More

    ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯಾರ್ಥಿ ಸಾವು ಪ್ರಕರಣ: ಹೈಕೋರ್ಟ್​ ನಿಂದ ಮಹತ್ವದ ತೀರ್ಪು…

    ಬೆಂಗಳೂರು: ಸ್ವಾಂತ್ರೋತ್ಸವಕ್ಕೆ ಧ್ವಜಸ್ತಂಭ ನಿಲ್ಲಿಸುವಾಗ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

    ಮೃತಪಟ್ಟ ವಿದ್ಯಾರ್ಥಿಗೆ ಸರ್ಕಾರ ನೀಡಿರುವ ಒಂದು ಲಕ್ಷ ರೂ. ಪರಿಹಾರದ ಹಣ ಅತ್ಯಲ್ಪವಾಗಿದೆ. ಈ ಹಿಂದೆ 2019ರಲ್ಲಿ ನಡೆದಿದ್ದ ಘಟನೆಯಲ್ಲಿ ಪರಿಹಾರ ನೀಡಿದಂತೆ, ಈ ಪ್ರಕರಣದಲ್ಲೂ ಮೃತ ವಿದ್ಯಾರ್ಥಿ ಕುಟುಂಬಕ್ಕೆ ಹತ್ತು ಲಕ್ಷ ರೂ. ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ. ಜೊತೆಗೆ ರಾಜ್ಯಾದ್ಯಂತ ಶಾಲೆ ಆವರಣದ ಮೂಲಕ ಹಾದು ಹೋಗುವ ವಿದ್ಯುತ್ ವೈರ್ ಗಳನ್ನು ತೆರವುಗೊಳಿಸಲು ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.

    ಪ್ರಕರಣದ ಹಿನ್ನೆಲೆ:

    ಆಗಸ್ಟ್ 15 ರಂದು ತುಮಕೂರಿನ ಕೋರಾ ಹೋಬಳಿಯ ಕರೀಕೆರೆ ಗ್ರಾಮದಲ್ಲಿ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದಂದೇ ದುರಂತ ಘಟನೆಯೊಂದು ನಡೆದಿತ್ತು, ಧ್ವಜಸ್ತಂಭ ನಿಲ್ಲಿಸುವ ವೇಳೆ ಮೂವರು ಬಾಲಕರಿಗೆ ವಿದ್ಯುತ್ ಪ್ರವಹಿಸಿ, ಓರ್ವ ಮೃತಪಟ್ಟಿದ್ದನು. ಶಶಂಕ್ ( 16), ಪವನ್ ( 22), ಚಂದನ್ (16) ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗಾಯಗೊಂಡಿದ್ದು, ಚಂದನ್ ಮೃತಪಟ್ಟಿದ್ದನು. 

    ಸ್ವಾತಂತ್ರ್ಯ ದಿನದಂದೇ ದುರಂತ: ಧ್ವಜಸ್ತಂಭ ನಿಲ್ಲಿಸೋ ವೇಳೆ ಮೂವರು ಬಾಲಕರಿಗೆ ವಿದ್ಯುತ್ ಪ್ರವಹಿಸಿ, ಓರ್ವ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts