ನಷ್ಟವಿಲ್ಲದೆ 43 ರನ್‌ನಿಂದ 2ನೇ ಇನಿಂಗ್ಸ್ ಮುಂದುವರಿಸಿದ ಭಾರತ, ಮಂದಬೆಳಕಿನಿಂದಾಗಿ ದಿನದಾಟ ಸ್ವಲ್ಪ ಬೇಗನೆ ಮುಕ್ತಾಯಗೊಂಡಾಗ 3 ವಿಕೆಟ್‌ಗೆ 270 ರನ್ ಗಳಿಸಿದೆ. ಮೊದಲ ಇನಿಂಗ್ಸ್‌ನ 99 ರನ್ ಹಿನ್ನಡೆ ಚುಕ್ತಗೊಳಿಸಿರುವ ಭಾರತ, ಸದ್ಯ 171 ರನ್ ಮುನ್ನಡೆ ಸಾಧಿಸಿದೆ. ನಾಯಕ ವಿರಾಟ್ ಕೊಹ್ಲಿ (22*) ಜತೆಗೆ, ಮತ್ತೊಮ್ಮೆ 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿರುವ ರವೀಂದ್ರ ಜಡೇಜಾ (9*) ಕ್ರೀಸ್‌ನಲ್ಲಿದ್ದಾರೆ.

    ಅರ್ಧಶತಕ ವಂಚಿತ ರಾಹುಲ್
    ರೋಹಿತ್ ಶರ್ಮ ಮತ್ತು ಕನ್ನಡಿಗ ಕೆಎಲ್ ರಾಹುಲ್ ಬೆಳಗ್ಗೆ ಕ್ರಮವಾಗಿ 20 ಮತ್ತು 22 ರನ್‌ಗಳಿಂದ ದಿನದಾಟ ಆರಂಭಿಸಿದರು. ರೋಹಿತ್ ಜತೆಗೆ ಎಚ್ಚರಿಕೆಯ ಆಟವಾಡಿದ ರಾಹುಲ್ ಹಿಂದಿನ ದಿನದ ಜತೆಯಾಟಕ್ಕೆ ಮತ್ತೆ 40 ರನ್ ಸೇರಿಸಿ ಒಟ್ಟು 83 ರನ್ ಜತೆಯಾಟವಾಡಿ ಬೇರ್ಪಟ್ಟರು. ಆಂಡರ್‌ಸನ್‌ಗೆ ವಿಕೆಟ್ ಒಪ್ಪಿಸಿದ ರಾಹುಲ್ (46ರನ್, 101 ಎಸೆತ, 6 ಬೌಂಡರಿ, 1 ಸಿಕ್ಸರ್) 4 ರನ್‌ನಿಂದ ಅರ್ಧಶಕವಂಚಿತರಾದರು.

    ರೋಹಿತ್-ಪೂಜಾರ ಭರ್ಜರಿ ಜತೆಯಾಟ
    ಭೋಜನ ವಿರಾಮಕ್ಕೆ ಮೊದಲೇ ಜತೆಗೂಡಿದ ರೋಹಿತ್ ಶರ್ಮ ಮತ್ತು ಚೇತೇಶ್ವರ ಪೂಜಾರ ಜೋಡಿ ಚಹಾ ವಿರಾಮಕ್ಕೆ ಮೊದಲಿನ ಅವಧಿ ಪೂರ್ತಿ ತಾಳ್ಮೆ ಮಿಶ್ರತ ಆಕ್ರಮಣಕಾರಿ ಆಟದೊಂದಿಗೆ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿತು. ತಾಳ್ಮೆಯ ಅರ್ಧಶತಕ ಗಳಿಸಿದ ರೋಹಿತ್ ಬಳಿಕ ಆಕ್ರಮಣಕಾರಿ ಆಟಕ್ಕಿಳಿದರೆ, ಪೂಜಾರ ಅವಕಾಶ ಸಿಕ್ಕಾಗಲೆಲ್ಲ ರನ್ ಗಳಿಸಿದರು. 2ನೇ ವಿಕೆಟ್‌ಗೆ ಪೂಜಾರ-ರೋಹಿತ್ ಜೋಡಿ ಸುಮಾರು 47 ಓವರ್ ಎದುರಿಸಿ 153 ರನ್ ಕಲೆಹಾಕಿತು. ಕೊನೆಗೆ ರೋಹಿತ್ ವೇಗಿ ರಾಬಿನ್‌ಸನ್ ಎಸೆತದಲ್ಲಿ ವೋಕ್ಸ್‌ಗೆ ಕ್ಯಾಚ್ ನೀಡಿ ಔಟಾದರೆ, ಪೂಜಾರ ಅದೇ ಓವರ್‌ನ ಕೊನೇ ಎಸೆತದಲ್ಲಿ ಮೊಯಿನ್ ಅಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

    ಒಲಿಂಪಿಯನ್ ದ್ಯುತಿ ಚಂದ್ ಮಾನಹಾನಿ ಸುದ್ದಿ ಪ್ರಕಟ, ವೆಬ್‌ಸೈಟ್ ಸಂಪಾದಕ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts