More

    ಹೈಕೋರ್ಟ್ ವಕೀಲ ಸುನೀಲಕುಮಾರ ಗುನ್ನಾಪುರಗೆ ರಾಜ್ಯಮಟ್ಟದ ಸ್ವೆರೋಸ್ ಕರ್ನಾಟಕ-2023 ಪ್ರಶಸ್ತಿ ಪ್ರದಾನ

    ವಿಜಯಪುರ: ಇಂದಿನ ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ. ಶಿಕ್ಷಣವೇ ದಾರಿ ದೀಪ. ದೇಶದಲ್ಲಿ ಶೈಕ್ಷಣಿಕ ಕ್ರಾಂತಿಯಾಗಬೇಕೆಂದು ಹೈಕೋಟ್ ವಕೀಲ ಸುನೀಲ ಗುನ್ನಾಪುರ ಅಭಿಪ್ರಾಯಿಸಿದರು.

    ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹರಣ್ ಶಿಕಾರಿ ಸಮುದಾಯ ಕಲಿಕಾ ಕೇಂದ್ರ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಸ್ವರೋಸ್ ಪದ ಆಕ್ಸಫರ್ಡ್ ಡಿಕ್ಶನರಿಯಲ್ಲಿ ಸೇರ್ಪಡೆಯಾದ ನಿಮಿತ್ತ ಮತ್ತು 3ನೇ ವರ್ಷದ ರಾಜ್ಯ ಮಟ್ಟದ ಸಮಾವೇಶ ಹಿನ್ನೆಲೆ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವೆರೋಸ್ ಕರ್ನಾಟಕ-2023ರ ರಾಜ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

    ಬಡ-ಶೋಷಿತ ಸಮುದಾಯಗಳ ಕಲ್ಯಾಣಕ್ಕೆ ಶಿಕ್ಷಣವೇ ಪ್ರಮುಖ ಅಸ್ತ್ರ. ಏನೆಲ್ಲ ಕಳೆದುಕೊಂಡರೂ ಅದು ಕಳೆದುಕೊಂಡಂತಲ್ಲ. ಶಿಕ್ಷಣ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ. ಹೀಗಾಗಿ ದೇಶದಲ್ಲಿ ಶಿಕ್ಷಣ ಕ್ರಾಂತಿಯಾಗಬೇಕು. ಶೋಷಿತ ಸಮುದಾಯಗಳು ಸಾಮಾಜಿಕ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಶಿಕ್ಷಣ ಅವಶ್ಯ. ರಾಜಕೀಯವಾಗಿ ಅಧಿಕಾರ ಹಿಡಿಯಲು ಸಹ ಶಿಕ್ಷಣ ಬೇಕು. ಅದಕ್ಕಾಗಿಯೇ ಬಡ-ಶೋಷಿತ ಸಮುದಾಯಗಳಿಗೆ ಶಿಕ್ಷಣ ಕೊಡಿಸಬೇಕೆಂದು ಬ್ರಿಟಿಷರಿಗೆ ದುಂಬಾಲು ಬಿದ್ದಿದ್ದರು ಎಂದರು.

    ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಶಿಕ್ಷಣಕ್ಕಾಗಿ ಎಲ್ಲವನ್ನೂ ತ್ಯಜಿಸಿದರು. ಅವರು ಅನ್ನಕ್ಕಾಗಿ ಅಕ್ಷರ ಕಲಿಯಲಿಲ್ಲ, ಬದಲಾಗಿ ಅಕ್ಷರಕ್ಕಾಗಿ ಅನ್ನವನ್ನೇ ತ್ಯಜಿಸಿದರು. ಜ್ಞಾನಕ್ಕಾಗಿ ಅಕ್ಷರ ಕಲಿತರು. ಇಂದು ಅವರ ಪರಿಶ್ರಮದ ಫಲವಾಗಿ ಬಡ-ಶೋಷಿತ ಸಮುದಾಯಗಳು ಶಿಕ್ಷಣ ಕಲಿಯುವಂತಾಗಿದೆ. ಶಿಕ್ಷಣವೇ ಎಲ್ಲದಕ್ಕೂ ದಾರಿ ದೀಪ. ಶಿಕ್ಷಣವೇ ಇಂದಿನ ಸಮಸ್ಯೆ ಕೀಲಿ ಕೈ ಎಂದರು.

    ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ತುಳಸಿಮಾಲ ಉದ್ಘಾಟಿಸಿದರು. ದೇವರಾಜ ಎನ್ ಅಧ್ಯಕ್ಷತೆ ವಹಿಸಿದ್ದರು. ಡಾ.ಅರ್ಜುನ ಗೊಳಸಂಗಿ, ಮಹದೇವಸ್ವಾಮಿ ಎನ್, ಡಾ.ಭಾಗ್ಯಲಕ್ಷ್ಮಿ, ನಾಗರಾಜ ಲಂಬು, ಅನೀಲ ಹೊಸಮನಿ, ಶ್ರೀನಾಥ ಪೂಜಾರಿ, ಪ್ರೊ.ಸಕ್ಪಾಲ ಹೂವಣ್ಣ, ತನುಶ್ರೀ ಕಾಳೆ, ಸುರೇಶ ಬಾಬು, ಗಾಯಿತ್ರಿ ವಿ.ಶಹಾಪುರ, ಎಂ.ಎ. ಬಕ್ಷಿ, ಆಕಾಶ್ ರಂಜೇರೆ, ಪ್ರೊ.ರಾಜಕುಮಾರ ಮಾಲಿಪಾಟೀಲ, ರಾಜೇಂದ್ರ, ಮಧು, ಡಾ.ಬಿ. ನವೀನ್ ಕುಮಾರ್, ಡಾ.ಆರ್.ವಿ. ಚಂದ್ರಶೇಖರ ಮತ್ತಿತರರಿದ್ದರು. ಇದಕ್ಕೂ ಮೊದಲು ಭವ್ಯ ಮೆರವಣಿಗೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts