More

    ಇಂದು ರಾಜ್ಯದಲ್ಲಿ ಪ್ರೌಢಶಾಲೆ-ಕಾಲೇಜು ಪುನರಾರಂಭದ ಸಂಭ್ರಮ! ವಿದ್ಯಾರ್ಥಿಗಳೊಂದಿಗೆ ಸಿಎಂ ಬೊಮ್ಮಾಯಿ ಮಾತು

    ಬೆಂಗಳೂರು: ಇಂದು ರಾಜ್ಯಾದ್ಯಂತ ಶಾಲಾ ಕಾಲೇಜುಗಳ ಪುನರಾರಂಭದ ಸಂಭ್ರಮ ಕಂಡುಬಂದಿದೆ. ಐದು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲಿ 9ನೇ ತರಗತಿ, 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ಆರಂಭಿಸಲಾಯಿತು. ಹಲವೆಡೆ ಶಿಕ್ಷಕರು, ಉಪನ್ಯಾಸಕರು ಹೂವು ನೀಡಿ ವಿದ್ಯಾರ್ಥಿಗಳನ್ನು ಶಾಲಾ-ಕಾಲೇಜಿಗೆ ಸ್ವಾಗತಿಸಿದ್ದಾರೆ.

    ಈ ಸಂದರ್ಭದಲ್ಲಿ ಬೆಂಗಳೂರಿನ ಮಲ್ಲೇಂಶ್ವರಂ ಪಿಯು ಕಾಲೇಜು ಮತ್ತು ನಿರ್ಮಲಾ ರಾಣಿ ಪ್ರೌಢಶಾಲೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಕೋವಿಡ್ 19 ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಸಿದ್ಧತೆಗಳನ್ನು ಪರಿಶೀಲಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲೆ ಸಚಿವ ಬಿ.ಸಿ.ನಾಗೇಶ್ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಸಿಎಂಗೆ ಸಾಥ್ ನೀಡಿದರು. ಕಾಲೇಜು ಆವರಣದಲ್ಲಿ ಸಿಎಂ ಸಸಿ ನೆಟ್ಟು‌ ನೀರು ಹಾಕಿದರು. ಡಾ. ಅಶ್ವಥ್ ನಾರಾಯಣ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಿದರು.

    ಇಂದು ರಾಜ್ಯದಲ್ಲಿ ಪ್ರೌಢಶಾಲೆ-ಕಾಲೇಜು ಪುನರಾರಂಭದ ಸಂಭ್ರಮ! ವಿದ್ಯಾರ್ಥಿಗಳೊಂದಿಗೆ ಸಿಎಂ ಬೊಮ್ಮಾಯಿ ಮಾತು

    ಶಿಕ್ಷಕರು ಮತ್ತು ವಿದ್ಯಾರ್ಥಿನಿಯರೊಂದಿಗೆ ಚರ್ಚೆ ನಡೆಸಿದ ಸಿಎಂ ಬೊಮ್ಮಾಯಿ, ಯಾವುದೇ ಆತಂಕವಿಲ್ಲದೆ ಕಾಲೇಜಿಗೆ ಬನ್ನಿ ಎಂದು ಧೈರ್ಯ ತುಂಬಿದರು. “ಶಿಕ್ಷಣ ಅತ್ಯಂತ ಅವಶ್ಯಕವಾದುದು. ಜ್ಞಾನವೇ ಶಕ್ತಿ. ನೀವು ದೇಶದ ಭವಿಷ್ಯ, ಪ್ರಧಾನಿಗಳು ಶಿಕ್ಷಣ ನೀತಿ ತಂದಿದ್ದಾರೆ. ನಿಮಗೆ ಬಹಳ ಅವಕಾಶ ಇದೆ. ಚೆನ್ನಾಗಿ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ. ಕೋವಿಡ್ ನಿಯಮ ಪಾಲಿಸಿ, ಶಾಲೆಯ ತರಗತಿಗಳನ್ನ ಅಟೆಂಡ್ ಮಾಡಿ” ಎಂದು ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳಿದರು.

    ಇದನ್ನೂ ಓದಿ: ಅಫ್ಘನ್‌ ಉದ್ಯೋಗಿ ಮಂಗಳೂರು ಕೊಲ್ಯ ನಿವಾಸಿ ಪ್ರಸಾದ್‌ ಆನಂದ್‌ ಮರಳಿ ಮನೆಗೆ

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಶಾಲಾ ಕಾಲೇಜು ಆರಂಭದಿಂದ ಹಬ್ಬದ ವಾತಾವರಣ ಉಂಟಾಗಿದೆ. ಪೋಷಕರು ಧನ್ಯವಾದ ಹೇಳಿದ್ದಾರೆ. ತರಗತಿ ಆರಂಭದಿಂದ ಶಿಕ್ಷಕರು ವಿದ್ಯಾರ್ಥಿಗಳು ಸಂತಸದಲ್ಲಿದ್ದಾರೆ. ಕರೊನಾ ನಿಯಮಗಳನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದ್ದೇನೆ ಎಂದರು.

    ಶಾಲೆಗಳ ಆರಂಭದ ಬಗ್ಗೆ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದೇವೆ. ಮಕ್ಕಳ ಆರೋಗ್ಯ ನಮಗೆ ಮುಖ್ಯ. ಆದ್ದರಿಂದ ಕರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದೇವೆ. ಗಡಿಜಿಲ್ಲೆಗಳಲ್ಲಿ ಕರೊನಾ ಸೋಂಕಿನ ದರ ಶೇ. 2ಕ್ಕಿಂತ ಕಡಿಮೆ ಆದ್ರೆ, ಅಲ್ಲೂ ಶಾಲೆ ಆರಂಭಿಸುತ್ತೇವೆ. ತಜ್ಞರ ಮಾರ್ಗದರ್ಶನದಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

    ಸಂಸ್ಕೃತ ಕಲಿಯಬೇಕೆ? ಇಲ್ಲಿವೆ ಸರಳ ಮಾರ್ಗಗಳು!

    20 ಎಳೆಯ ಕರುಗಳ ಸಾವಿಗೆ ಕಾರಣರಾಗಿದ್ದ ದುಷ್ಕರ್ಮಿಗಳು ಪೊಲೀಸರ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts