More

    ವಿವಿ ಸಾಗರ ಅಚ್ಚುಕಟ್ಟು ರೈತರ ಹಿತ ಕಾಪಾಡಿ

    ಹಿರಿಯೂರು: ಜೀವನಾಡಿ ವಿವಿ ಸಾಗರ ಜಲಾಶಯದ ಎಡ-ಬಲ ದಂಡೆ ನಾಲೆ ಆಧುನೀಕರಣ ಜತೆಗೆ ಅಚ್ಚುಕಟ್ಟು ಪ್ರದೇಶದ ರೈತರ ಹಿತಕಾಯಬೇಕು ಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೀರಾವರಿ ತಜ್ಞರು-ರೈತ ಮುಖಂಡರ ಸಭೆಯಲ್ಲಿ ನಾಲೆಗಳ ಆಧುನೀಕರಣ ಕುರಿತು ಸಭೆಯಲ್ಲಿ ಮಾತನಾಡಿದರು.

    ಶತಮಾನದ ಇತಿಹಾಸವಿರುವ ಜಲಾಶಯದ ನಾಲೆಗಳ ಆಧುನೀಕರಣ ಸ್ವಾಗತಾರ್ಹ. ನೀರು ಸರಬರಾಜು, ನಿರ್ವಹಣೆಯಲ್ಲಿ ಯಾವುದೇ ಕಾರಣಕ್ಕೂ ಖಾಸಗಿಯವರ ಪಾಲುಗಾರಿಕೆ ಇರಬಾರದು. ನೀರಾವರಿ ಸಹಕಾರ ಸಂಘಗಳ ಮೂಲಕ ನೀರಿನ ಹಂಚಿಕೆ ಸಮರ್ಪಕವಾಗಿ ಆಗಬೇಕು ಎಂದು ಮನವಿ ಮಾಡಿದರು.

    ನೀರಾವರಿ ಹೋರಾಟ ಸಮಿತಿ ಸಂಚಾಲಕ ಆರನಕಟ್ಟೆ ಶಿವಕುಮಾರ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಿವಿ ಸಾಗರ ಜಲಾಶಯಕ್ಕೆ ಹಂಚಿಕೆ ಮಾಡಿರುವ ನೀರು- ಬಳಕೆಯ ಪ್ರಮಾಣಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ವೈಜ್ಞಾನಿಕವಾಗಿ ನೀರಿನ ಹಂಚಿಕೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

    ನೀರಾವರಿ ತಜ್ಞರ ಸಮಿತಿ ಮುಖ್ಯಸ್ಥ ಶಿವಕುಮಾರ್ ಮಾತನಾಡಿ, ನಾಲೆಗಳ ಆಧುನೀಕರಣ ಮಾಡುವುದರಿಂದ ನೀರಿನ ಉಳಿತಾಯ, ಮಣ್ಣಿನ ಸವಕಳಿ, ಮಾನವ ಶ್ರಮ ಕಡಿಮೆಯಾಗುತ್ತದೆ. ಪ್ರಕೃತಿ ನಮಗೆ ಕೊಟ್ಟಿರುವ ಅಮೂಲ್ಯ ಸಂಪತ್ತು ನೀರನ್ನು ಮಿತವಾಗಿ ಮತ್ತು ಅವಶ್ಯಕತೆಗೆ ತಕ್ಕಂತೆ ಬಳಸುವುದರಿಂದ ಅಂತರ್ಜಲ ಸಂರಕ್ಷಣೆ ಮಾಡಬಹುದು ಎಂದು ಹೇಳಿದರು.

    ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ, ರೈತ ಮುಖಂಡರಾದ ಸಿದ್ದರಾಮಣ್ಣ, ಆರ್. ಕೆ.ಗೌಡ, ಮಂಜುನಾಥ ಮಾಳಿಗೆ, ಶ್ರೀನಿವಾಸ್, ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ತಾಲೂಕಾಧ್ಯಕ್ಷ ಶಿವಕುಮಾರ್, ಕೆ.ಟಿ. ತಿಪ್ಪೇಸ್ವಾಮಿ, ಮೂರ್ತಿ, ಎಂ.ಎಂ. ಮಣಿ, ಸಹಾಯಕ ಇಂಜನಿಯರ್ ನಿಜ್ಜೇಗೌಡ, ರಾಮಚಂದರ, ಜಯಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts