More

    ಕುರಿಗಾಹಿಗಳಿಗಿದೆ ಜಗತ್ತನ್ನು ಮುನ್ನಡೆಸುವ ಶಕ್ತಿ

    ಚಿಕ್ಕಮಗಳೂರು: ಹಿಂದುಳಿದ, ದಲಿತರ, ಗುಡ್ಡಗಾಡು, ಗ್ರಾಮೀಣ ಪ್ರದೇಶದ ರೈತರ ಜೀವನಾಡಿಯಾಗಿರುವ ಕುರಿ ಮತ್ತು ಮೇಕೆ ಸಾಕಣೆಗೆ ಹೈಟೆಕ್ ಸ್ಪರ್ಶ ನೀಡುವ ಅಗತ್ಯವಿದೆ ಎಂದು ಜಿಲ್ಲಾ ಕುರಿ, ಉಣ್ಣೆ ಸಹಕಾರ ಸಂಘದ ಅಧ್ಯಕ್ಷ ಎ.ಎನ್.ಮಹೇಶ್ ತಿಳಿಸಿದರು.

    ನಗರದ ಪಶು ಸಂಗೋಪನೆ ಇಲಾಖೆ ಸಭಾಂಗಣದಲ್ಲಿ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಹಾಗೂ ಜನಸ್ಪಂದನ ಡೆವೆಲಪ್​ವೆುಂಟ್ ಸೊಸೈಟಿ ಆಶ್ರಯದಲ್ಲಿ ಶುಕ್ರವಾರ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಕುರಿಗಾರ ಪ್ರವರ್ತಕರಿಗೆ ಕುರಿ, ಮೇಕೆ ಸಾಕಣೆದಾರ ರೈತರ ಉತ್ಪಾದಕ ಕಂಪನಿ ರಚನೆ ಕುರಿತು ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಕುರಿ, ಮೇಕೆ ಸಾಕಣೆ ಸುತ್ತ ಹಬ್ಬಿರುವ ಸಂಸ್ಕೃತಿ, ಜ್ಞಾನ ಮತ್ತು ಆರ್ಥಿಕತೆಯಿಂದ ದೇಶ ಕಟ್ಟಬಹುದು. ವಿಶಿಷ್ಟ ಜ್ಞಾನ ಸಂಪತ್ತು, ಪರಂಪರೆ ಹೊಂದಿರುವ ಕುರಿಗಾಹಿಗಳಿಗೆ ಜಗತ್ತನ್ನು ಮುನ್ನಡೆಸುವ ಶಕ್ತಿ ಇದೆ. ಆದರೆ ಈ ಕಸುಬಿಗೆ ಬಡತನ ಕೀಳರಿಮೆ, ಅಸ್ಪೃಶ್ಯತೆ ಅಂಟಿಕೊಂಡಿದ್ದು ಜೀವನ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿಗೆ ಸಾಕಣೆದಾರರು ಸಂಘಟಿತರಾಗುವ ಅಗತ್ಯವಿದೆ ಎಂದರು.

    ಜನಸ್ಪಂದನ ಡೆವಲಪ್​ವೆುಂಟ್ ಸೊಸೈಟಿ ಯೋಜನಾ ನಿರ್ದೇಶಕ ಬಿ.ಎಸ್.ರಾಮಚಂದ್ರಪ್ಪ ಮಾತನಾಡಿ,

    ಭಾರತ ಸರ್ಕಾರದ ಕೃಷಿ ಮಂತ್ರಾಲಯ ರೈತ ಉತ್ಪಾದಕರ ಸಂಘಗಳು ಹಾಗೂ ರೈತರ ಆದಾಯ ದ್ವಿಗುಣಗೊಳಿಸಲು ರಾಜ್ಯ ಕುರಿ ಉಣ್ಣೆ ಮತ್ತು ಅಭಿವೃದ್ಧಿ ನಿಗಮ ಹಾಗೂ ಜನಸ್ಪಂದನ ಡೆವಲಪ್​ವೆುಂಟ್ ಸೊಸೈಟಿ ಮೂಲಕ ರೈತ ಉತ್ಪಾದಕರ ಸಂಸ್ಥೆ ರಚಿಸಿ ಕುರಿ, ಮೇಕೆ ಸಾಕಣೆದಾರರನ್ನು ಸಂಘಟಿಸಲು ಮುಂದಾಗಿದ್ದು ರೈತರು ಇದಕ್ಕೆ ಸ್ಪಂದಿಸಬೇಕಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts