More

    ಟಿ20 ವಿಶ್ವಕಪ್‌ನಲ್ಲಿ ಇಂದು ಇಂಗ್ಲೆಂಡ್-ಬಾಂಗ್ಲಾದೇಶ ಮುಖಾಮುಖಿ

    ಅಬುಧಾಬಿ: ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡಕ್ಕೆ ಸೋಲುಣಿಸಿ ಟಿ20 ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿರುವ ಏಕದಿನ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡ ಗೆಲುವಿನ ಅಭಿಯಾನ ಮುಂದುವರಿಸಲು ಸಜ್ಜಾಗಿದೆ. ಸೂಪರ್-12ರ ಘಟ್ಟದಲ್ಲಿ ಬುಧವಾರ ನಡೆಯಲಿರುವ ತನ್ನ 2ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಇದು ಉಭಯ ತಂಡಗಳ ನಡುವಿನ ಮೊಟ್ಟಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿದೆ.

    ವಿಂಡೀಸ್ ತಂಡವನ್ನು 14.2 ಓವರ್‌ಗಳಲ್ಲಿ ಕೇವಲ 55 ರನ್‌ಗೆ ನಿಯಂತ್ರಿಸುವ ಮೂಲಕ ಅಮೋಘ ಬೌಲಿಂಗ್ ನಿರ್ವಹಣೆ ತೋರಿದ್ದ ಇವೊಯಿನ್ ಮಾರ್ಗನ್ ಬಳಗ 8.2 ಓವರ್‌ಗಳಲ್ಲೇ ಚೇಸಿಂಗ್ ಮಾಡುವ ಮೂಲಕ ಬ್ಯಾಟಿಂಗ್‌ನಲ್ಲೂ ಮಿಂಚಿತ್ತು. ಅಬುಧಾಬಿ ಪಿಚ್ ವೇಗಿಗಳಿಗೆ ನೆರವು ನೀಡುತ್ತಿದ್ದು, ಮಾರ್ಕ್ ವುಡ್ ಸೇರ್ಪಡೆಯ ಮೂಲಕ ಇಂಗ್ಲೆಂಡ್ ವೇಗದ ಬೌಲಿಂಗ್ ವಿಭಾಗವನ್ನು ಬಲಪಡಿಸುವ ನಿರೀಕ್ಷೆ ಇದೆ. ಟೂರ್ನಿಯ ಮೊದಲ 4 ಪಂದ್ಯಗಳಲ್ಲೂ ಚೇಸಿಂಗ್ ಮಾಡಿದ ತಂಡವೇ ಜಯಿಸಿದ್ದು, ಉಭಯ ತಂಡಗಳೂ ಚೇಸಿಂಗ್‌ಗೆ ಆದ್ಯತೆ ನೀಡಲಿವೆ.

    ಮೊದಲ ಸುತ್ತಿನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಆಘಾತ ಎದುರಿಸಿದರೂ, ಸೂಪರ್-12ಕ್ಕೆ ಪ್ರವೇಶ ಪಡೆಯುವಲ್ಲಿ ಸಲವಾಗಿದ್ದ ಬಾಂಗ್ಲಾದೇಶ, ಹಿಂದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದೊಡ್ಡ ಮೊತ್ತ ಪೇರಿಸಿಯೂ ಸೋಲು ಕಂಡಿತ್ತು. ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾ ಇತ್ತೀಚೆಗೆ ಉತ್ತಮ ಪೈಪೋಟಿ ನೀಡಿದ್ದರೂ, ಟಿ20 ವಿಶ್ವಕಪ್‌ನಲ್ಲಿ 2007ರಿಂದಲೂ ಅಂಥ ಉತ್ತಮ ದಾಖಲೆಯನ್ನೇನೂ ಹೊಂದಿಲ್ಲ.

    ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಸ್ಯಾಮ್ ಕರ‌್ರನ್ ಅವರಂತ ಪ್ರಮುಖ ಆಟಗಾರರ ಗೈರಿನಲ್ಲೂ ಬಲಿಷ್ಠ ತಂಡ ಕಟ್ಟಿರುವ ಇಂಗ್ಲೆಂಡ್‌ಗೆ ಮೊಯಿನ್ ಅಲಿ ಆಲ್ರೌಂಡರ್ ಕೊರತೆ ನೀಗಿಸಿದ್ದಾರೆ. ಮೊಯಿನ್ ಅಲಿಗೆ ಸ್ಪಿನ್ ವಿಭಾಗದಲ್ಲಿ ಆದಿಲ್ ರಶೀದ್ ಉತ್ತಮ ಬೆಂಬಲ ಒದಗಿಸಿದ್ದಾರೆ.

    *ಪಂದ್ಯ ಆರಂಭ: ಮಧ್ಯಾಹ್ನ 3.30
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

    ಒತ್ತಡದಲ್ಲಿ ಬಾಂಗ್ಲಾದೇಶ
    ಮೊದಲ ಸುತ್ತಿನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಆಘಾತ ಎದುರಿಸಿದರೂ, ಸೂಪರ್-12ಕ್ಕೆ ಪ್ರವೇಶ ಪಡೆಯುವಲ್ಲಿ ಸಲವಾಗಿದ್ದ ಬಾಂಗ್ಲಾದೇಶ, ಹಿಂದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದೊಡ್ಡ ಮೊತ್ತ ಪೇರಿಸಿಯೂ ಸೋಲು ಕಂಡಿತ್ತು. ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾ ಇತ್ತೀಚೆಗೆ ಉತ್ತಮ ಪೈಪೋಟಿ ನೀಡಿದ್ದರೂ, ಟಿ20 ವಿಶ್ವಕಪ್‌ನಲ್ಲಿ 2007ರಿಂದಲೂ ಅಂಥ ಉತ್ತಮ ದಾಖಲೆಯನ್ನೇನೂ ಹೊಂದಿಲ್ಲ. ಟೆಸ್ಟ್ ಮಾನ್ಯತೆಯ ದೇಶಗಳ ವಿರುದ್ಧ ಕೇವಲ 1 ಜಯ (ವಿಂಡೀಸ್) ಜಯವನ್ನಷ್ಟೇ ಕಂಡಿದೆ. ಲಂಕಾ ವಿರುದ್ಧ ಪಂದ್ಯದಲ್ಲಿ ಆಲ್ರೌಂಡರ್ ಶಕೀಬ್ ಅಲ್ ಹಸನ್ ಸ್ಪಿನ್ ದಾಳಿಯನ್ನು ಬಾಂಗ್ಲಾ ಸಮರ್ಥವಾಗಿ ಬಳಸಿಕೊಳ್ಳದಿದ್ದುದು ಅಚ್ಚರಿ ತಂದಿತ್ತು.

    ದಿನದ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಶಿಶುಗಳ ಹಣಾಹಣಿ
    ಮೊದಲ ಸುತ್ತಿನಲ್ಲಿ ಅಚ್ಚರಿಯ ಗೆಲುವು ದಾಖಲಿಸಿ ಟಿ20 ವಿಶ್ವಕಪ್ ಸೂಪರ್-12 ಹಂತಕ್ಕೆ ಪ್ರವೇಶ ಪಡೆದಿರುವ ಕ್ರಿಕೆಟ್ ಶಿಶು ತಂಡಗಳಾದ ನಮೀಬಿಯ ಮತ್ತು ಸ್ಕಾಟ್ಲೆಂಡ್ ತಂಡಗಳು ಬುಧವಾರದ 2ನೇ ಪಂದ್ಯದಲ್ಲಿ ಸೆಣಸಲಿವೆ. ನೆದರ್ಲೆಂಡ್ ಮತ್ತು ಟೆಸ್ಟ್ ಮಾನ್ಯತೆಯ ಐರ್ಲೆಂಡ್ ತಂಡಕ್ಕೆ ಆಘಾತ ನೀಡಿ ಗಮನ ಸೆಳೆದಿದ್ದ ಕೇವಲ 25 ಲಕ್ಷ ಜನಸಂಖ್ಯೆಯ ನೈರುತ್ಯ ಆಫ್ರಿಕಾದ ದೇಶ ನಮೀಬಿಯ, ಆಡುತ್ತಿರುವ ಚೊಚ್ಚಲ ಟಿ20 ವಿಶ್ವಕಪ್‌ನಲ್ಲೇ ಈ ಸಾಧನೆ ತೋರಿರುವುದು ಗಮನಾರ್ಹವಾಗಿದೆ.

    ಮತ್ತೊಂದೆಡೆ ಸ್ಕಾಟ್ಲೆಂಡ್ ತಂಡ ಮೊದಲ ಸುತ್ತಿನಲ್ಲಿ ಬಾಂಗ್ಲಾಗೆ ಸೋಲುಣಿಸಿ ಅಚ್ಚರಿ ಮೂಡಿಸಿದ್ದರೂ, ಸೂಪರ್-12ರಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 130 ರನ್‌ಗಳ ಭಾರಿ ಅಂತರದಿಂದ ಸೋತು ನಿರಾಸೆ ಅನುಭವಿಸಿತ್ತು. ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗಗಳಲ್ಲಿ ಕೈಲ್ ಕೋಯೆಟ್ಜರ್ ಬಳಗ ವೈಫಲ್ಯ ಕಂಡಿತ್ತು.

    ಸ್ಕಾಟ್ಲೆಂಡ್‌ಗೆ ಹೋಲಿಸಿದರೆ ನಮೀಬಿಯ ಬ್ಯಾಟಿಂಗ್ ಬಲಿಷ್ಠವಾಗಿದೆ. ನಾಯಕ ಎರಾಸ್ಮಸ್ ಮತ್ತು ಆಲ್ರೌಂಡರ್ ಡೇವಿಡ್ ವೈಸ್ ಬಿರುಸಿನ ಆಟದ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಸ್ಕಾಟ್ಲೆಂಡ್ ಬ್ಯಾಟಿಂಗ್ ವಿಭಾಗ ರಿಚಿ ಬೆರಿಂಗ್ಟನ್, ಜಾರ್ಜ್ ಮುನ್ಸೆ ಮತ್ತು ಮ್ಯಾಥ್ಯೂ ಕ್ರಾಸ್ ಅವರನ್ನು ನೆಚ್ಚಿಕೊಂಡಿದೆ. ಬೌಲಿಂಗ್‌ನಲ್ಲಿ ಜೋಶ್ ಡೇವಿ ಸ್ಕಾಟ್ಲೆಂಡ್‌ನ ಪ್ರಮುಖ ಶಕ್ತಿಯಾಗಿದ್ದಾರೆ.

    *ಪಂದ್ಯ ಆರಂಭ: ರಾತ್ರಿ 7.30
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 2
    ನಮೀಬಿಯ: 2
    ಸ್ಕಾಟ್ಲೆಂಡ್: 0

    ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ಗೂ ಸೋಲುಣಿಸಿದ ಪಾಕಿಸ್ತಾನ; ಭಾರತದ ಮೇಲೇನು ಪರಿಣಾಮ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts