More

    ಸಾಂಸ್ಕೃತಿಕ ಚಟುವಟಿಕೆಯಿಂದ ಉಲ್ಲಾಸ

    ಅಳವಂಡಿ: ಸಾಂಸ್ಕೃತಿಕ ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸವಾಗಲಿದೆ. ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಇರಕಲಗಡಾದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಪ್ರಾಚಾರ್ಯೆ ಡಾ.ಕೆ.ಪುಷ್ಪಲತಾ ಹೇಳಿದರು.

    ಸರ್ವತೋಮುಖ ಬೆಳವಣಿಗೆಗೆ ಸಹಕಾರಿ

    ಸಮೀಪದ ಹಿರೇಸಿಂದೋಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೊಪ್ಪಳ ತಾಲೂಕಿನ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.

    ಇದನ್ನೂ ಓದಿ: ಆನೆದಂತ, ಶ್ರೀಗಂಧ, ರಕ್ತಚಂದನ ಸೇರಿ 3 ಕೋಟಿ ಮೌಲ್ಯದ ವಸ್ತುಗಳ ಅಕ್ರಮ ಸಂಗ್ರಹ; ಇಬ್ಬರು ಅರೆಸ್ಟ್​

    ನೂರಕ್ಕೆ ನೂರು ಅಂಕ ಪಡೆದರೂ ವಿದ್ಯಾರ್ಥಿಗಳು ಪರಿಪೂರ್ಣವಾಗಲು ಸಾಧ್ಯವಿಲ್ಲ. ಪಠ್ಯದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಕ್ರೀಡೆ ದೇಹವನ್ನು ಸದೃಢವಾಗಿರಲು ಸಹಾಯ ಮಾಡುತ್ತದೆ. ಸಾಂಸ್ಕೃತಿಕ ಚಟುವಟಿಕೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ ಎಂದರು.
    ಉಪನ್ಯಾಸಕ ವೀರಶೇಖರ ಪತ್ತಾರ ಮಾತನಾಡಿ, ಭಾರತ ಭವ್ಯ ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿದೆ. ದೇಶಕ್ಕೆ ಸಂಸ್ಕೃತಿ ಹಾಗೂ ಚರಿತ್ರೆ ಇದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ನೃತ್ಯ, ನಾಟಕ, ಜಾನಪದ ಕ್ಷೇತ್ರದಲ್ಲಿ ಶ್ರೀಮಂತ ಇರುವುದರಿಂದ ಜಗತ್ತೇ ಭಾರತವನ್ನು ತಿರುಗಿ ನೋಡುವಂತಾಗಿದೆ.ದೇಶಪ್ರೇಮ, ಕರುಣೆ, ಮಾನವೀಯ ಮೌಲ್ಯಗಳು ಭಾರತದ ಭವಿಷ್ಯವನ್ನು ರೂಪಿಸುತ್ತಿವೆ ಎಂದರು.

    ಪ್ರಾಚಾರ್ಯ ಹನುಮಂತಪ್ಪ ಅಂಡಗಿ, ಪ್ರಮುಖರಾದ ನಿಂಗಪ್ಪ ಯತ್ನಟ್ಟಿ, ವೆಂಕಣ್ಣ ಕೊಳ್ಳಿ, ಸದಾಶಿವರಡ್ಡಿ ಮಾದಿನೂರ, ಪ್ರಭುಗೌಡ ಮೈನಳ್ಳಿ, ಚನ್ನಗೌಡ, ನಿವೇದಿತಾ, ನಾಗರತ್ನ, ಮಹೇಶ್ವರಿ, ರಸೂಲ ಬೀ, ಶರಣಮ್ಮ, ಮಂಜುಳಾ, ಲಲಿತಾ, ಹನುಮಪ್ಪ, ರಾಮಣ್ಣ, ಸುಭಾಷ ರಡ್ಡಿ, ಶಿವಪುತ್ರಪ್ಪ, ಮರುಳಸಿದ್ದಯ್ಯ, ಶರಣಪ್ಪ, ಈರಮ್ಮ, ವಾಸುದೇವ, ವಿಶಾಲಾಕ್ಷಿ, ಶರಣಪ್ಪ, ಪತ್ರಪ್ಪ, ಬಸವರಾಜ, ಎಸ್.ವಿ.ಮೆಳ್ಳಿ, ಡಾ.ಸಿದ್ದಲಿಂಗಪ್ಪ, ಸುದೀಂದ್ರ, ಚಂದ್ರಶೇಖರ, ಎಚ್.ಎಸ್.ಬಾರಕೇರ, ಲಲಿತಾ, ಎಚ್.ಮಹಾನಂದಿ, ದೇವಪ್ಪ, ಆಂಜನೇಯ, ಮಲ್ಲಪ್ಪ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts