More

    ಭಾರೀ ಮಳೆಗೆ ಹಿಮಾಚಲ ಪ್ರದೇಶ ತತ್ತರ: ಡ್ರೋನ್​ ಕ್ಯಾಮೆರಾದಲ್ಲಿ ಪ್ರವಾಹದ ಭಯಾನಕ ದೃಶ್ಯಗಳು ಸೆರೆ!

    ಶಿಮ್ಲಾ: ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಉಂಟಾಗಿರುವ ಭೀಕರ ಪ್ರವಾಹಕ್ಕೆ ಹಿಮಾಚಲ ಪ್ರದೇಶದ ಬಹುತೇಕ ಭಾಗ ತತ್ತರಿಸಿ ಹೋಗಿದ್ದು, ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. ಉತ್ತರಾಖಂಡ, ಪಂಜಾಬ್​, ಜಮ್ಮು ಮತ್ತು ಕಾಶ್ಮೀರ ಹಾಗೂ ದೆಹಲಿ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಮಳೆರಾಯ ಅಬ್ಬರಿಸಿ, ಬೊಬ್ಬಿರಿಯುತ್ತಿದ್ದಾನೆ. ಭೂಕುಸಿತಗಳು ಮತ್ತು ಪ್ರವಾಹದಿಂದಾಗಿ ರಸ್ತೆಗಳು ಕುಸಿಯುತ್ತಿವೆ. ವಾಹನಗಳು ಕೊಚ್ಚಿ ಹೋಗುತ್ತಿವೆ ಮತ್ತು ಮನೆಗಳು ಕುಸಿದು ಬೀಳುತ್ತಿವೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಇದರ ನಡುವೆ ಡ್ರೋನ್​ ಕ್ಯಾಮೆರಾದಲ್ಲಿ ಸೆರೆಹಿಡಿದ ವಿಡಿಯೋವೊಂದು ಪ್ರವಾಹದ ಭಯಾನಕತೆಯನ್ನು ಜನರ ಕಣ್ಣ ಮುಂದೆ ತೆರೆದಿಟ್ಟಿದೆ. ವಿಡಿಯೋದಲ್ಲಿ ಕುಲು-ಮನಾಲಿಯ ರಾಷ್ಟ್ರೀಯ ಹೆದ್ದರಿಯು ಭಾರೀ ಮಳೆಯ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಇದಲ್ಲದೆ, ವಾಹನಗಳು ಪ್ರವಾಹದ ನಡುವೆ ಸಿಲುಕಿದ್ದು, ಆ ವಲಯದಲ್ಲಿ ಜನರ ಸಹಜ ಜೀವನಕ್ಕೆ ಅಡ್ಡಿಯಾಗಿದೆ.

    ಇದನ್ನೂ ಓದಿ: ಪತಿ ದುಡಿಮೆಯಲ್ಲಿ ಸರ್ಕಾರಿ ಕೆಲ್ಸ ಗಿಟ್ಟಿಸಿ ದಾಂಪತ್ಯ ದ್ರೋಹ ಆರೋಪ​: ಜ್ಯೋತಿ ಲವರ್​ಗೆ ತನಿಖಾ ವರದಿಯ ಆಘಾತ

    ಮನಾಲಿ ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪಂಡೋಹ್​​ (ಮಂಡಿ) ಡ್ಯಾಮ್​ನಿಂದ ಇಂದು ಸಂಜೆ 6 ಗಂಟೆಯಿಂದ ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ನೀರನ್ನು ಬಿಡುಗಡೆ ಮಾಡಲಾಗುತ್ತದೆ. ನದಿ ತೀರ ಪ್ರದೇಶಗಳು ಮತ್ತು ತಗ್ಗು ಪ್ರದೇಶಗಳಿಗೆ ತೆರಳದಂತೆ ನುರ್ಪೂರ್​ ಠಾಣಾ ಪೊಲೀಸರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ನಾಲ್ಕು ರಾಜ್ಯಗಳಲ್ಲಿ ಎನ್​ಡಿಆರ್​ಎಫ್​ ತಂಡ ನಿಯೋಜನೆ

    ಒಟ್ಟು 39 ಎನ್​ಡಿಆರ್​ಎಫ್​ ತಂಡಗಳನ್ನು ಪ್ರವಾಹ ಪೀಡಿತ ನಾಲ್ಕು ರಾಜ್ಯಗಳಲ್ಲಿ ನಿಯೋಜಿಸಲಾಗಿದೆ. ಪಂಜಾಬ್​ನಲ್ಲಿ 14, ಹಿಮಾಚಲ ಪ್ರದೇಶದಲ್ಲಿ 12, ಉತ್ತರಾಖಂಡದಲ್ಲಿ 8 ಮತ್ತು ಹರಿಯಾಣದಲ್ಲಿ 5 ಎನ್​ಡಿಆರ್​ಎಫ್​ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

    ಇದನ್ನೂ ಓದಿ: ಶಾಪಿಂಗ್​ಗೆಂದು ಅಪರಿಚಿತ ವಕೀಲನ ಬಳಿ 1 ಲಕ್ಷ ರೂ. ಕೇಳಿದ ಜೋಡಿ: ಪ್ರಶ್ನಿಸಿದ್ದಕ್ಕೆ ರಾಡ್​ನಿಂದ ಹಲ್ಲೆ

    ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದ ಪ್ರಧಾನಿ

    ಉತ್ತರ ಭಾರತದಲ್ಲಿ ಧಾರಾಕಾರ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸೋಮವಾರ ಹಿರಿಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ, ಪ್ರವಾಹ ಪರಿಸ್ಥಿತಿಯ ಮಾಹಿತಿಯನ್ನು ಪಡೆದಿದ್ದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)

    ಮಾನ್ಸೂನ್ ಸಮಯದಲ್ಲಿ ಫಿಟ್ ಆಗಿರಲು 5 ಸಲಹೆಗಳು ಇಂತಿವೆ…

    ಡಬಲ್ ಮರ್ಡರ್​ ಮಾಡಿ ಸುದ್ದಿಯನ್ನೇ ಸ್ಟೇಟಸ್​ನಲ್ಲಿ ಶೇರ್​ ಮಾಡಿದ ಜೋಕರ್ ಫೆಲಿಕ್ಸ್!

    ಮಹಿಳೆಯ ಹೊಟ್ಟೆ ಸ್ಕ್ಯಾನ್​ ಮಾಡಿದಾಗ ವೈದ್ಯರಿಗೆ ಕಾದಿತ್ತು ಶಾಕ್! ಪತ್ತೆಯಾಯ್ತು 11.5 ಕೆ.ಜಿ. ಗಡ್ಡೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts