More

    ಎಲ್ಲ ವರ್ಗದ ಜನರಿಂದ ಅಭಿಪ್ರಾಯ ಸಂಗ್ರಹ

    ಶಿವಮೊಗ್ಗ: ಈಗಾಗಲೇ ಜಾರಿಗೊಳಿಸಿರುವ ವಿವಿಧ ಯೋಜನೆ ಸುಧಾರಿಸಲು ಹಾಗೂ ಹೊಸ ಯೋಜನೆಗಳನ್ನು ಜಾರಿಗೊಳಿಸಲು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಪತ್ರ ಸಂಕಲ್ಪ ಯೋಜನೆಗೆ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಚಾಲನೆ ದೊರೆಯಿತು.

    ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ, ಕೂಲಿ ಕಾರ್ಮಿಕರಿಂದ ಆರಂಭವಾಗಿ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವವರಿಂದಲೂ ಅಭಿಪ್ರಾಯ ಸಂಗ್ರಹಿಸಲಾಗುವುದು. ಪಕ್ಷದ ಡಿಜಿಟಲ್ ಮೀಡಿಯಾ ವಿಭಾಗ ಇದರ ನಿರ್ವಹಣೆ ಮಾಡಲಿದೆ ಎಂದರು.
    ಕಳೆದ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ ಶೇ.99 ಭರವಸೆಗಳನ್ನು ಜಾರಿಗೊಳಿಸಲಾಗಿದೆ. 2047ಕ್ಕೆ ವಿಕಸಿತ ಭಾರತದ ಆಶಯ ಈಡೇರಬೇಕೆಂಬ ಉದ್ದೇಶದಿಂದ ಸಂಕಲ್ಪಪತ್ರ ಅಭಿಯಾನ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ.
    ಸರ್ಕಾರದ ಒಳ್ಳೆಯ ಹಾಗೂ ಕೆಟ್ಟ ಅಂಶಗಳನ್ನೂ ಇಲ್ಲಿ ದಾಖಲಿಸಬಹುದು. ಲಿಖಿತವಾಗಿ ಸಲಹೆ ನೀಡಬಹುದು. ಇಲ್ಲವೇ ಮೊ. 9090902024ಕ್ಕೆ ಮಿಸ್ಡ್‌ಕಾಲ್ ನೀಡಿದರೂ ಪಕ್ಷದಿಂದಲೇ ಕರೆ ಮಾಡಿ ಅಭಿಪ್ರಾಯ ಕೇಳಲಾಗುತ್ತದೆ. ಜನರು ಇಲ್ಲಿ ದಾಖಲಿಸುವ ಅಭಿಪ್ರಾಯಗಳನ್ನು ಜಾರಿಗೊಳಿಸುವಲ್ಲಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.
    ಡಿಜಿಟಲ್ ಇಂಡಿಯಾದಿಂದ ಬಹಳಷ್ಟು ಬದಲಾವಣೆಯಾಗಿದೆ. ಜನೌಷಧ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಗರೀಬ್ ಕಲ್ಯಾಣ ಯೋಜನೆ ಬಹಳಷ್ಟು ಜನಪ್ರಿಯಗೊಂಡಿದೆ. ವಿಶ್ವದಲ್ಲೇ ಭಾರತ ಪ್ರಬಲ ಆರ್ಥಿಕಶಕ್ತಿಯಾಗಿ ಹೊರಹೊಮ್ಮಿದೆ ಎಂದರು.
    ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಅಭಿಯಾನದ ಜಿಲ್ಲಾ ಸಂಚಾಲಕ ಬಾಳೆಬೈಲು ರಾಘವೇಂದ್ರ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts