More

    ಇತಿಹಾಸ ಪ್ರಜ್ಞೆಗೆ ಅಧ್ಯಯನ ಅಗತ್ಯ: ಹರಿಹರ ಶಾಸಕ ರಾಮಪ್ಪ ಹೇಳಿಕೆ

    ದಾವಣಗೆರೆ: ಕುರುಬ ಸಮಾಜದ ಈಗಿನ ಪೀಳಿಗೆಗೆ ಇತಿಹಾಸ ಪ್ರಜ್ಞೆ ಮೂಡಿಸಲು ಗ್ರಂಥಗಳ ಅಧ್ಯಯನ ಅಗತ್ಯವಿದೆ ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.

    ಕುರುಬರ ಸಾಂಸ್ಕೃತಿಕ ಪರಿಷತ್ತು ಹಾಗೂ ಜಿಲ್ಲಾ ಕುರುಬ ಸಮಾಜದ ಎಲ್ಲ ಸಂಘಟನೆಗಳ ಸಹಯೋಗದಲ್ಲಿ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಯ 13 ಗ್ರಂಥಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

    ಕುರುಬ ಸಮಾಜದ ಅನೇಕ ಜನರಿಗೆ ಇತಿಹಾಸವೇ ತಿಳಿದಿಲ್ಲ. ಹನ್ನೆರಡು ವರ್ಷ ಬಳಿಕ ಹೊರ ತಂದ 13 ಗ್ರಂಥಗಳನ್ನು ಪ್ರತಿಯೊಬ್ಬರೂ ಓದಬೇಕು. ಸಮಾಜದ ಮೃದುತ್ವ ಹಾಗೂ ಸಾಧನೆಯನ್ನು ಮಕ್ಕಳಿಗೂ ವಿವರಿಸಬೇಕೆಂದು ತಿಳಿಸಿದರು.

    ಕಾಳಿದಾಸ, ಕನಕದಾಸ ಹಾಗೂ ಸಂಗೊಳ್ಳಿ ರಾಯಣ್ಣ ಮೊದಲಾದ ಮಹನೀಯರು ಎಲ್ಲ ಸಮಾಜದವರನ್ನು ಎಚ್ಚರಿಸಿದ್ದಾರೆ, ಮಾರ್ಗದರ್ಶನ ನೀಡಿದ್ದಾರೆ ಎಂದರು.

    ಜಾನಪದ ತಜ್ಞ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿ, ಎಲ್ಲ ತಳಸಮುದಾಯಗಳು ತಮ್ಮ ಕುಲದ ಚರಿತ್ರೆಯನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇಂದಿದೆ. ಜಾಗತೀಕರಣದ ಸಂದರ್ಭದಲ್ಲಿ ಕುಲ ಚಿಹ್ನೆಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

    ಕಂಬಳಿ ಎಂಬುದು ತುಪ್ಪಳದ ವಸ್ತು ಮಾತ್ರವಲ್ಲ. ಸಾಂಸ್ಕೃತಿಕ ಗುರುತು. ದಾವಣಗೆರೆಯಲ್ಲಿ ತಯಾರಾಗುತ್ತಿದ್ದ ಉತ್ಕೃಷ್ಟ ಕಂಬಳಿ ಈಸ್ಟ್ ಇಂಡಿಯಾ ಕಂಪನಿಗೂ ರವಾನೆಯಾಗುತ್ತಿತ್ತು ಎಂಬುದಾಗಿ 200 ವರ್ಷದ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಪ್ರಾನ್ಸಿಸ್ ಬುಕನನ್ ವಿವರಿಸಿದ್ದಾನೆ. ನಮ್ಮ ಸಾಂಸ್ಕೃತಿಕ ಬೇರನ್ನು ಗುರುತಿಸಿಕೊಳ್ಳಬೇಕಿದೆ ಎಂದರು.

    ಯೋಜನಾ ನಿರ್ದೇಶಕ ಕಾ.ತ.ಚಿಕ್ಕಣ್ಣ ಮಾತನಾಡಿ, 15 ಸಂಪುಟದಡಿ ಪುಸ್ತಕಗಳ ಬಿಡುಗಡೆಗೆ ಯೋಜಿಸಲಾಗಿತ್ತು. ಈಗ 10 ಸಂಪುಟದಡಿ, 6440 ಪುಟಗಳುಳ್ಳ 13 ಗ್ರಂಥ ಹೊರತರಲಾಗಿದೆ. ಇವು ಕುರುಬ ಸಮಾಜಕ್ಕೆ ಮೀಸಲಾಗಿಲ್ಲ. ಪಶುಪಾಲನೆ ಅವಲಂಬಿತ ಸಮಾಜಗಳಿಗೆ ಪೂರಕವಾಗಿವೆ. ಇನ್ನು ಐದು ಪುಸ್ತಕ ಮುದ್ರಣವಾಗಿವೆ. ಇನ್ನೂ 11 ಸಿದ್ಧವಾಗಿವೆ. ಶೀಘ್ರವೇ ಉಳಿದವನ್ನೂ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

    ನಿವೃತ್ತ ಪ್ರಾಧ್ಯಾಪಕ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಕುರುಬ ಸಮಾಜ ಬೆವರಿನ ಶ್ರಮವುಳ್ಳದ್ದು, ಬಹುಮುಖಿಯಾದುದು. ಜಾಗತೀಕರಣದ ನೆಲೆಯಲ್ಲಿ ನಮ್ಮ ಮೂಲ ನೆಲೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಜಾತಿ ಹೇಳಿಕೊಳ್ಳಲಾಗದ ಕೀಳರಿಮೆ ಸ್ಥಿತಿಯಲ್ಲಿದ್ದೇವೆ ಎಂದು ವಿಷಾದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts