More

    ಹಿರೇಮರಳಿ ಗ್ರಾಮಸ್ಥರ ಪ್ರತಿಭಟನೆ

    ಪಾಂಡವಪುರ: ಪಟ್ಟಣ ಮಧ್ಯ ಭಾಗದಲ್ಲಿ ಹರಿಯುವ ವಿಶ್ವೇಶ್ವರಯ್ಯ ನಾಲಾ ಒಡಲಿಗೆ ಶೌಚಗೃಹ, ಚರಂಡಿ ನೀರು ಸೇರಿ ಅಶುದ್ಧಗೊಳ್ಳುತ್ತಿರುವ ಪರಿಣಾಮ ನಾಲೆಯ ಕೆಳಭಾಗದ ಜನರ ಬಳಕೆಗೆ ಶುದ್ಧ ನೀರು ಸಿಗುತ್ತಿಲ್ಲ ಎಂದು ಆರೋಪಿಸಿ ಹಿರೇಮರಳಿ ಗ್ರಾಮಸ್ಥರು ಕಾವೇರಿ ನೀರಾವರಿ ನಿಗಮದ ಕಚೇರಿ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

    ನೀರಾವರಿ ನಿಗಮದ ಕಚೇರಿ ಮುಂದೆ ಜಮಾವಣೆಗೊಂಡ ಪ್ರತಿಭಟನಾಕಾರರು ಇಲಾಖೆಯ ಎಇಇ ಜಯರಾಮಯ್ಯ ಹಾಗೂ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಅವರಿಗೆ ಮನವಿ ಸಲ್ಲಿಸಿ, ಕೂಡಲೇ ಕ್ರಮ ವಹಿಸುವಂತೆ ಆಗ್ರಹಿಸಿದರು.

    ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಪಟ್ಟಣದ ಶಾಂತಿನಗರ, ಕೃಷ್ಣಾನಗರ, ಮಹಾತ್ಮಗಾಂಧಿ ನಗರದ ಬಡಾವಣೆಗಳ ನಿವಾಸಿಗಳು ಬಳಕೆ ಮಾಡಿ ಹೊರ ಬಿಡುವ ಮಲಿನ ನೀರು ನಾಲೆಗೆ ಸೇರುತ್ತಿದೆ. ಇದರಿಂದಾಗಿ ನಾಲೆಯ ಕೆಳಭಾಗದ ಜನರಿಗೆ ಅಶುದ್ಧಗೊಂಡು ಬಳಕೆಗೆ ಯೋಗ್ಯವಲ್ಲದಾಗಿದೆ. ಬೇಸಿಗೆ ಕಾಲವಾಗಿದ್ದು, ಮಲಿನ ನೀರಿನಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡಬಹುದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

    ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿದ್ದು, ಇದರ ಜತೆಯಲ್ಲಿ ಚರಂಡಿ ನೀರು ನಾಲೆಯನ್ನು ದಾಟಲು ಪೈಪ್‌ಲೈನ್ ಅಳವಡಿಕೆ ಮಾಡಬೇಕು. ಮಲಿನ ನೀರನ್ನು ಪಟ್ಟಣದ ಹೊರವಲಯದಲ್ಲಿ ಶೇಖರಿಸಿ ಇಂಗಿಸಲು ಕ್ರಮ ವಹಿಸಬೇಕು ಎಂದರು.

    ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಸದಸ್ಯ ಶಿವಕುಮಾರ್, ಶ್ರೀನಿವಾಸ್ ನಾಯಕ, ಎನ್.ಭಾಸ್ಕರ್, ಹಿರೇಮರಳಿ ಶೀನಪ್ಪ, ದೊರೆಸ್ವಾಮಿ, ದೇವೇಗೌಡನಕೊಪ್ಪಲು ಸ್ವಾಮೀಗೌಡ, ಕನಗನಮರಡಿ ನಾಗರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts