More

    ಧಾರವಾಡದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ಇಂದಿನಿಂದ

    ಧಾರವಾಡ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ನಗರದ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಜು. 22, 23 ಹಾಗೂ 24ರಂದು ಹಿಂದುಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಾಗಾರ ಏರ್ಪಡಿಸಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ ಹೇಳಿದರು.
    ನಗರದ ರಂಗಾಯಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಾಗಾರದಲ್ಲಿ 15 ರಿಂದ 40 ವರ್ಷದೊಳಗಿನ 100 ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
    ಅಕಾಡೆಮಿ ಸದಸ್ಯ ಸಂಚಾಲಕ ವೀರಣ್ಣ ಪತ್ತಾರ ಸಂಚಾಲಕತ್ವದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 22ರಂದು ಬೆಳಗ್ಗೆ 9 ಗಂಟೆಗೆ ಖ್ಯಾತ ಹಿಂದುಸ್ತಾನಿ ಗಾಯಕ ಡಾ. ಎಂ. ವೆಂಕಟೇಶಕುಮಾರ ಉದ್ಘಾಟಿಸುವರು. ಅಕಾಡೆಮಿ ಅಧ್ಯಕ್ಷ ವಿದ್ವಾನ್ ಆನೂರು ಅನಂತ ಕೃಷ್ಣಶರ್ಮ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶಾಸಕ ಅರವಿಂದ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಇತರರು ಭಾಗವಹಿಸುವರು ಎಂದರು.
    23ರಂದು ಹಿಂದುಸ್ತಾನಿ ಸಂಗೀತದಲ್ಲಿ ಧ್ವನಿ ಸಂಸ್ಕರಣೆಯ ಪ್ರಾಮುಖ್ಯತೆ ಕುರಿತು ಪಂ.ಕೈವಲ್ಯಕುಮಾರ ಗುರವ, ರಾಗ ಪ್ರಸ್ತುತೀಕರಣ ಕುರಿತು ಡಾ. ಶಕ್ತಿ ಪಾಟೀಲ ಹಾಗೂ ಗಾಯನ ಪ್ರದರ್ಶನದ ಮಹತ್ವ ಹಾಗೂ ಪ್ರಾಯೋಗಿಕ ಆಯಾಮಗಳು ಕುರಿತು ಪಂ.ಕುಮಾರ ಮರಡೂರ ತರಬೇತಿ ನೀಡಲಿದ್ದಾರೆ. ಜು. 24ರಂದು ಮಧ್ಯಾಹ್ನ 12.30 ಗಂಟೆಗೆ ಸಮಾರೋಪ ಸಮಾರಂಭ ಜರುಗುವುದು ಎಂದರು.
    ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯ ಸಂಚಾಲಕ ವೀರಣ್ಣ ಪತ್ತಾರ, ಹೇಮಾ ವಾಘ್ಮೂೕಡೆ, ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಎಂ.ಎಂ ಚಿಕ್ಕಮಠ, ಪ್ರಕಾಶ ಬಾಳಿಕಾಯಿ, ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts