More

    ಹಿಪ್ಪರಗಿ ಡ್ಯಾಂ ಹಿನ್ನೀರು ಬಿಡುಗಡೆಗೆ ವಿರೋಧ

    ಅಥಣಿ: ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಹಿಪ್ಪರಗಿ ಡ್ಯಾಂನ ಹಿನ್ನೀರು ಹರಿಸಬಾರದು ಎಂದು ಆಗ್ರಹಿಸಿ ಅಥಣಿ, ಕಾಗವಾಡ, ರಾಯಬಾಗ ತಾಲೂಕಿನ ರೈತರು ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತ ಅರುಣ ಯಲಗುದ್ರಿಗೆ ಗುರುವಾರ ಮನವಿ ಸಲ್ಲಿಸಿದರು.

    ಬೆಳಗಾವಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಹಿಪ್ಪರಗಿ ಬ್ಯಾರೇಜ್‌ನಿಂದ ಚಿಕ್ಕಪಡಸಲಗಿ ಬ್ಯಾರೇಜ್‌ಗೆ 0.3 ಟಿಎಂಸಿ ನೀರು ಹರಿಬಿಡುವಂತೆ ಏ. 8ರಂದು ಸ್ಥಳೀಯ ನೀರಾವರಿ ಇಲಾಖೆಗೆ ಪತ್ರ ಬರೆದು ಆದೇಶಿಸಿದ್ದಾರೆ. ಆದ್ದರಿಂದ ಈ ಭಾಗದ ರೈತರಿಗೆ ಆತಂಕ ಶುರುವಾಗಿದೆ. ಕಳೆದ ಬಾರಿ ನೀರು ಬಿಟ್ಟ ಪರಿಣಾಮ ರೈತರ ಲಕ್ಷಾಂತರ ಎಕರೆ ಕಬ್ಬು ನಾಶವಾಗಿದೆ. ಪರಿಸ್ಥಿತಿ ಮತ್ತೆ ಅದೇ ರೀತಿ ಮುಂದುವರಿಯುವುದು ಬೇಡ. ಆದೇಶವನ್ನು ತಕ್ಷಣ ರದ್ದು ಮಾಡಬೇಕು ಎಂದು ರೈತರು ಆಗ್ರಹಿಸಿದರು. ರೈತರು ಸಾಲ ಮಾಡಿಕೊಂಡು ಕೃಷಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಮೊದಲು ಈ ಭಾಗದ ರೈತರಿಗೆ ಬೇಕಾದ ಅಗತ್ಯ ಪ್ರಮಾಣದ ನೀರನ್ನು ಸಂಗ್ರಹಿಸುವ ಕಾರ್ಯವಾಗಲಿ. ನಂತರ ನೀರನ್ನು ಬಿಡಲಿ. ಅಲ್ಲಿಯವರೆಗೆ ನೀರು ಬಿಡಬೇಡಿ. ಒಂದು ವೇಳೆ ನೀರು ಬಿಟ್ಟರೆ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ರೈತರ ಮನವಿ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತ ಅರುಣ ಯಲಗುದ್ರಿ ತಿಳಿಸಿದರು. ಸಹಾಯಕ ಅಭಿಯಂತ ಪ್ರವೀಣ ಹುಣಶೀಕಟ್ಟಿ, ನಟರಾಜ, ಶ್ರೀಶೈಲ ನಾರಗೊಂಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಅವಕ್ಕನವರ, ಕೃಷ್ಣಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಜಿ.ಎಂ. ತೆವರಮನಿ, ಮುಖಂಡರಾದ ಸಂಜೀವ ನಾಡಗೌಡ, ಅಮರ ದುರ್ಗಣ್ಣವರ, ಸುರೇಶ ವಾಡೇದ, ಆನಂದ ಕುಲಕರ್ಣಿ, ಜಗದೀಶ ದಳವಾಯಿ, ಮಹಾದೇವ ಚೌಗಲಾ, ತಮ್ಮಣ್ಣ ತೇಲಿ, ಅಣ್ಣಾಸಾಬ ನಾಯಿಕ, ಕುಮಾರ ಪಾಟೀಲ, ಬಸಗೌಡ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts