More

    ಛಲವಿದ್ದರೆ ಉನ್ನತ ಹುದ್ದೆ ಸುಲಭ

    ಚಿತ್ರದುರ್ಗ: ಛಲದಿಂದ ಶ್ರಮಪಟ್ಟರೆ ಐಎಎಸ್, ಕೆಎಎಸ್, ಇತರೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉನ್ನತ ಹುದ್ದೆ ಪಡೆಯುವುದು ಕಷ್ಟಕರವಲ್ಲ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.

    ಜಂಬೂದ್ವೀಪ ಕರ್ನಾಟಕ ಜಿಲ್ಲಾ ಘಟಕ, ಮಹಾತ್ಮ ಫುಲೆ ಅಧ್ಯಯನ ಕೇಂದ್ರದಿಂದ ಸರ್ಕಾರಿ ಕಲಾ ಕಾಲೇಜ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೆಎಎಸ್ ಪರೀಕ್ಷಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಹೊರ ಜಿಲ್ಲೆಯಿಂದ ವಿದ್ಯಾಭ್ಯಾಸಕ್ಕೆ ಬರುವ ಬಡ ಮಕ್ಕಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಯುವಸಮೂಹ ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧ ಉಚಿತವಾಗಿ ನೀಡುವ ತರಬೇತಿ ಆಸಕ್ತಿಯಿಂದ ಕಲಿಯಬೇಕು. ಈ ಮೂಲಕ ಸರ್ಕಾರಿ ಹುದ್ದೆಯ ಕನಸನ್ನು ನನಸು ಮಾಡಿಕೊಳ್ಳಲು ಪಣತೊಡಬೇಕು ಎಂದರು.

    ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಅವರಂತೆ ಪುಸ್ತಕಗಳನ್ನು ಪ್ರೀತಿಸಿದರೆ, ಉತ್ತಮ ಜ್ಞಾನಿಗಳಾಗಿ ಹೊರಹೊಮ್ಮಬಹುದು. ವಿದ್ಯೆ ಎಂಬುದು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸಲು ಸಹಕಾರಿಯಾಗಿದೆ. ಯಾವುದೇ ಸ್ಪರ್ಧಾತ್ಮಕ ತರಬೇತಿ ನೀಡಿದರೂ ಅಗತ್ಯ ಸಹಕಾರ ನೀಡಲು ಸಿದ್ಧ ಎಂದು ಭರವಸೆ ನೀಡಿದರು.

    ಜಂಬೂದ್ವೀಪ ಘಟಕ ಜಿಲ್ಲಾಧ್ಯಕ್ಷ ಸಿ.ಚಂದ್ರಪ್ಪ ಮಾತನಾಡಿ, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, 140 ಸಲ್ಲಿಕೆಯಾಗಿದ್ದವು. ಅದರಲ್ಲಿ 40 ಮಂದಿಗೆ ತರಬೇತಿ ನೀಡಲು ಆಯ್ಕೆ ಮಾಡಲಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಇದು ಅತ್ಯವಶ್ಯಕ ಎಂದು ತಿಳಿಸಿದರು.
    ಹಿಂದುಳಿದ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗದಂತೆ ಸರ್ಕಾರಿ ಉದ್ಯೋಗ ಪಡೆದು ಕುಟುಂಬ ನಿರ್ವಹಿಸುವ ಉತ್ತಮ ಉದ್ದೇಶವಿದೆ. ಸ್ಮಾರ್ಟ್ ಕ್ಲಾಸ್ ಮೂಲಕ ಅಂತರರಾಜ್ಯ ತರಬೇತುದಾರರಿಂದ ಟ್ರೈನಿಂಗ್ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದರು.

    ಜಂಬೂದ್ವೀಪ ಅಧ್ಯಕ್ಷ ರಾಮಣ್ಣ, ಗೌರವಾಧ್ಯಕ್ಷ ನಾಗಸಿದ್ದಾರ್ಥ ಹೊಲೆಯರ್, ನಗರಸಭೆ ಸದಸ್ಯೆ ತಾರಕೇಶ್ವರಿ, ಜಿಲ್ಲಾ ಹಿಂದಳಿದ ವರ್ಗಗಳ ಕಲ್ಯಾಣಾಧಿಕಾರಿ ಜಗನ್ನಾಥ್, ಶಿವಮೊಗ್ಗ ಲೋಕೋಪಯೋಗಿ ಇಂಜಿನಿಯರ್ ಕೆ.ಜಿ.ಜಗದೀಶ್, ತಹಸೀಲ್ದಾರ್ ಬ್ರಹ್ಮವರ, ಪ್ರಾಂಶುಪಾಲ ತಿಪ್ಪೇರುದ್ರಪ್ಪ, ಪಿಆರ್‌ಡಿ ಇಂಜಿನಿಯರ್ ಹನುಮಂತಪ್ಪ, ಅಧ್ಯಯನ ಕೇಂದ್ರದ ಸಹ ಕಾರ್ಯದರ್ಶಿ ಟಿ.ಶ್ರೀನಿವಾಸಮೂರ್ತಿ, ಹಿರಿಯೂರು ತಾಲೂಕು ಕೃಷಿ ಅಧಿಕಾರಿ ಡಾ.ಟಿ.ಪಾರ್ವಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts