More

    ದೀಪದ ಬೆಳಕಿನಿಂದ ಮನೆ-ಮನಗಳಲ್ಲಿ ಉಲ್ಲಾಸ – ಶಿವಾಚಾರ್ಯ ಸ್ವಾಮೀಜಿ

    ಹುಕ್ಕೇರಿ: ಮನೆ-ಮನಗಳ ಉಲ್ಲಾಸಕ್ಕೆ ದೀಪ ಬೆಳಕು ಅವಶ್ಯ. ಎಲ್ಲರಲ್ಲೂ ಸಂಭ್ರಮ ತರುವ ಕಾರ್ತಿಕ ಮಾಸದಲ್ಲಿ ದೀಪೋತ್ಸವವನ್ನು ಆಚರಿಸುತ್ತಾರೆ ಎಂದು ಸ್ಥಳೀಯ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

    ಪಟ್ಟಣದಲ್ಲಿ ಸೋಮವಾರ ಕರೆಮ್ಮ ದೇವಿ ಮತ್ತು ದುರ್ಗಾ ಪರಮೇಶ್ವರಿ, ಅಷ್ಟ ವಿನಾಯಕ ದೇವಸ್ಥಾನದ 15ನೇ ವರ್ಷದ ಕಾರ್ತಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಹಿರಿಯರು ಮಾಸಕ್ಕನುಗುಣವಾಗಿ ಹಬ್ಬ ಹರಿದಿನ, ಆಹಾರ-ವಿಹಾರ ಪದ್ಧತಿ ಆಚರಿಸುತ್ತ ಬಂದವರು.

    ಕೆಲವರು ಮೂಢನಂಬಿಕೆ ಅವುಗಳನ್ನು ಎಂದು ಪ್ರತಿಪಾದಿಸುತ್ತಾರೆ. ಆದರೆ, ವೈಜ್ಞಾನಿಕ ತಳಹದಿಯ ನಂಬಿಕೆ ಇದಾಗಿದೆ. ಕಾರ್ತಿಕ ಮಾಸ ಎಲ್ಲರ ಬಾಳಿನಲ್ಲಿ ಸಂತಸ ತರಲಿ ಎಂದರು. ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಪ್ರಾಮಾಣಿಕ ಕರ್ತವ್ಯ, ಶ್ರದ್ಧೆಯೇ ದೈವತ್ವ. ನಮ್ಮ ಮಾನಸಿಕ ನೆಮ್ಮದಿ ಹಾಗೂ ಗುರು ಹಿರಿಯರನ್ನು ಗೌರವಿಸುವ ನಿಟ್ಟಿನಲ್ಲಿ ಪೂರ್ವಜರು ಕೆಲವೊಂದು ಕಟ್ಟುಪಾಡುಗಳನ್ನು ನಿಯಮಿಸಿದ್ದಾರೆ. ಹಬ್ಬ, ಹರಿದಿನಗಳ ಆಚರಣೆ ಮತ್ತು ಪಾಲನೆಯಿಂದ ಸಾಮಾಜಿಕ ಸ್ವಾಸ್ಥ್ಯ ಸಾಧ್ಯ ಎಂದರು.

    ವಿವೇಕಾನಂದ, ಮಹಾವೀರ ಮತ್ತು ಜಯನಗರ ನಿವಾಸಿಗಳಲ್ಲಿ ನಿವೃತ್ತ ಹಾಗೂ ಪದೋನ್ನತಿ ಹೊಂದಿದ ನೌಕರರನ್ನು ಸತ್ಕರಿಸಿದರು. ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಸದಸ್ಯ ಸದಾಶಿವ ಕರೆಪ್ಪಗೋಳ, ತಹಸೀಲ್ದಾರ್ ಅಶೋಕ ಗುರಾಣಿ, ಎ.ಎಂ.ಅಲಾಸೆ, ಅಣ್ಣಪ್ಪ ಕಮತೆ, ವಿನಾಯಕ ರಜಪೂತ, ಉದಯ ಬಸ್ತವಾಡೆ, ಎಂ.ಬಿ.ಬಿಲ್, ಬಾಬು ಬೆನಿವಾಡೆ ಇತರರು ಉಪಸ್ಥಿತರಿದ್ದರು. ಗೀತಾ ಬಸ್ತವಾಡೆ ಸ್ವಾಗತಿಸಿ, ನಿರೂಪಿಸಿದರು. ಸುರೇಶ ಜಿನರಾಳೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts