More

    ಹೆಚ್ಚಿನ ದರ ವಸೂಲಿ ಬೇಡ

    ಘಟಪ್ರಭಾ: ಕರೊನಾ ಸೋಂಕು ತಡೆಗಟ್ಟುವ ಸಲುವಾಗಿ ಲಾಕ್‌ಡೌನ್ ವಿಧಿಸಲಾಗಿದ್ದು, ಕಿರಾಣಿ ವರ್ತಕರು ಹಾಗೂ ಔಷಧ ಅಂಗಡಿಯವರು ಗ್ರಾಹಕರಲ್ಲಿ ಹೆಚ್ಚಿಗೆ ದರ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಒಂದು ವೇಳೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೋಕಾಕ ತಾಲೂಕು ದಂಡಾಧಿಕಾರಿ ಪ್ರಕಾಶ ಹೊಳೆಪ್ಪಗೋಳ ಎಚ್ಚರಿಕೆ ನೀಡಿದರು.

    ಸಮೀಪದ ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯಿತಿ ಹಮ್ಮಿಕೊಂಡಿದ್ದ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು. ಯಾರೇ ಗ್ರಾಹಕರು ತಮ್ಮ ಮೇಲೆ ದೂರು ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಲಾಕ್‌ಡೌನ್ ಜಾರಿಯಿಂದ ಕೆಲಸ, ಕಾರ್ಯಗಳಿಲ್ಲದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ವರ್ತಕರು ದಿನಸಿ ವಸ್ತುಗಳು, ಔಷಧ ಹಾಗೂ ಮಾಸ್ಕ್‌ಗಳನ್ನು ಕಡಿಮೆ ದರಕ್ಕೆ ಮರಾಟ ಮಾಡಿ ಸಹಕರಿಸಬೇಕು. ಕೆಲವು ಅರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಸಭೆೆ ಕರೆಯಲಾಗಿದ್ದು, ತುರ್ತು ವ್ಯವಸ್ಥೆಗಳಾದ ಔಷಧ ಅಂಗಡಿ, ಆಸ್ಪತ್ರೆಗಳನ್ನು ತೆರೆದಿಡಬೇಕು. ಕೆಲ ವೈದ್ಯರು ಕರೊನಾ ರೋಗಕ್ಕೆ ಹೆದರಿಕೊಂಡು ಅಸ್ಪತ್ರೆ ಮುಚ್ಚಿಕೊಂಡಿದ್ದಾರೆ. ಅಂತಹವರು ಕೂಡಲೇ ಆಸ್ಪತ್ರೆ ತೆರೆದು ಪ್ರತಿದಿನ ರೋಗಿಗಳನ್ನು ಉಪಚರಿಸಬೇಕು ಎಂದು ಸೂಚಿಸಿದರು.

    ಘಟಪ್ರಭಾ ಪಿಎಸ್‌ಐ ಹಾಲಪ್ಪ ಬಾಲದಂಡಿ, ಮಲ್ಲಾಪುರ ಪಿಜಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕೆ.ಬಿ. ಪಾಟೀಲ, ಧುಪದಾಳ ಪಿಡಿಒ ಕೃಷ್ಣ ಗೋವೆಲಕರ, ಜಿಲ್ಲಾ ಕಾರ್ಮಿಕ ನಿರೀಕ್ಷಕ ತರುಣ ಎಂ. ಬೆಂಗಾಲಿ, ತಾಲೂಕು ಕಾರ್ಮಿಕ ಅಧಿಕಾರಿ ಪಿ.ವಿ.ಮಾವರಕರ, ಗ್ರಾಮಲೆಕ್ಕಾಧಿಕಾರಿ ಎಂ.ಎಸ್.ಗಡಕರಿ, ಡಿ.ಎಂ.ದಳವಾಯಿ, ಸಲೀಮ್ ಕಬ್ಬೂರ, ಸಚಿನ್ ಖಡಬಡಿ, ರಾಜನ್ನವರ, ರಾಜು ಪಾಟೀಲ, ಬಸವರಾಜ ಪಶುಪತಿಮಠ, ರಾಯಣ್ಣ ಬಂಗಿ, ಮನೋಹರ ಹಾಲುಂಡಿ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts