More

    ಬೆಳೆ ನಷ್ಟದ ಮಾಹಿತಿ ಸರ್ಕಾರಕ್ಕೆ ಸಲ್ಲಿಸಿ

    ಕವಿತಾಳ: ತೋರಣದಿನ್ನಿ ಭಾಗದ ಗ್ರಾಮಗಳಲ್ಲಿ ರೈತರ ಭತ್ತದ ಬೆಳೆ ಮಳೆಗೆ ಹಾನಿಯಾಗಿದ್ದು, ಸರ್ಕಾರದಿಂದ ಪರಿಹಾರವನ್ನು ಕೊಡಿಸಲಾಗುವುದು ಎಂದು ಶಾಸಕ ಬಸನಗೌಡ ತುರ್ವಿಹಾಳ ಹೇಳಿದರು.

    ರೈತರಿಗೆ ಸರ್ಕಾರದಿಂದ ಬೆಳೆ ಪರಿಹಾರ

    ಸಮೀಪದ ಮಲ್ಕಪೂರದ ರೈತರೊಬ್ಬರ ಭತ್ತವು ನೆಲಕಚ್ಚಿದ ಭತ್ತದ ಗದ್ದೆ ಪರಿಶೀಲಿ ಸೋಮವಾರ ಮಾತನಾಡಿದರು. ರೈತರಿಗೆ ಪರಿಹಾರ ನೀಡಲು ಸಲುವಾಗಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಲಾಗಿದೆ. ಅಧಿಕಾರಿಗಳು ನಷ್ಟವಾದ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದರು.

    ಇದನ್ನೂ ಓದಿ: ವಿಶ್ವ ಕ್ರಿಕೆಟ್​ನಲ್ಲಿ ರೋಹಿತ್​ರಂತಹ ಆಟಗಾರ ಇನ್ನೊಬ್ಬನಿಲ್ಲ! ಈ ತಾಕತ್ತಿರೋದು ಹಿಟ್​ಮ್ಯಾನ್​ಗೆ ಮಾತ್ರ

    ತೋರಣದಿನ್ನಿ, ಮಲ್ಕಪೂರ, ನಾಗಪ್ಪ ಕ್ಯಾಂಪ್, ಶಂಕರನಗರ ಕ್ಯಾಂಪ್ ಸೇರಿದಂತೆ ರೈತರ ಭೂಮಿಗೆ ತೆರಳಿ ಹಾನಿಯಾದ ಭತ್ತವವನ್ನು ವೀಕ್ಷಿಸಿದ ಶಾಸಕ ಬಸನಗೌಡ, ತಹಸೀಲ್ದಾರ್ ಸುಧಾ ಅರಮನೆ ಮತ್ತು ಸಹಾಯಕ ಕೃಷಿ ನಿರ್ದೇಶಕ ಹುಸೇನಸಾಬ್ ಅವರಿಗೆ ನಷ್ಟವಾದ ಬೆಳೆಯ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದರು.
    ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಗ್ರಾಪಂ ಅಧ್ಯಕ್ಷ ಉಮಾಪತಿ ನಾಯಕ, ಗ್ರಾಪಂ ಉಪಾಧ್ಯಕ್ಷ ಹನುಮೇಶ ನಾಯಕ, ಮಾಜಿ ಗ್ರಾಪಂ ಅಧ್ಯಕ್ಷ ಬಸವರಾಜ ಬಸವಣ್ಣ ಕ್ಯಾಂಪ್, ಪ್ರಮುಖರಾದ ಸೂರ್ಯಪ್ರಕಾಶ ತಾತ, ಯಮನೂರ, ಹುಚ್ಚರಡ್ಡಿ, ಬಸವರಾಜ ಬಾದರ್ಲಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts