More

    ದೇವರಮನೆ ಗುಡ್ಡದಲ್ಲೀಗ ಕುರಂಜಿ ಹೂವಿನ ಘಮ

    ಮೂಡಿಗೆರೆ: ಮಲೆನಾಡಲ್ಲಿ ಈಗ ಕಾಫಿ, ಏಲಕ್ಕಿ, ಕಾಳುಮೆಣಸು, ಬಾಳೆ, ಭತ್ತ ವಿವಿಧ ಬೆಳೆಗಳ ಘಮ ಹರಡಿದೆ. ಇದರ ಜತೆಗೆ ಆರು ವರ್ಷಕ್ಕೊಮ್ಮೆ ಅರಳುವ ಕುರಂಜಿ ಹೂವಿನ ಪರಿಮಳಕ್ಕೆ ಸ್ಥಳೀಯರಷ್ಟೇ ಅಲ್ಲ ಪ್ರವಾಸಿಗರೂ ಮನಸೋಲುತ್ತಿದ್ದಾರೆ.

    ಮೂಡಿಗೆರೆ ತಾಲೂಕಿನ ದೇವರಮನೆಯ ಗುಡ್ಡಕ್ಕೆ ತೆರಳುವ ಪ್ರವಾಸಿಗರಿಗೆ ರಸದೌತಣ ಉಣಬಡಿಸುವ ಕುರಂಜಿ ಹೂವಿನ ಪರಿಮಳ ಆಸ್ವಾದಿಸಲು ಪ್ರವಾಸಿಗರು ದಿನಗಟ್ಟಲೆ ಕಾಲ ಕಳೆಯುತ್ತಿದ್ದಾರೆ.

    ಮಲೆನಾಡು ಭಾಗದ ದೇವರಮನೆ, ಚಾರ್ವಡಿ, ಬೈರಾಪುರ, ಮೂಲರಹಳ್ಳಿ, ಗುತ್ತಿಹಳ್ಳಿ ಮತ್ತಿತರೆ ಗಿರಿಶಿಖರದಲ್ಲಿ ಸ್ಟ್ರಬಿಲಾಂತಸ್ ಸಸಿಲಾಯ್್ಡ್ಸ ಎಂಬ ವೈಜ್ಞಾನಿಕ ಹೆಸರಿನ ಕುರಂಜಿ ಗಿಡದಲ್ಲಿ 6 ವರ್ಷಕ್ಕೊಮ್ಮೆ ಹೂಗಳು ಅರಳುತ್ತವೆ. ಇದೇ ಜಾತಿಯ ಸ್ಟ್ರಬಿಲಾಂತಸ್ ಸಸಿಲಾಯ್್ಡ್ಸ ಕುಂತಿಯಾನ ಎಂಬ ವೈಜ್ಞಾನಿಕ ಹೆಸರಿನ ನೀಲಕುರಂಜಿ ಗಿಡದಲ್ಲಿ 12 ವರ್ಷಕ್ಕೊಮ್ಮೆ ಹೂ ಅರಳುತ್ತದೆ. ಈ ಕುರಂಜಿ ಹೂವು ಮಲೆನಾಡು ಭಾಗದಲ್ಲಿ ಬೆಳೆಯುವುದಿಲ್ಲ. ಈ ವರ್ಷ ದೇವರಮನೆಯಲ್ಲಿ ಅರಳಿರುವುದು ಕುರಂಜಿ ಹೂವು.

    ಕುರಂಜಿ ಹೂವಿಗೆ ಗ್ರಾಮೀಣ ಭಾಗದ ಜನರು ಹಾರ್ಲೆ ಹೂ ಎಂಥಲೂ ಕರೆಯುತ್ತಾರೆ. ಅತೀ ಹೆಚ್ಚು ಮಳೆ ಬೀಳುವ ಬೆಟ್ಟಗುಡ್ಡ ಪ್ರದೇಶದಲ್ಲಿ ಈ ಹೂ ಅರಳುತ್ತದೆ. ದೇವರುಮನೆಯಲ್ಲಿರುವ ಕುರಂಜಿ ಹೂವು ಒಮ್ಮೆ ಹೂ ಬಿಟ್ಟು ಉದುರಿದ ಬಳಕ ಮತ್ತೆ 6 ವರ್ಷದವರೆಗೆ ಗಡ್ಡೆ ರೀತಿಯಲ್ಲಿ ಭೂಮಿಯಲ್ಲಿರುತ್ತದೆ. 6 ವರ್ಷದ ಬಳಿಕ ಗಿಡವಾಗಿ ಬೆಳೆದು ಹೂವು ಅರಳುತ್ತದೆ. ಇದೀಗ ಆರು ವರ್ಷಗಳ ನಂತರ ಅರಳಿರುವ ಪುಷ್ಪಗಳು ಇಡೀ ಗುಡ್ಡದ ಸೌಂದರ್ಯ ಹೆಚ್ಚಿಸಿವೆ. ಅಲ್ಲದೆ ಸುಂದರವಾದ ಪುಷ್ಪೋದ್ಯಾನ ನಿರ್ವಣವಾದಂತಾಗಿದೆ.

    ಒಂದು ಗೊಂಚಲಿನಲ್ಲಿ ನೇರಳೆ ಬಣ್ಣದ 4ರಿಂದ 6 ಹೂಗಳು ಅರಳುತ್ತವೆ. ಗುಡ್ಡದ ಕೆಲ ಪ್ರದೇಶದಲ್ಲಿ ಹೂಗಳು ಅರಳಲಾರಂಭಿಸಿವೆ. ಮುಂದಿನ ವರ್ಷ ಗುಡ್ಡವೆಲ್ಲಾ ಹೂವಿನಿಂದ ಕಂಗೊಳಿಸುತ್ತದೆ. ಮೂಡಿಗೆರೆಯಿಂದ ಕೇವಲ 25 ಕಿಮೀ ದೂರದಲ್ಲಿರುವ ದೇವರಮನೆ ಗುಡ್ಡವನ್ನು ವೀಕ್ಷಿಸಲು ಒಮ್ಮೆ ಭೇಟಿ ನೀಡಲೇಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts