More

    ವಿದೇಶಿ ವ್ಯಾಮೋಹ ಕೈಬಿಡಿ

    ಹಿರಿಯೂರು: ನಮ್ಮ ದೇಶ ಆಧ್ಯಾತ್ಮಿಕ, ಸಾಂಸ್ಕೃತಿಕವಾಗಿ ಸಂಪತ್ಭರಿತವಾಗಿದ್ದು, ಪ್ರತಿಯೊಬ್ಬರು ಮಣ್ಣಿನ ಋಣ ತೀರಿಸಲು ತಮ್ಮ ಜೀವನವನ್ನು ಮುಡುಪಾಗಿಡಬೇಕು ಎಂದು ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

    ನಗರದಲ್ಲಿ ಶುಕ್ರವಾರ ಮಣಿಪಾಲ್ ಆಸ್ಪತ್ರೆಯ ವಿಶೇಷ ಹೊರ ರೋಗಿ ಸಲಹಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ದೇಶದ ಪ್ರತಿಭಾವಂತ ಯುವ ಸಮೂಹಕ್ಕೆ ಸೂಕ್ತ ಮಾರ್ಗದರ್ಶನ, ಅವಕಾಶ ಕಲ್ಪಿಸಿಕೊಟ್ಟರೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಲಿದೆ. ವಿದೇಶಿ ವ್ಯಾಮೋಹ ಬಿಟ್ಟು ದೇಶಕ್ಕೆ ಏನಾದರು ಕೊಡುಗೆ ನೀಡಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.

    ತಾಲೂಕಿನ ಆಲೂರು ಗ್ರಾಮದ ಡಾ.ಹರ್ಷವರ್ಧನ್ ನಿಜಕ್ಕೂ ಒಬ್ಬ ಗ್ರಾಮೀಣ ಪ್ರತಿಭೆ. ವಿದೇಶದಲ್ಲಿ ಉನ್ನತ ಸ್ಥಾನಮಾನ ಸಿಕ್ಕರೂ ಇಲ್ಲಿನ ಜನರ ಸೇವೆ ಮಾಡಲು ಆಸ್ಪತ್ರೆ ತೆರೆದಿರುವುದು ಈ ನೆಲದ ಮೇಲಿನ ಪ್ರೀತಿ ಹಾಗೂ ಅಭಿಮಾನ ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಪ್ರಮೋದ್ ಕುಂದರ್ ಮಾತನಾಡಿ, ಗ್ರಾಮೀಣ ಜನರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳು ಸಿಗುವಂತಾಗಬೇಕು ಎಂಬ ದೃಷ್ಟಿಯಿಂದ ಹೊರ ರೋಗಿಗಳ ಕೇಂದ್ರ ಆರಂಭಿಸಲಾಗಿದೆ ಎಂದರು.

    ವೈದ್ಯರ ಸಂಘದ ತಾಲೂಕು ಅಧ್ಯಕ್ಷ ಡಾ.ವಿಶ್ವನಾಥಯ್ಯ, ಜಿಪಂ ಮಾಜಿ ಅಧ್ಯಕ್ಷ ಬಿ.ಎಸ್.ರಘುನಾಥ್, ಸಿಪಿಐ ಚನ್ನೇಗೌಡ, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹಲಿಂಗಪ್ಪ, ಡಾ.ಸಿದ್ಧಾರ್ಥ್, ಡಾ.ಹರೀಶ್, ಆಲೂರು ಹನುಮಂತರಾಯಪ್ಪ, ಬಾಬುರೆಡ್ಡಿ, ಆರ್.ವಂಸತ್ ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts