More

    ಏ.20ರ ನಂತರ ಲಾಕ್‌ಡೌನ್ ಮಿತಿ ಸಡಿಲ

    ಹಿರಿಯೂರು: ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಏ.20ರ ನಂತರ ಜನಸಾಮಾನ್ಯರ ಅನುಕೂಲಕ್ಕೆ ಲಾಕ್‌ಡೌನ್‌ನಲ್ಲಿ ಕೆಲ ವಿನಾಯಿತಿ ನೀಡಲಾಗುವುದು ಎಂದು ವಿಭಾಗೀಯ ಅಧಿಕಾರಿ ಪ್ರಸನ್ನಕುಮಾರ್ ತಿಳಿಸಿದರು.

    ನಗರದಲ್ಲಿ ಶುಕ್ರವಾರ ತಾಲೂಕು ಆಡಳಿತ ಆಯೋಜಿಸಿದ್ದ ಸಭೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದರು.

    ಕಿರಾಣಿ ಅಂಗಡಿ, ಕೃಷಿ ಸಲಕರಣೆ ಮಾರಾಟ, ಗ್ಯಾರೇಜ್, ಆಟೋಮೊಬೈಲ್, ತರಕಾರಿ ಹೂ-ಹಣ್ಣು ಮಾರಾಟಕ್ಕೆ ಅವಕಾಶವಿದ್ದು, ವರ್ತಕರು ಮತ್ತು ಗ್ರಾಹಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.

    ತಹಸೀಲ್ದಾರ್ ಸತ್ಯನಾರಾಯಣ ಮಾತನಾಡಿ, ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮುಕ್ತವಾಗಿ ಮಾರಲು ರೈತರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

    ಸಿಪಿಐ ರಾಘವೇಂದ್ರ ಮಾತನಾಡಿ, ಜನ ಸಾಮಾನ್ಯರು-ರೈತರಿಗೆ ಕೆಲ ವಿನಾಯಿತಿ ನೀಡಲಾಗಿದೆ. ಅನಗತ್ಯವಾಗಿ ಬೈಕ್‌ನಲ್ಲಿ ಓಡಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ನಗರಸಭೆ ಆಯುಕ್ತ ಶಿವಪ್ರಸಾದ್, ಎಪಿಎಂಸಿ ಕಾರ್ಯದರ್ಶಿ ಶ್ರೀನಿವಾಸ್, ವರ್ತಕರ ಸಂಘದ ಜಯಕುಮಾರ್, ಅನಿಲ್ ಕುಮಾರ್, ಎ. ರಾಘವೇಂದ್ರ, ಕಾಂತಿಲಾಲ್, ಧನರಾಜ್, ಚೇತನ್ ಬಾಬು, ರಿತೇಶ್, ನಾರಾಣಚಾರ್, ಅಜೀಜ್, ಸುರೇಶ್, ಕೇಶವಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts