More

    ಪಾಕಿಸ್ತಾನದ ಹಿಂದುಗಳಿಗೆ ಪೌರತ್ವ ನೀಡಬೇಕು ಎಂದಿದ್ದ ಮೊದಲ ಪ್ರಧಾನಿ, ಹಾಗಾದರೆ ನೆಹರು ಕೋಮುವಾದಿಯೇ?: ಸಂಸತ್​ನಲ್ಲಿ ಪ್ರಧಾನಿ ಮೋದಿ

    ನವದೆಹಲಿ: ದೇಶ ವಿಭಜನೆಯ ನಂತರ ಹಿಂದು ನಿರಾಶ್ರಿತರು ಮತ್ತು ಮುಸ್ಲಿಂ ವಲಸಿಗರ ನಡುವಿನ ವ್ಯತ್ಯಾಸವನ್ನು ಪಂಡಿತ್ ಜವಾಹರಲಾಲ್ ನೆಹರು ಸ್ಪಷ್ಟವಾಗಿ ತೋರಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಸಂಸತ್​ನಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಪ್ರಧಾನಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಳ್ಳುತ್ತ, ಭಾರತದ ಮೊದಲ ಪ್ರಧಾನಿ ನೆಹರು ಅಸ್ಸಾಂನ ಮುಖ್ಯಮಂತ್ರಿ ಗೋಪಿನಾಥ್​ ಬರ್ದೊಲೊಯಿ ಅವರಿಗೆ ಬರೆದ ಪತ್ರದ ಬಗ್ಗೆ ಉಲ್ಲೇಖಿಸಿದರು.

    ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆಗೆ ಕರೆ ನೀಡಿದ 1950ರ ನೆಹರು-ಲಿಯಾಕತ್ ಒಪ್ಪಂದವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಈ ಪತ್ರದಲ್ಲಿ ನೆಹರು ಅವರು ಪಾಕಿಸ್ತಾನದ ಅಲ್ಪಸಂಖ್ಯಾತರ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಹಾಗಾದರೆ, ನೆಹರು ಕೋಮುವಾದಿಯೇ ಎಂದು ಮೋದಿ ಪ್ರಶ್ನಿಸಿದರು.

    ಜೋಗೇಂದ್ರನಾಥ್​ ಮಂಡಲ್​​ ಅವರು ಪಾಕಿಸ್ತಾನದ ಮೊದಲ ಕಾನೂನು ಸಚಿವರಾಗಿದ್ದರು. ಅವರೂ ಪಾಕಿಸ್ತಾನದಲ್ಲಿ ಹಿಂದುಗಳ ಒತ್ತಡ ಮತ್ತು ಕಿರುಕುಳ ಬಗ್ಗೆ ದೂರಿದ್ದಾರೆ ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಹೇಳಿದರು.

    ಅಲ್ಲದೆ ನೆಹರು ಅವರು ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡುವಾಗ ಪಾಕಿಸ್ತಾನದಿಂದ ಬರುವ ಮುಸ್ಲಿಮರಿಗೆ ಭಾರತದ ಪೌರತ್ವ ನೀಡಬೇಕು ಎಂದು ಹೇಳಿದ್ದರು ಎಂದು ಸಂಸತ್​ಗೆ ತಿಳಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts