More

    ಅಂತರಂಗದ ಕಾವ್ಯ ಅರ್ಥಪೂರ್ಣ

    ಚಿಕ್ಕಮಗಳೂರು: ಅಂತರಂಗದಿಂದ ಹೊಮ್ಮಿದ ಭಾವ ಉತ್ತಮ ಕಾವ್ಯವಾಗುತ್ತದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

    ಹಿರೇಮಗಳೂರಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಅಳಸಿಂಗ್ ಪೆರಮಾಳ್ ವೇದಿಕೆ ಮತ್ತು ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ‘ಅಯೋಧ್ಯೆಯಲ್ಲಿ ರಾಮಮಂದಿರ ಹೃದಯದಲ್ಲಿ ರಾಮಚಂದಿರ’ ಕುರಿತ ಜಿಲ್ಲಾ ಮಟ್ಟದ ಆಹ್ವಾನಿತ ಕವಿಗೋಷ್ಠಿಯಲ್ಲಿ ಮಾತನಾಡಿದರು.

    ರಾಷ್ಟ್ರಕ್ಕೆ ಸಂಬಂಧಿಸಿ ಜಾತ್ಯತೀತವಾಗಿ ಒಂದು ಆಯಾಮಕ್ಕೆ ಒಳಪಟ್ಟ ವಿಶೇಷ ಕವಿಗೋಷ್ಠಿಯಿದು. ಕವನ ಕಟ್ಟುವುದಲ್ಲ ಹುಟ್ಟುವುದು ಎಂದರು.

    ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಜನಪದರ ದೈನಂದಿನ ಬದುಕಿನಲ್ಲಿ ರಾಮ-ಸೀತೆ ಸಹಜವಾಗಿ ಹಾಸುಹೊಕ್ಕಾಗಿದ್ದಾರೆ. ‘ದಶರಥನ ಕಂದ, ರಾವಣನ ಕೊಂದ, ಸೀತೆಯ ತಂದ’ ಎಂಬ ಮೂರು ಸಾಲಿನ ಮಜ್ಜಿಗೆ ರಾಮಾಯಣ ಕಥೆ ಹಳ್ಳಿಗಳಲ್ಲಿ ಜನಜನಿತವಾಗಿದೆ ಎಂದರು.

    ಜಿಲ್ಲಾ ಸಂಯೋಜಕ ಪ್ರಭುಲಿಂಗ ಶಾಸ್ತ್ರಿ ಮಾತನಾಡಿ, ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಪೂರಕವಾಗಿ ರಾಜ್ಯವ್ಯಾಪಿ ಕವಿಗೋಷ್ಠಿ ನಡೆಯುತ್ತಿದೆ. ರಾಮನ ಕಲ್ಯಾಣ ಗುಣಗಳು, ತತ್ವಾದರ್ಶಗಳು ವೈವಿಧ್ಯಮಯ ಸಾಹಿತ್ಯವಾಗಿ ಹೊರಮ್ಮಬೇಕೆಂಬ ಆಶಯವಿದೆ. ರಾಮಾಯಣ ಮತ್ತು ಮಹಾಭಾರತ ಕಾವ್ಯಗಳು ರಾಷ್ಟ್ರದ ಅಸ್ಮಿತೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts