More

    ಶಿವಾಜಿ ಭೂಸುಧಾರಣೆ ಕಾನೂನು ಜನಕ

    ಹಿರಿಯೂರು: ಭೂಸುಧಾರಣೆ ಕಾನೂನು ಜಾರಿಗೆ ತಂದ ಮೊದಲ ದೊರೆ ಛತ್ರಪತಿ ಶಿವಾಜಿ ಮಹಾರಾಜರು ಎಂದು ಪ್ರಾಚಾರ್ಯ ಡಾ.ಡಿ.ಧರಣೇಂದ್ರಯ್ಯ ಹೇಳಿದರು.

    ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತದಿಂದ ತಾಲೂಕು ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಶಿವಾಜಿ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದರು.

    ಮೊಘಲರು ಮತ್ತು ಆದಿಲ್‌ಶಾಹಿಗಳ ಕಾಲದಲ್ಲಿ ಜಾರಿಯಲ್ಲಿದ್ದ ಜಹಗೀರದಾರ ವ್ಯವಸ್ಥೆ ಕೊನೆ ಗೊಳಿಸಿ ಭೂಸುಧಾರಣೆ ಜಾರಿಗೊಳಿಸಿದ್ದು ಶಿವಾಜಿ ಎಂದರು.

    ಉಪನ್ಯಾಸಕ ರಾಮಕೃಷ್ಣ ಮಾತನಾಡಿ, 15ನೇ ಶತಮಾನದಲ್ಲಿ ಮೊಘಲರ ಆಕ್ರಮಣ, ಸುಲ್ತಾನರ ದುರಾಡಳಿತದಿಂದ ಹಿಂದು ಧರ್ಮ ಅವನತಿಯತ್ತ ಸಾಗಿತ್ತು. ಆ ಸಂದರ್ಭದಲ್ಲಿ ಹಿಂದು ಧರ್ಮವನ್ನು ಉಳಿಸಿ ಬೆಳೆಸಿದ ಮಹಾನ್ ದೇಶಭಕ್ತ ಶಿವಾಜಿ ಎಂದು ಹೇಳಿದರು.

    ಸತಾಪಂ ಅಧ್ಯಕ್ಷೆ ಲಕ್ಷ್ಮಿದೇವಿ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಜಿಪಂ ಸದಸ್ಯೆ ಸಿ.ಬಿ.ಪಾಪಣ್ಣ, ಗ್ರೇಡ್ 2 ತಹಸೀಲ್ದಾರ್ ಚಂದ್ರಕುಮಾರ್, ನಗರಸಭೆ ಸದಸ್ಯ ಎಂ.ಡಿ.ಸಣ್ಣಪ್ಪ, ಮುಖಂಡರಾದ ಎಸ್.ನಾರಾಯಣ ರಾವ್ ಜಾಧವ್, ಎಸ್.ಮಾರುತಿ ರಾವ್ ಜಾಧವ್, ನರಸಿಂಗರಾವ್, ಶಾಂತಕುಮಾರ್, ಚಂದ್ರಕುಮಾರ್, ವಿಶ್ವನಾಥ್, ಎಂ.ರವೀಂದ್ರನಾಥ್, ಕಿರಣ್ ಮಿರಜ್ಕರ್, ಶಶಿಧರ್, ಅಶ್ವತ್ಥಾಮ, ಶ್ರೀನಿವಾಸ್ ರೆಡ್ಡಿ, ಎಚ್.ಜಿ.ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts