More

    ಮುರಾರ್ಜಿ ಶಾಲೆಯಲ್ಲಿಲ್ಲ ನೀರು

    ಕವಿತಾಳ: ವಟಗಲ್ ಮುರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ನೀರಿಗಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಕುಡಿಯಲು ಹಾಗೂ ಬಟ್ಟೆ ತೊಳೆಯಲು, ಸ್ನಾನ ಮಾಡಲು ನೀರಿಲ್ಲದೆ ತೊಂದರೆ ಎದುರಿಸುವಂತಾಗಿದೆ.

    ಸ್ನಾನ ಮಾಡಲು ನೀರಿಲ್ಲದೆ ತೊಂದರೆ

    ಶಾಲೆಯಲ್ಲಿ ನೀರಿಲ್ಲದಿರುವುದರಿಂದ ವಿದ್ಯಾರ್ಥಿಗಳು ಬಯಲಿನಲ್ಲಿ ಬಹಿರ್ದೆಸೆಗೆ ಹೋಗುವಂತಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಕಾಡು ಪ್ರಾಣಿಗಳ ಭೀತಿಯಲ್ಲೇ ವಿದ್ಯಾರ್ಥಿಗಳು ಬಯಲು ಬಹಿರ್ದೆಸೆಗೆ ತೆರಳುತ್ತಿದ್ದಾರೆ. ವಸತಿ ಶಾಲೆಗೆ ಸಮೀಪದಲ್ಲೇ ಕೆರೆ ಹಾಗೂ ಗುಡ್ಡ ಇದೆ. ಕಾಡು ಹಂದಿ, ತೋಳ ಸೇರಿ ವಿವಿಧ ಪ್ರಾಣಿಗಳು ಇವೆ. ಇಷ್ಟೆಲ್ಲಾ ನೀರಿನ ಸಮಸ್ಯೆ ಇದ್ದರೂ ಅಧಿಕಾರಿಗಳು ನಿವಾರಿಸುವಲ್ಲಿ ವಿಫಲರಾಗಿದ್ದಾರೆ. ವಿದ್ಯಾರ್ಥಿಗಳಿಗೆ ತೊಂದರೆ ಎದುರಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮುರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ ಪರಿಹರಿಸಬೇಕು ಎಂದು ಗ್ರಾಮದ ಕರಿಯಪ್ಪ ಎಚ್., ಲಕ್ಷ್ಮಿಪತಿ, ಭೀಮಣ್ಣ ನಾಯಕ, ಬಸವರಾಜಪ್ಪ ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳ ಜತೆ ಡೀಲಿಂಗ್​ ಮಾಡುವ ಆಂಬ್ಯುಲೆನ್ಸ್ ಡ್ರೈವರ್​ಗಳಿಗೆ ಡಿಕೆಶಿ ವಾರ್ನಿಂಗ್​

    ವಸತಿ ಶಾಲೆಯಲ್ಲಿ ನೀರಿನ ಸಮಸ್ಯೆ ಕುರಿತು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಈ ಮೊದಲು ಕೊಳವೆಬಾವಿಯಿಂದ ನೀರು ಪೊರೈಸಲಾಗುತ್ತಿತ್ತು. ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿರುವುದರಿಂದ, ಬಾಡಿಗೆ ಕೊಳವೆಬಾವಿ ಮೂಲಕ ನೀರು ಪಡೆಯಲು ತೀರ್ಮಾನಿಸಲಾಗಿದೆ.
    ಮಹಾಂತೇಶ, ಮುರಾರ್ಜಿ ವಸತಿ ಶಾಲೆ ಪ್ರಾಚಾರ್ಯ, ವಟಗಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts