More

    ಕೊಳೆಗೇರಿಗಳಲ್ಲಲ್ಲ, ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚು ಕರೊನಾ ಸೋಂಕು !

    ಮುಂಬೈ : ಕೊಳೆಗೇರಿ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದಿಲ್ಲ. ಹಾಗಾಗಿ ಕರೊನಾ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳು ಅಲ್ಲಿ ಹಬ್ಬುವ ಅಪಾಯ ಹೆಚ್ಚಾಗಿದೆ ಎಂದು ಸಮುದಾಯ ಆರೋಗ್ಯ ತಜ್ನರು ಭಾವಿಸಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಮುಂಬೈನ ಎರಡನೇ ಕರೊನಾ ಅಲೆಯಲ್ಲಿ, ಶೇ.10 ರಷ್ಟು ಕರೊನಾ ಪ್ರಕರಣಗಳು ಮಾತ್ರ ಕೊಳೆಗೇರಿಗಳಿಂದ ವರದಿಯಾಗಿವೆ. ಉಳಿದ ಶೇ. 90 ರಷ್ಟು ಕರೊನಾ ಪ್ರಕರಣಗಳು ಬಹುಮಹಡಿ ಕಟ್ಟಡಗಳಲ್ಲಿ ಮತ್ತು ಸ್ವತಂತ್ರ ಕಟ್ಟಡಗಳಲ್ಲಿ ವಾಸಿಸುವ ಜನರಲ್ಲಿ ಕಂಡುಬಂದಿವೆ.

    ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಏಪ್ರಿಲ್ 16 ರಂದು ಸಂಗ್ರಹಿಸಿದ ಮಾಹಿತಿಯ ಪ್ರಕಾರ ಮುಂಬೈ ನಗರದಲ್ಲಿ ಸುಮಾರು 87,443 ಸಕ್ರಿಯ ಪ್ರಕರಣಗಳಿದ್ದವು. ಅದರಲ್ಲಿ 90 ಪ್ರತಿಶತಕ್ಕೂ ಹೆಚ್ಚು ಅಂದರೆ 79,032 ಪ್ರಕರಣಗಳು ಎತ್ತರದ ಮತ್ತು ಸ್ವತಂತ್ರ ಕಟ್ಟಡಗಳಲ್ಲಿ ಕೇಂದ್ರೀಕೃತವಾಗಿದ್ದವು. ಮತ್ತೊಂದೆಡೆ, ಕೊಳೆಗೇರಿಗಳು ಕೇವಲ 8,411 ಪ್ರಕರಣಗಳನ್ನು ಹೊಂದಿದ್ದು, 10 ಪ್ರತಿಶತದಷ್ಟು ಸೋಂಕಿನ ಪ್ರಮಾಣವನ್ನು ಹೊಂದಿದ್ದವು ಎನ್ನಲಾಗಿದೆ.

    ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್​​ಗೆ ಕರೊನಾ; ಏಮ್ಸ್​ ಆಸ್ಪತ್ರೆಗೆ ದಾಖಲು

    ಕರೊನಾ ಮೊದಲ ಅಲೆಯಲ್ಲಿ, ಕೊಳೆಗೇರಿಗಳು ಹೆಚ್ಚು ಹೊಡೆತಕ್ಕೆ ಸಿಕ್ಕಿದ್ದವು. ಉದಾಹರಣೆಗೆ, ಜೂನ್ 2020 ರಲ್ಲಿ, ನಗರದ ಒಟ್ಟು ಕೋವಿಡ್ ಪ್ರಕರಣಗಳಲ್ಲಿ, ಸುಮಾರು ಮೂರನೇ ಎರಡರಷ್ಟು ಪ್ರಕರಣಗಳು ಹೆಚ್ಚು ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದ ಕೊಳೆಗೇರಿಗಳು ಮತ್ತು ಚಾಲ್‌ಗಳಿಂದ ವರದಿಯಾಗಿದ್ದವು. ಮುಂಬೈನ ಕೊಳೆಗೇರಿಗಳಲ್ಲಿ ವಾಸಿಸುವ 42 ಲಕ್ಷ ಜನರನ್ನು ಆಗ ಕಂಟೇನ್​ಮೆಂಟ್​ ಜೋನ್​ನಲ್ಲಿರಿಸಲಾಗಿತ್ತು. ಅದೇ ಕಟ್ಟಡಗಳಲ್ಲಿ ವಾಸಿಸುವ 8 ಲಕ್ಷ ಜನರು ಮಾತ್ರ ಕಂಟೇನ್​ಮೆಂಟ್​ನಲ್ಲಿದ್ದರು ಎನ್ನಲಾಗಿದೆ.

    ಕರೊನಾದ ಭೌಗೋಳಿಕ ಹರಡುವಿಕೆಯ ವಿಶ್ಲೇಷಣೆ ಮಾಡಿರುವ ಬಿಎಂಸಿ, ತನ್ನ ಎಸ್‌ಒಪಿಗಳನ್ನು ಈ ಬಾರಿ ಪರಿಷ್ಕರಿಸಿದೆ. ಏಪ್ರಿಲ್ 5 ರಂದು ಐದಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿದ ಹೌಸಿಂಗ್​ ಸೊಸೈಟಿ ಅಥವಾ ಅಪಾರ್ಟ್​ಮೆಂಟ್​ಗಳನ್ನು ಮೈಕ್ರೊಕಂಟೇನ್​ಮೆಂಟ್ ಜೋನ್​ಗಳಾಗಿ ಘೋಷಿಸಲಾಗುತ್ತಿದೆ. ಎಲ್ಲಾ ಹೌಸಿಂಗ್ ಸೊಸೈಟಿಗಳ ಪದಾಧಿಕಾರಿಗಳಿಗೆ ಕೋವಿಡ್ -19 ಮಾರ್ಗಸೂಚಿಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳುವ ಕೆಲಸ ನೀಡಲಾಗಿದೆ. (ಏಜೆನ್ಸೀಸ್)

    50:50 ಲಸಿಕೆ ಹಂಚಿಕೆ; ಸರ್ಕಾರಿ ಕೇಂದ್ರಗಳಲ್ಲಿ ಯಥಾಸ್ಥಿತಿ, ಖಾಸಗಿ ಕೇಂದ್ರಗಳಲ್ಲಿ 18 ಮೇಲ್ಪಟ್ಟವರಿಗೆ ಲಸಿಕೆ ಲಭ್ಯ!

    ಪಂಚಾಯಿತಿ ಚುನಾವಣೆ : ಮುಂದೂಡುವ‌ ಬಗ್ಗೆ ಸಚಿವ ಈಶ್ವರಪ್ಪ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts