More

    “ದಾಖಲೆ ವೇಗದಲ್ಲಿ ಹೈವೇ ಕಾಮಗಾರಿ… ದಿನಕ್ಕೆ 32.85 ಕಿಲೋಮೀಟರ್ ರಸ್ತೆ ನಿರ್ಮಾಣ”

    ನವದೆಹಲಿ: ಈ ಹಣಕಾಸು ವರ್ಷದಲ್ಲಿ ಈವರೆಗೆ 11,035 ಕಿಮೀ ಉದ್ದ ಹೈವೇ ನಿರ್ಮಾಣ ಕಾರ್ಯ ಮುಗಿದಿದ್ದು, ದೇಶದಲ್ಲಿ ದಿನಕ್ಕೆ 32.85 ಕಿಲೋಮೀಟರ್ ಹೈವೇ ನಿರ್ಮಾಣದ ದಾಖಲೆ ದರವನ್ನು ಸಾಧಿಸಲಾಗಿದೆ ಎಂದು ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಮಧ್ಯಮ ಮತ್ತು ಸಣ್ಣ ಕೈಗಾರಿಕೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಕರೊನಾ ಹಿನ್ನೆಲೆಯ ಲಾಕ್​ಡೌನ್​ನಿಂದ 2020ರಲ್ಲಿ ಎರಡು ತಿಂಗಳು ಕಾಮಗಾರಿಗಳು ಸ್ಥಗಿತಗೊಂದ್ದವು. ಆದಾಗ್ಯೂ ಈ ಮಟ್ಟದಲ್ಲಿ ಕಾಮಗಾರಿ ನಡೆದಿರುವುದು ಸಂತೋಷ ತಂದಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

    ತಾವು ಈ ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡಾಗ ಹೈವೇ ನಿರ್ಮಾಣ ದರವು ದಿನಕ್ಕೆ 2 ಕಿಲೋಮೀಟರ್​ನಷ್ಟೇ ಇತ್ತು. ಒಟ್ಟು ರೂ. 3.85 ಲಕ್ಷ ಕೋಟಿಗಳ ಹೂಡಿಕೆಯ ಅಗತ್ಯವಿದ್ದ 406 ನಿಂತುಹೋದ ಕಾಮಗಾರಿಗಳಿದ್ದವು. ಹಲವಾರು ವಿವಾದಗಳ ಪರಿಹಾರ ಮತ್ತು 40 ಸಾವಿರ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಮುಕ್ತಾಯದೊಂದಿಗೆ ರಸ್ತೆ ನಿರ್ಮಾಣಕ್ಕೆ ವೇಗ ನೀಡಲಾಯಿತು ಎಂದು ಗಡ್ಕರಿ ತಿಳಿಸಿದ್ದಾರೆ.

    ಇದನ್ನೂ ಓದಿ: ಕರೊನಾ ಲಸಿಕೆಯ ಮೊದಲ ಡೋಸ್​ ಪಡೆದು ದೇಶದ ಜನತೆಗೆ ಸಂದೇಶ ರವಾನಿಸಿದ ಪ್ರಧಾನಿ ಮೋದಿ

    “2019-20ರ ವರ್ಷದಲ್ಲಿ ಒಟ್ಟು, 8,948 ಕಿಮೀ ರಸ್ತೆ ನಿರ್ಮಾಣ ಯೋಜನೆಗಳನ್ನು ಅನುಮೋದಿಸಲಾಗಿದ್ದು, 10,237 ಕಿ.ಮೀ. ರಸ್ತೆಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ದಿನಕ್ಕೆ 30 ಕಿಮೀ ನಿರ್ಮಾಣ ದರವನ್ನು ಸಾಧಿಸುವುದು ತಮ್ಮ ಗುರಿಯಾಗಿತ್ತು. ಆದರೆ ಈಗಾಗಲೇ 11,035 ಕಿಮೀ ಉದ್ದ ಹೆದ್ದಾರಿ ನಿರ್ಮಾಣಗೊಂಡಿದ್ದು, 32.85 ಕಿಮೀ ನಿರ್ಮಾಣ ದರ ಸಾಧಿಸಿದ ಹಾಗಾಗಿದೆ. ಮಾರ್ಚ್ 31 ರ ವೇಳೆಗೆ 40 ಕಿಮೀ ಹಂತ ತಲುಪುವ ಗುರಿ ಹೊಂದಿದ್ದೇವೆ” ಎಂದು ಸಚಿವರು ವಿವರಿಸಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    “ಮೋದಿಗೆ ತಮಿಳುನಾಡು ಟಿವಿ ಥರ… ರಿಮೋಟ್​ನಿಂದ ಸಿಎಂನ ಕಂಟ್ರೋಲ್ ಮಾಡ್ತಾರೆ !”

    ಕಂಗನಾ ವಿರುದ್ಧ ಬೇಲಬಲ್ ವಾರಂಟ್… ಮಾತೇ ಮುಳುವಾಯಿತೇ ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts