ಹಿರಿಯೂರು: ಬುಡಕಟ್ಟು ಸಂಸ್ಕೃತಿಯ ಪ್ರತೀಕವಾಗಿರುವ ತಾಲೂಕಿನ ಯರಬಳ್ಳಿ ದೊಡ್ಡಗೊಲ್ಲರಹಟ್ಟಿ ಹಾಲುಕುಡದಪ್ಪ ಸ್ವಾಮಿ, ಕಾಟಮಲಿಂಗೇಶ್ವರ, ಗಾದ್ರಿ ದೇವರು ಹಾಗೂ ಸಿಂಪಣ್ಣ ದೇಗುಲ ಶಂಕುಸ್ಥಾಪನೆ ಫೆ.5ರಂದು ನೆರವೇರಲಿದೆ.
ದೇಗುಲದ ಶಂಕಸ್ಥಾಪನೆಯನ್ನು ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ನೆರವೇರಿಸಲಿದ್ದು, ಶಾಸಕಿ ಕೆ.ಪೂರ್ಣಿಮಾ, ಹೈಕೋರ್ಟ್ ನ್ಯಾಯಮೂರ್ತಿ ಸುನೀಲ್‌ದತ್ ಯಾದವ್, ಎಂಎಲ್ಸಿ ಜಯಮ್ಮ ಬಾಲರಾಜ್, ಗೊಲ್ಲ ಸಂಘದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್, ಮಾಜಿ ಶಾಸಕ ಎ.ವಿ.ಉಮಾಪತಿ, ಜಿಪಂ ಸಿಇಒ ಸಿ.ಸತ್ಯಭಾಮಾ, ತಹಸೀಲ್ದಾರ್ ಸತ್ಯನಾರಾಯಣ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನದ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.