More

    ಉನ್ನತ ಅಧಿಕಾರಿಗಳಿರುವ ಪ್ರದೇಶವೇ ಕಂಟೇನ್ಮೆಂಟ್!

    ಬೆಳಗಾವಿ: ಐಎಎಸ್, ಕೆಎಎಸ್ ಹಾಗೂ ಉನ್ನತ ಅಧಿಕಾರಿಗಳ ಮನೆಗಳಿರುವ ಬೆಳಗಾವಿಯ ಸದಾಶಿವ ನಗರ ಇದೀಗ ಕಂಟೇನ್ಮೆಂಟ್ ರೆನ್‌ಗೆ ಒಳಪಟ್ಟಿದೆ.

    ಸದಾಶಿವ ನಗರದಲ್ಲಿ ಹೋಂ ಕ್ವಾರಂಟೈನ್ ಆಗಿದ್ದ ಗರ್ಭಿಣಿಗೆ ಗುರುವಾರ ಕರೊನಾ ಸೋಂಕು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಗರ್ಭಿಣಿಯ ಮನೆಯಿಂದ 100 ಮೀಟರ್ ಸುತ್ತಳತೆಯ ಪ್ರದೇಶವನ್ನು ಕಂಟೇನ್ಮೆಂಟ್ ರೆನ್ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಐಎಎಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ಮನೆಗಳಿವೆ. ಇದರಿಂದ ಸ್ಥಳೀಯರು ಹಾಗೂ ಅಧಿಕಾರಿಗಳ ಎದೆಯಲ್ಲೂ ಈಗ ಢವಢವ ಶುರುವಾಗಿದೆ.

    ಹರಿದಾಡಿದ ಮೊಬೈಲ್ ಸಂದೇಶ: ಸದಾಶಿವ ನಗರವನ್ನು ಗುರುವಾರ ಅಧಿಕಾರಿಗಳು ಕಂಟೇನ್ಮೆಂಟ್ ವಲಯ ಎಂದು ಗುರುತಿಸುತ್ತಿದ್ದಂತೆ ನಿವಾಸಿಗಳು ಭಯಭೀತರಾಗಿದ್ದರು. ‘ಅಗತ್ಯ ವಸ್ತುಗಳನ್ನು ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳಿ. ಸದಾಶಿವ ನಗರವನ್ನು ಕಂಟೇನ್ಮೆಂಟ್ ರೆನ್ ಮಾಡುತ್ತಿ ದ್ದಾರೆ’ ಎಂಬಿತ್ಯಾದಿ ಸಂದೇಶಗಳು ಸ್ಥಳೀಯರ ಮೊಬೈಲ್‌ನಲ್ಲಿ ಹರಿದಾಡಿದವು. ಇದರಿಂದಾಗಿ ನಿವಾಸಿಗಳು ವಸ್ತುಗಳನ್ನು ಖರೀದಿಸುವ ಧಾವಂತದಲ್ಲಿದ್ದದ್ದು ಕಂಡುಬಂತು.

    ಬಿಗಿ ಬಂದೋಬಸ್ತ್: ಬೆಳಗಾವಿ ರೆಡ್ ರೆನ್ ಆಗಿದ್ದಾಗ ನಗರಾದ್ಯಂತ ಸಂಪೂರ್ಣ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸದಾಶಿವ ನಗರದಲ್ಲಿ ಜನ ಸಂಚಾರ ಹೆಚ್ಚಾಗಿದ್ದರಿಂದ ಕಟ್ಟುನಿಟ್ಟಿನ ಬಿಗಿ ಕ್ರಮ ಕೈಗೊಳ್ಳಲಾಗಿತ್ತು. ನಂತರದಲ್ಲಿ ಲಾಕ್‌ಡೌನ್ ಸಡಿಲಿಕೆ ಆದಾಗ ಸ್ಥಳೀಯರು ತುಸು ನಿರಾಳರಾಗಿದ್ದರು. ಈಗ ಈ ಪ್ರದೇಶದಲ್ಲಿ ಗರ್ಭಿಣಿಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಮತ್ತೆ ಈ ಪ್ರದೇಶವನ್ನು ಕಂಟೇನ್ಮೆಂಟ್ ವಲಯವನ್ನಾಗಿ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts