More

    ‘ಅವರು ಪೀಠದಲ್ಲಿ ಕೂರಿಸಿದ್ರು, ಇವರು ಪೀಠದಿಂದ ಎಳೆದೊಯ್ದರು-ನಾನೇನು ಮಾಡಲಿ?’

    ಬೆಂಗಳೂರು: ಸಭಾಪತಿ ಸ್ಥಾನದಲ್ಲಿರುವ ಪ್ರತಾಪ್ ಚಂದ್ರ ಶೆಟ್ಟಿ ಅವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ಅವರನ್ನು ಹೊರಗಿಟ್ಟು ವಿಧಾನಪರಿಷತ್ ಕಲಾಪ ನಡೆಸಲು ಮುಂದಾಗಿದ್ದರು. ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್​ ಸದಸ್ಯರು ಇದಕ್ಕೆ ಪ್ರತಿರೋಧ ತೋರಿ ಕೈ-ಕೈ ಮಿಲಾಯಿಸಿದ ಕಾರಣ ಪರಿಷತ್ತಿನ ಇತಿಹಾಸದಲ್ಲಿ ಕಪ್ಪುಚುಕ್ಕೆಯೊಂದು ದಾಖಲಾಯಿತು.

    ಉಪಸಭಾಪತಿಯಾಗಿರುವ ಜೆಡಿಎಸ್​ನ ಎಸ್​.ಎಲ್.ಧರ್ಮೇಗೌಡ ಅವರನ್ನು ಸಭಾಪತಿ ಸ್ಥಾನದಲ್ಲಿ ಕುಳ್ಳಿರಿಸಿದ ಆಡಳಿತ ಪಕ್ಷದ ಸದಸ್ಯರು ಕಲಾಪ ಶುರುಮಾಡುವಂತೆ ಆಗ್ರಹಿಸಿದರು. ಇದೇ ವೇಳೆ, ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದತ್ತ ನುಗ್ಗಿ ಧರ್ಮೇಗೌಡರನ್ನು ಸಭಾಪತಿ ಸ್ಥಾನದಿಂದ ಎಬ್ಬಿಸಿ ಹಿಡಿದೆಳೆದುಕೊಂಡು ಅಲ್ಲಿಂದ ಕೆಳಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ಕಾಂಗ್ರೆಸ್ ಸದಸ್ಯರು ಕೈ – ಕೈ ಮಿಲಾಯಿಸಿ ಘಟನೆಯೂ ನಡೆಯಿತು.

    ಇದನ್ನೂ ಓದಿ: ಸಭಾಪತಿ ವಿರುದ್ದ ಅವಿಶ್ವಾಸ ಮಂಡನೆಗೆ ಸಿದ್ಧತೆ – ಮೇಲ್ಮನೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ?

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪಸಭಾಪತಿ ಧರ್ಮೇಗೌಡರು ಅಸಹಾಯಕರಾಗಿ ಹೇಳಿದ್ದಿಷ್ಟು – ಒಬ್ಬರು ಪೀಠದಲ್ಲಿ ತಂದು ಕೂರಿಸಿದರು. ಮತ್ತೊಬ್ಬರು ಪೀಠದಿಂದ ಎಳೆದೊಯ್ದರು. ನಾನೊಬ್ಬನೇ ಇರುವುದರಿಂದ ಏನು ಮಾಡುವುದು?

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ವಿಧಾನಪರಿಷತ್ ಹೈಡ್ರಾಮಾ : ಕೈ-ಕೈ ಮಿಲಾಯಿಸಿದ್ರು, ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿಯನ್ನು ದರ ದರನೆ ಎಳೆದೊಯ್ದರು ಕಾಂಗ್ರೆಸ್​ ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts