More

    ರಸ್ತೆ ಅಪಘಾತ- ಹಿಮಾಚಲ ರಾಜ್ಯಪಾಲ ಬಂಡಾರು ದತ್ತಾತ್ರೇಯ ಪಾರು

    ಹೈದರಾಬಾದ್​: ರಸ್ತೆ ಅಪಘಾತ ಒಂದರಲ್ಲಿ ಹಿಮಾಚಲ ಪ್ರದೇಶದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಅದೃಷ್ಟವಶಾತ್ ಯಾವುದೇ ಗಂಭೀರ ಹಾನಿ ಇಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

    ಪ್ರಾಥಮಿಕ ಮಾಹಿತಿ ಪ್ರಕಾರ, ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಸಂಚರಿಸುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 65 (ಹೈದರಾಬಾದ್​- ವಿಜಯವಾಡ)ರಲ್ಲಿ ಚೌಟುಪ್ಪಾಲ ಎಂಬಲ್ಲಿ ಇಂದು ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಹೈದರಾಬಾದ್​ನಿಂದ ನಲಗೊಂಡ ಜಿಲ್ಲೆಯಲ್ಲಿ ಆಯೋಜಿಸಲ್ಪಟ್ಟಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಹೋಗುತ್ತಿದ್ದಾಗ ದುರಂತವಾಗಿದೆ.

    ಇದನ್ನೂ ಓದಿ: ‘ಸಾರ್ವಜನಿಕ ಹಿತ’ ಮರೆತ್ರು ಕೋಡಿಹಳ್ಳಿ: ಫ್ರೀಡಂ ಪಾರ್ಕಿಗೆ ಹೋದ ಕೂಡಲೇ ಸಚಿವರು ಬರಲಿ ಇಲ್ಲಿಗೆ ಅಂದ್ರು..

    ಕಾರು ಚಾಲಕ ಸಡನ್​ ಆಗಿ ಎಡಕ್ಕೆ ಸ್ಟೀಯರಿಂಗ್ ತಿರುಗಿಸಿದ ಕಾರಣ ನಿಯಂತ್ರಣ ತಪ್ಪಿದ ಕಾರು ರಸ್ತೆ ಬಿಟ್ಟು ಕೆಳಕ್ಕೆ ಹಾರಿತ್ತು. ಯಾರಿಗೂ ಏನೂ ಆಗಿರಲಿಲ್ಲ. ಕೂಡಲೇ ಇನ್ನೊಂದು ಕಾರಿನಲ್ಲಿ ಪ್ರಯಾಣಿಸಿದ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ.. 

    ಕಿವಿಯೋಲೆ ಹುಡುಕಿಕೊಟ್ರೆ ಬಹುಮಾನ ಕೊಡ್ತಾರಂತೆ ಜೂಹಿ ಚಾವ್ಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts