More

    ದಕ್ಷಿಣ ಕಾಶಿಯಲ್ಲಿ ಸಂಭ್ರಮದ ಕರ್ಪೂದಾರತಿ

    ಹಿರಿಯೂರು: ಇಲ್ಲಿನ ಐತಿಹಾಸಿಕ ತೇರುಮಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ಫೆ.12ರಂದು ಕರ್ಪೂದಾರತಿ ಜರುಗಲಿದೆ.

    ರಥ ರೂಢನಾದ ಶ್ರೀ ಸ್ವಾಮಿಯನ್ನು ಗರ್ಭಗುಡಿಗೆ ಸೇರಿಸಿದ ನಂತರ ಅಂದು ರಾತ್ರಿ 8 ಗಂಟೆಗೆ ಕರ್ಪೂದಾರತಿ ಜರುಗಲಿದು, ರಾಜ್ಯದ ವಿವಿಧೆಡಯಿಂದ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.

    ದೇಗುಲದ ಆವರಣದಲ್ಲಿ ಮಹಿಳೆಯರು ಮತ್ತು ಮಕ್ಕಳು ಕರ್ಪೂರ ಹಚ್ಚುವ ಮೂಲಕ ದೇವರಿಗೆ ಭಕ್ತಿ ಸಮರ್ಪಿಸಲಿದ್ದಾರೆ.

    ತೇರುಮಲ್ಲೇಶ್ವರ, ಚಂದ್ರಮೌಳೇಶ್ವರ, ಉಮಾಮಹೇಶ್ವರಸ್ವಾಮಿ ರಥಾವರೋಹಣ ಉತ್ಸವದ ನಂತರ, ದೇಗುಲದ ಆವರಣದಲ್ಲಿನ 56 ಅಡಿ ಎತ್ತರದ ಸ್ತಂಭದ ಮೇಲೆ ಕರ್ಪೂರದ ದೀಪ ಹಚ್ಚಿದ ನಂತರ, ಸ್ತಂಭದ ಬಳಿ ಜಮಾಯಿಸುವ ಭಕ್ತರು ದೇವಸ್ಥಾನದ ಸುತ್ತ ಕರ್ಪೂರದ ರಾಶಿ ಹಾಕಿ ಹಚ್ಚಿಲಿದ್ದು, ಇಡೀ ದೇವಸ್ಥಾನದ ಆವರಣ ಬೆಳಕಿನಿಂದ ಝಗಮಗಿಸಲಿದೆ.

    ಕಾರ್ತಿಕ ಮಾಸ ಮತ್ತು ಜಾತ್ರೆಯ ಸಂದರ್ಭದಲ್ಲಿ ದೀಪ ಹಚ್ಚುವ ಸಂಪ್ರದಾಯ ನೂರಾರು ವರ್ಷದಿಂದ ನಡೆದುಕೊಂಡು ಬಂದಿದೆ.

    ದೀಪ ಸ್ತಂಭ: ದೇಗುಲದ ಗರ್ಭಗುಡಿ ಮುಂಭಾಗದಲ್ಲಿರುವ 58 ಅಡಿ ಎತ್ತರದ ಸ್ತಂಭ ಮತ್ತು 20 ಅಡಿ ಎತ್ತರದ ಬಸವಣ್ಣ ದೇವರ ಏಕಶಿಲ ದೀಪ ಸ್ತಂಭದ ತುದಿಯಲ್ಲಿ ಎಂಟು ಲೋಹದ ದೀಪಗಳಿದ್ದು, ಅವುಗಳಿಗೆ ಎಣ್ಣೆ ಮತ್ತು ಕರ್ಪೂರ ಹಾಕಿ ಶ್ರೀ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೀಪ ಹಚ್ಚಲಾಗುತ್ತದೆ.

    ಕರ್ಪೂದಾರತಿ ಐತಿಹಾಸಿಕ ಹಿನ್ನಲೆ: 600 ವರ್ಷಗಳ ಹಿಂದೆ ಹಿರಿಯೂರು ಪ್ರಾಂತ್ಯದಲ್ಲಿ ಆಳ್ವಿಕೆ ನಡೆಸುತ್ತಿದ್ದ ಪಾಳೇಗಾರರು ತಮ್ಮ ಭಕ್ತಿ ಮತ್ತು ಶೌರ್ಯದ ಪ್ರತೀಕವಾಗಿ ಧಾರ್ಮಿಕ ಆಚರಣೆಯನ್ನು ಜಾರಿಗೆ ತಂದಿದ್ದರು ಎಂದು ಸ್ಥಳೀಯರ ಅಭಿಪ್ರಾಯವಾಗಿದೆ.

    ಕರ್ಪೂರದಾರತಿ ಧಾರ್ಮಿಕ ಕಾರ್ಯ ದಕ್ಷಿಣ ಭಾರತದಲ್ಲಿ ವಿಶಿಷ್ಟ ಆಚರಣೆಯಾಗಿದ್ದು, ಬಯಲು ಸೀಮೆ ಜನರ ಆರಾಧ್ಯ ದೈವ ತೇರುಮಲ್ಲೇಶ್ವರ ಸ್ವಾಮಿ ಉತ್ತಮ ಮಳೆ, ಬೆಳೆ, ಸುಖ ಸಮೃದ್ಧಿ ಕರುಣಿಸಲೆಂದು ಪ್ರತಿ ವರ್ಷ ಜಾತ್ರೆಯ ಸಂದರ್ಭಲ್ಲಿ ಶ್ರೀ ಸ್ವಾಮಿಗೆ ಕರ್ಪೂರದ ದೀಪ ಹಚ್ಚಿ ತಮ್ಮ ಭಕ್ತಿಯನ್ನು ಸಮರ್ಪಿಸುವ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೀಪದ ಬೆಳಕು ನಾಲ್ಕೈದು ಕಿ.ಮೀ ದೂರದವರೆಗೆ ಕಾಣುತ್ತದೆ.

    ಕರ್ಪೂದಾರತಿ ಪೂಜೆಯನ್ನು ಮೊದಲು ಯಾರು ಮಾಡಬೇಕೆನ್ನುವುದನ್ನು ದೇವಸ್ಥಾನದ ಸೇವಾ ಸಮಿತಿ ಹರಾಜು ಮೂಲಕ ನಿರ್ಧರಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts