More

    ಪಿಡಬ್ಲೂಡಿ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ

    ಬಸವನಬಾಗೇವಾಡಿ: ನ್ಯಾಯಾಧೀಶರ ವಸತಿಗೃಹಕ್ಕೆ ಸಮರ್ಪಕ ರಸ್ತೆ ಇರದಿದ್ದರೇ ಹೇಗೆ? ನ್ಯಾಯಾಧೀಶರು ಕೆಸರಲ್ಲಿ ಓಡಾಡಬೇಕೆ? ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ವಿಜಯಪುರ ಜಿಲ್ಲೆಯ ಆಡಳಿತಾತ್ಮ ನ್ಯಾಯಮೂರ್ತಿಗಳಾದ ಬಿ.ಎ. ಪಾಟೀಲ ಅವರು ಪಿಡಬ್ಲೂಡಿ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.
    ಭಾನುವಾರ ಸ್ಥಳೀಯ ನ್ಯಾಯಾಲಯ ಸಂಕೀರ್ಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ನ್ಯಾಯಾಲಯ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಅವರು ಕೋರ್ಟ್ ಆವರಣ ಪರಿಶೀಲಿಸಲು ತೆರಳಿದಾಗ ಇಬ್ಬರು ನ್ಯಾಯಾಧೀಶರು ವಾಸಿಸುವ ವಸತಿಗೃಹಗಳು ನ್ಯಾಯಾಲಯದ ಪಕ್ಕದಲ್ಲಿವೆ. ಆದರೆ, ವಸತಿ ಗೃಹಗಳಿಂದ ನ್ಯಾಯಾಲಯಕ್ಕೆ ಆಗಮಿಸಲು ಸರಿಯಾದ ರಸ್ತೆ ಇಲ್ಲ. ಮಳೆಯಾದರೆ ಕೆಸರುಮಯವಾಗುತ್ತದೆ. ಮನೆ ಮುಂದಿನ ಪರಿಸ್ಥಿತಿ ನೋಡಿ, ಪಿಡಬ್ಲೂಡಿ ಅಧಿಕಾರಿಗಳ ಮೇಲೆ ಡ್ಯಾಮೇಜ್ ಪ್ರಕರಣ ದಾಖಲಿಸಿ ಅಭಿಯಂತರರ ಮೇಲೆ ಕಾನೂನು ಕ್ರಮಕೈಗೊಂಡಾಗ ಸರಿಯಾಗುತ್ತದೆ ಎಂದು ಪಿಡಬ್ಲೂಡಿ ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಒಂದು ವಾರದಲ್ಲಿ ರಸ್ತೆ ಆಗಬೇಕೆಂದು ಪಿಡಬ್ಲೂಡಿ ಅಧಿಕಾರಿಗಳಿಗೆ ಸೂಚಿಸಿದರು.
    ನ್ಯಾಯಾಲಯದ ಎಪಿಪಿ ಕೊಠಡಿ ಬಳಿ ನೀರು ಸೋರಿಕೆಯಾಗುತ್ತಿರುವ ಕುರಿತಾಗಿ ನ್ಯಾಯಾಲಯ ಸಿಬ್ಬಂದಿ ತಿಳಿಸಿದಾಗ ಇದಕ್ಕೆ ಪಿಡಬ್ಲೂಡಿ ಅಧಿಕಾರಿಗಳಿಗೆ ಶೀಘ್ರ ಸೋರಿಕೆಯಾಗದಂತೆ ತಡೆಗಟ್ಟಬೇಕೆಂದು ನ್ಯಾಯಮೂರ್ತಿಗಳು ತಾಕೀತು ಮಾಡಿದರು. ನಂತರ
    ನೂತನವಾಗಿ ನಿರ್ಮಾಣಗೊಂಡ ಎರಡು ನ್ಯಾಯಾಲಯಗಳನ್ನು ಪರಿಶೀಲಿಸಿ, ನ್ಯಾಯಾಲಯ ಆರಂಭಕ್ಕೆ ಬೇಕಾದ ಪೀಠೋಪಕರಣಗಳು ಎಲ್ಲಿವೆ? ಎಂದು ಪ್ರಶ್ನಿಸಿದರು. ಇದಕ್ಕೆ ಪಿಡಬ್ಲೂಡಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದೆ ಎಂದಾಗ ನ್ಯಾಯಮೂರ್ತಿಗಳು ನಾವು ಕೋರ್ಟ್ ಕಲಾಪಗಳನ್ನು ಆರಂಭಿಸಬೇಕೆಂದರೆ ಪೀಠೋಪಕರಣಗಳೇ ಇಲ್ಲವಲ್ಲ. ಬೇಗ ವ್ಯವಸ್ಥೆ ಕಲ್ಪಿಸಿ ಎಂದು ನ್ಯಾಯಮೂರ್ತಿಗಳು ಸೂಚಿಸಿದರು.
    ಕೋವಿಡ್ 19 ಹಿನ್ನೆಲೆ ಕೋರ್ಟ್ ಕಲಾಪ ನಡೆಸಲು ನ್ಯಾಯಾಧೀಶರ, ವಕೀಲರ, ಕಕ್ಷಿದಾರರ, ಸಾಕ್ಷಿದಾರರ ಹಾಗೂ ಆರೋಪಿಗಳ ಸುರಕ್ಷತಾ ಕ್ರಮವಾಗಿ ಪ್ರತ್ಯೇಕ ಬಾಕ್ಸ್ ವ್ಯವಸ್ಥೆ ಮಾಡಿದ್ದು, ವಕೀಲರು ಹಾಗೂ ಸಿಬ್ಬಂದಿ ಆರೋಗ್ಯದೃಷ್ಟಿಯಿಂದ ಪರಸ್ಪರ ಸಹಕಾರ ಮಾಡಬೇಕು. ಪ್ರಕರಣ ನಡೆಸುವ ಭರದಲ್ಲಿ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಿದರೆ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಪ್ರತಿಯೊಬ್ಬರೂ ತಮ್ಮ ಹಾಗೂ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಒಂದು ಸಾಕ್ಷಿ ಮುಗಿದ ನಂತರ ಬಾಕ್ಸ್‌ಗಳನ್ನು ಸ್ಯಾನಿಟೈಸ್ ಮಾಡಬೇಕು ಎಂದರು.
    ಜಿಲ್ಲಾ ಪ್ರಧಾನ ವ ಸತ್ರ ನ್ಯಾಯಾಧೀಶ ಸದಾನಂದ ನಾಯಕ, ಹೆಚ್ಚುವರಿ ಜಿಲ್ಲಾ ಪ್ರಧಾನ ವ ಸತ್ರ ನ್ಯಾಯಾಧೀಶ ವೆಂಕಟೇಶ ಜೋಶಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಶಬಾನಾಬೇಗಂ ಲಾಡಖಾನ್, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ವೀರನಗೌಡ ಪಾಟೀಲ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಿವರಾಜು ಎಚ್.ಎಸ್. ವಕೀಲರ ಸಂಘದ ಅಧ್ಯಕ್ಷ ಎನ್.ಎಸ್. ಪಾಟೀಲ, ವಕೀಲರಾದ ಬಿ.ಆರ್. ಅಡ್ಡೋಡಗಿ, ಸದಾನಂದ ಬಶೆಟ್ಟಿ, ಎಂ.ಎಸ್. ಗೊಳಸಂಗಿ, ಎ.ಕೆ. ಗಂಜಿಹಾಳ, ಮಲ್ಲಿಕಾರ್ಜುನ ದೇವರಮನಿ, ಬಿ.ಎಸ್. ಕಳ್ಳಿಗುಡ್ಡ, ಎಸ್.ಎಲ್. ಕಳ್ಳಿಗುಡ್ಡ, ಎನ್.ಎಸ್. ಬಿರಾದಾರ, ಮನೋಜ ಕದಂ, ಆರ್.ವಿ. ಗುತ್ತರಗಿಮಠ, ಬಿ.ಎ. ಪಾಟೀಲ, ತಾನಾಜಿ ಗಾಯಕವಾಡ, ಪಿಡಬ್ಲೂಡಿ ಎಇಇ ಎಸ್.ಎನ್. ಕರೂರ, ಕಿರಿಯ ಅಭಿಯಂತರ ಜೆ.ಸಿ. ವಂದಾಲ, ಗುತ್ತಿಗೆದಾರ ಹಾಗೂ ನ್ಯಾಯಾಲಯ ಸಿಬ್ಬಂದಿ ಇದ್ದರು.

    ವಕೀಲರ ಸಂಘದ ಅಧ್ಯಕ್ಷ ಎನ್.ಎಸ್. ಪಾಟೀಲ ಹಾಗೂ ವಕೀಲರು ಅಖಂಡ ಬಸವನಬಾಗೇವಾಡಿ ತಾಲೂಕಿನ ಪೈಕಿ ಹೆಚ್ಚಿನ ಪ್ರಕರಣಗಳಿದ್ದು, ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿದ್ದು ಬಸವನಬಾಗೇವಾಡಿ ಪಟ್ಟಣವು ಭೌಗೋಳಿಕ ಕೇಂದ್ರ ಸ್ಥಳವಾಗಿದೆ. ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು ಮಂಜೂರು ಮಾಡಬೇಕೆಂದು ಹೈಕೋರ್ಟ್ ನ್ಯಾಯಮೂರ್ತಿಬಿ.ಎ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts