More

    ಹೈಟೆಕ್ ಶೌಚಗೃಹ ನಿರ್ಮಾಣ ಮಾಡಿ: ಕಾರಟಗಿಯಲ್ಲಿ ಹಾಲಸಮುದ್ರ ಮಹಿಳೆಯರ ಪ್ರತಿಭಟನೆ

    ಕಾರಟಗಿ: ತಾಲೂಕಿನ ಬೂದಗುಂಪಾ ಗ್ರಾಪಂ ವ್ಯಾಪ್ತಿಯ ಹಾಲಸಮುದ್ರ ಗ್ರಾಮದಲ್ಲಿ ಹೈಟೆಕ್ ಸಾಮೂಹಿಕ ಮಹಿಳಾ ಶೌಚಗೃಹ ನಿರ್ಮಿಸುವಂತೆ ಆಗ್ರಹಿಸಿ ನೂರಾರು ಮಹಿಳೆಯರು ಪಟ್ಟಣದ ತಾಪಂ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

    ಗ್ರಾಮದಲ್ಲಿ ಎರಡು ಪ್ರತ್ಯೇಕ ಮಹಿಳಾ ಶೌಚಗೃಹಗಳಿದ್ದವು. ಅದೇ ಜಾಗದಲ್ಲಿ ಹೊಸ ಶೌಚಗೃಹಗಳನ್ನು ನಿರ್ಮಿಸಬೇಕು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜಾಗ ಕಬಳಿಸುವ ಹುನ್ನಾರ ನಡೆಸಿದ್ದು, ಗ್ರಾಪಂ ಅಧಿಕಾರಿಗಳು ಬೆಂಬಲವಾಗಿ ನಿಂತಿದ್ದಾರೆ. ಆದ್ದರಿಂದ ಶೌಚಗೃಹ ನಿರ್ಮಾಣಕ್ಕೆ ಅನಗತ್ಯವಾಗಿ ಅಡ್ಡಿಪಡಿಸುತ್ತಿದ್ದಾರೆ. ಹಳೇ ಜಾಗದಲ್ಲಿ ಶೌಚಗೃಹ ನಿರ್ಮಿಸುವುದರಿಂದ ಅನುಕೂಲವಾಗಲಿದೆ. ಯಾರ ಒತ್ತಡಕ್ಕೆ ಮಣಿಯದೆ ಗ್ರಾಪಂ ಅಧಿಕಾರಿಗಳು ಹೈಟೆಕ್ ಶೌಚಗೃಹ ನಿರ್ಮಿಸಬೇಕು. ಒಂದು ವೇಳೆ ಒಂದೇ ಕಡೆ ನಿರ್ಮಾಣಕ್ಕೆ ಮುಂದಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ನರೇಗಾ ಸಹಾಯಕ ನಿರ್ದೇಶಕ ಎನ್.ನರಸಪ್ಪಗೆ ಮನವಿ ಸಲ್ಲಿಸಿದರು. ಬಳಿಕ ಪೊಲೀಸ್ ಠಾಣೆಗೆ ತೆರಳಿ, ಶೌಚಗೃಹ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಕಡೇಮನಿ, ಸರಸ್ವತಿ, ವಿರುಪಮ್ಮ, ಗಂಗಮ್ಮ, ಮುರುಡಮ್ಮ ಕಂಡ್ರಿ, ರೇಣುಕಮ್ಮ, ಶಂಕ್ರಮಕ್ಕ, ದೇವಮ್ಮ, ಮರಿಯಮ್ಮ, ಚನ್ನಬಸಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts