More

    ವ್ಯಕ್ತಿತ್ವ ವಿಕಸನಕ್ಕೆ ಮೌಲ್ಯಯುತ ಶಿಕ್ಷಣ

    ಹಿರಿಯೂರು: ದೇಶದ ಪ್ರತಿ ಪ್ರಜೆಗೂ ಮೌಲ್ಯಯುತ ಶಿಕ್ಷಣ ತಲುಪಿದಾಗ ಮಾತ್ರ ಎಲ್ಲರ ಬದುಕು ಹಸನಾಗುತ್ತದೆ ಎಂದು ಡಾ.ಡಿ.ಧರಣೇಂದ್ರಯ್ಯ ಹೇಳಿದರು.

    ನೆಹರು ಯುವ ಕೇಂದ್ರ, ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾಸಂಘದಿಂದ ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿಷಯಾಧಾರಿತ ಶಿಕ್ಷಣ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಶತಮಾನಗಳಿಂದ ದಲಿತರು, ಹಿಂದುಳಿದ ಮತ್ತು ಮಹಿಳೆಯರು ಅಕ್ಷರದಿಂದ ವಂಚಿತರಾಗಿದ್ದು, ಸಂವಿಧಾನದ ಮೂಲಕ ಸಮಾನ ಶಿಕ್ಷಣದ ಅವಕಾಶ ಕಲ್ಪಿಸಿದರು. ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಶ್ರಮದಿಂದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನಾಂದಿಯಾಯಿತು ಎಂದರು.

    ಉಪನ್ಯಾಸಕ ಎಸ್.ಕಾಂತರಾಜ್ ಮಾತನಾಡಿ, ನಿರುದ್ಯೋಗ ಸಮಸ್ಯೆ, ಹಸಿವು, ಬಡತನ ನಿರ್ಮೂಲನೆಗೆ ಕೇಂದ್ರ ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದೆ. ಉದ್ಯೋಗ ಖಾತ್ರಿ, ಪ್ರಧಾನ ಮಂತ್ರಿ ಕೌಶಲ ಯೋಜನೆ, ಎಸ್‌ಜಿಎಸ್, ಪ್ರೇರಣಾ, ಐರಾವತ, ಸ್ವಯಂ ಉದ್ಯೋಗ ಯೋಜನೆ ಜನರಿಗೆ ಪೂರಕವಾಗಿವೆ ಎಂದು ಹೇಳಿದರು.

    ಚಿತ್ರದುರ್ಗದ ವೆಂಕಟೇಶ್ವರ ಬಿ.ಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಇ.ಭೈರಸಿದ್ದಪ್ಪ, ವಕೀಲರ ಸಂಘದ ತಾಲೂಕು ಜಂಟಿ ಕಾರ್ಯದರ್ಶಿ ಕೆ.ರಾಜಪ್ಪ ಮಾತನಾಡಿದರು.

    ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ, ದೈಹಿಕ ಶಿಕ್ಷಣ ನಿರ್ದೇಶಕ ಎಚ್.ತಿಪ್ಪೇಸ್ವಾಮಿ, ಉಪನ್ಯಾಸಕರಾದ ಡಾ.ಎಸ್.ಮಾರುತಿ ಡಾ. ಎಸ್.ಡಿ.ಪೂರ್ಣಿಮಾ, ಗೌಡ, ಎಲ್.ಕಾಮರಾಜ್, ಎನ್.ನಾಗಲಕ್ಷ್ಮಿ, ಎನ್.ಉಮಾದೇವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts