More

    ಹೀರೋ, ವೋಕ್ಸ್‌ವ್ಯಾಗನ್ ವಾಹನಗಳ ದರ ಹೆಚ್ಚಳ; ಎಷ್ಟು, ಯಾವಾಗಿನಿಂದ? ಇಲ್ಲಿದೆ ಮಾಹಿತಿ

    ನವದೆಹಲಿ: ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಹೀರೋ ಮೋಟೋಕಾರ್ಪ್ ಮತ್ತು ಕಾರು ತಯಾರಿಕಾ ಸಂಸ್ಥೆ ವೋಕ್ಸ್‌ವ್ಯಾಗನ್ ಜನವರಿಯಲ್ಲಿ ದರ ಹೆಚ್ಚಳ ಮಾಡುವುದಾಗಿ ಗುರುವಾರ ತಿಳಿಸಿವೆ. ಕಚ್ಚಾಸಾಮಗ್ರಿ ಬೆಲೆ ಅಧಿಕವಾಗಿರುವ ಕಾರಣ ಎಲ್ಲ ಮಾಡಲ್‌ಗಳ ಬೆಲೆ ಕನಿಷ್ಠ 2 ಸಾವಿರ ರೂಪಾಯಿ ಏರಿಕೆ ಆಗಲಿದೆ.

    ಮಾಡಲ್‌ನಿಂದ ಮಾಡಲ್‌ಗೆ ದರ ಏರಿಕೆಯಲ್ಲಿ ವ್ಯತ್ಯಾಸ ಇರಲಿದ್ದು, ಪರಿಷ್ಕೃತ ದರವು ಜನವರಿ 4ರಿಂದ ಜಾರಿಗೆ ಬರಲಿದೆ ಎಂದು ಹೀರೋ ಮೋಟೋಕಾರ್ಪ್ ತಿಳಿಸಿದೆ. ಪ್ರಯಾಣಿಕರ ಕಾರಿನ ದರ ಶೇ. 2ರಿಂದ 5ರಷ್ಟು ಹೆಚ್ಚಳ ಆಗಲಿದ್ದು, ಜನವರಿ 1ರಿಂದಲೇ ಜಾರಿಯಾಗಲಿದೆ ಎಂದು ವೋಕ್ಸ್‌ವ್ಯಾಗನ್ ತಿಳಿಸಿದೆ.

    ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾದ ‘ಟಿಗುವಾನ್’ ಕಾರಿನ ದರ ಪರಿಷ್ಕರಣೆ ಆಗುವುದಿಲ್ಲ ಎಂದು ಹೇಳಿದೆ. ವಾಹನ ತಯಾರಿಕೆಗೆ ಅಗತ್ಯವಾದ ಉಕ್ಕು, ಅಲ್ಯುಮಿನಿಯಮ್, ತಾಮ್ರ ಇನ್ನಿತರ ಲೋಹಗಳ ದರವು ಕಳೆದ ಎರಡು ವರ್ಷದಿಂದ ಹೆಚ್ಚಳ ಆಗುತ್ತಿರುವ ಕಾರಣ ಮಾರುತಿ ಸುಜುಕಿ ಇಂಡಿಯಾ, ಟಾಟಾ ಮೋಟಾರ್ಸ್‌, ಟಯೋಟಾ ಕಿರ್ಲೋಸ್ಕರ್ ಮೋಟಾರ್, ಹೋಂಡಾ ಕಾರ್ಸ್‌ ಮತ್ತು ಸ್ಕೋಡ ಕಂಪನಿಗಳು ಕೂಡ ಮುಂದಿನ ತಿಂಗಳಿಂದ ದರ ಹೆಚ್ಚಿಸಲಿವೆ.

    ಪಕ್ಕದ ಮನೆಯ ಮಹಿಳೆಯರ ಜತೆಯಷ್ಟೇ ಸಲುಗೆಯಿಂದ ವರ್ತಿಸೋ ಪತಿಯ ಮನಸ್ಸನ್ನು ತಿಳಿಯೋದು ಹೇಗೆ ಮೇಡಂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts