More

    ಸರ್ವೋನ್ನತ ಕ್ರೀಡಾ ಪುರಸ್ಕಾರಕ್ಕೆ ಹಾಕಿ ದಿಗ್ಗಜ ಮೇಜರ್ ಧ್ಯಾನ್​ಚಂದ್​ ಹೆಸರು

    ನವದೆಹಲಿ : ಒಲಿಂಪಿಕ್ಸ್​ನಲ್ಲಿ ಭಾರತದ ಪುರುಷರ ಹಾಕಿ ತಂಡ ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ, ದೇಶದ ಸರ್ವೋನ್ನತ ಕ್ರೀಡಾ ಪುರಸ್ಕಾರಕ್ಕೆ ಹಾಕಿ ದಿಗ್ಗಜ ಮೇಜರ್​ ಧ್ಯಾನ್ ಚಂದ್​ ಹೆಸರಿಡುವ ನಿರ್ಧಾರ ಕೈಗೊಳ್ಳಲಾಗಿದೆ. ಈವರೆಗೆ ರಾಜೀವ್ ಗಾಂಧಿ ಖೇಲ್ ರತ್ನ ಅವಾರ್ಡ್​ ಎಂಬ ಹೆಸರಿದ್ದ ಈ ಪ್ರಶಸ್ತಿಗೆ ಮೇಜರ್​ ಧ್ಯಾನ್​ ಚಂದ್ ಖೇಲ್​ ರತ್ನ ಅವಾರ್ಡ್​ ಎಂದು ಮರುನಾಮಕರಣ ಮಾಡಲಾಗಿದೆ.

    ಈ ನಿರ್ಧಾರವನ್ನು ಟ್ವಿಟರ್​ ಮೂಲಕ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಿಸಿದ್ದು, “ಖೇಲ್ ರತ್ನ ಪ್ರಶಸ್ತಿಗೆ ಮೇಜರ್​ ಧ್ಯಾನ್​ ಚಂದ್​ ಹೆಸರಲ್ಲಿ ಮರುನಾಮಕರಣ ಮಾಡಬೇಕೆಂದು ನನಗೆ ದೇಶದಾದ್ಯಂತದಿಂದ ಹಲವು ಮನವಿಗಳು ಬರುತ್ತಿದ್ದವು. ಅವರ ಅಭಿಪ್ರಾಯಕ್ಕೆ ಧನ್ಯವಾದ. ಅವರ ಭಾವನೆಯನ್ನು ಗೌರವಿಸುತ್ತಾ, ಇನ್ನು ಮುಂದಕ್ಕೆ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್​ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುವುದು” ಎಂದಿದ್ದಾರೆ.

    ಮತ್ತೊಂದು ಟ್ವೀಟ್​ನಲ್ಲಿ, “ಮೇಜರ್​ ಧ್ಯಾನ್​ ಚಂದ್​ ಅವರು ಭಾರತಕ್ಕೆ ಹೆಮ್ಮೆ ಮತ್ತು ಗೌರವ ತಂದ ಮುಂಚೂಣಿ ಕ್ರೀಡಾಪಟುಗಳಲ್ಲಿ ಒಬ್ಬರು. ದೇಶದ ಅತ್ಯುನ್ನತ ಕ್ರೀಡಾ ಗೌರವವನ್ನು ಅವರ ಮೇಲೆ ಹೆಸರಿಸುವುದು ಸೂಕ್ತ ಕಾರ್ಯವಾಗಿದೆ” ಎಂದು ಮೋದಿ ಬರೆದಿದ್ದಾರೆ.

    ಇದನ್ನೂ ಓದಿ: ಸೆಮಿ ಫೈನಲ್ ಪ್ರವೇಶಿಸಿದ ‘ಭಜರಂಗ್’, ಕುಸ್ತಿಯಲ್ಲಿ ಮತ್ತೊಂದು ಪದಕದ ನಿರೀಕ್ಷೆ

    ಕೇಂದ್ರ ಕ್ರೀಡಾ ಸಚಿವರಾದ ಅನುರಾಗ್ ಠಾಕುರ್​, ಈ ನಿರ್ಧಾರವನ್ನು ಸ್ವಾಗತಿಸಿದ್ದು, ಧ್ಯಾನ್​ ಚಂದ್​ ಅವರ ಬದುಕು ಮತ್ತು ಸಾಧನೆಗಳು ಭಾರತಕ್ಕೆ ಕೀರ್ತಿ ತಂದಿರುವ ಹಲವು ಪೀಳಿಗೆಗಳ ಕ್ರೀಡಾಳುಗಳನ್ನು ಪ್ರೇರೇಪಿಸುತ್ತಾ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಈವರೆಗೂ ಕ್ರೀಡಾ ಕ್ಷೇತ್ರದ ಹಲವರು ಧ್ಯಾನ್​ ಚಂದ್​ ಅವರಿಗೆ ಭಾರತ ರತ್ನ ನೀಡಿ ಪುರಸ್ಕರಿಸಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಧ್ಯಾನ್​ ಚಂದ್​ ಅವರ ಉತ್ತಮ ಆಟಗಾರಿಕೆಯಿಂದಾಗಿಯೇ ಭಾರತ ಒಂದು ಕಾಲದಲ್ಲಿ ದಾಖಲೆ ಎಂಟು ಚಿನ್ನದ ಪದಕಗಳನ್ನು ಗೆದ್ದಿತ್ತು. (ಏಜೆನ್ಸೀಸ್)

    ‘ಐತಿಹಾಸಿಕ! ಆತ್ಮವಿಶ್ವಾಸದಿಂದ ಕೂಡಿದ ಭಾರತವಿದು!’ – ಹಾಕಿ ವಿಜಯಕ್ಕೆ ಪ್ರಧಾನಿ ಮೋದಿ ಹರ್ಷೋದ್ಗಾರ

    ಸಾಧನೆಯ ಪಥದಲ್ಲಿ ನೆರವಾದ ಟ್ರಕ್​ ಚಾಲಕರನ್ನು ಸತ್ಕರಿಸಿದ ಮೀರಾಬಾಯಿ ಚಾನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts