More

    ಹೇಮಮಾಲಿನಿ ಆಗ ಹುಡುಕಿದ್ದರೂ ಸಿಗದ್ದು ಇತ್ತೀಚೆಗೆ ಸಿಕ್ಕಿತು!

    ಮುಂಬೈ: ಡ್ರೀಮ್​ ಗರ್ಲ್ ಹೇಮಮಾಲಿನಿ ಅಂದು ಇದಕ್ಕಾಗಿ ತುಂಬಾ ಹುಡುಕಾಡಿದ್ದರು. ಆದರೆ ಅವತ್ತು ಎಷ್ಟು ಹುಡುಕಾಡಿದರೂ ಸಿಗದ್ದು ಇತ್ತೀಚೆಗೆ ಸಿಕ್ಕಿದ್ದು, ಅದನ್ನು ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ.

    ಆವತ್ತು ಲೇಖಕ ರಾಮ್​ ಕಮಲ್​ ಮುಖರ್ಜಿ ಅವರು ನನ್ನ ಜೀವನಚರಿತ್ರೆ ‘ಬಿಯಾಂಡ್​ ದ ಡ್ರೀಮ್​ ಗರ್ಲ್’ ಬರೆಯುತ್ತಿದ್ದಾಗ ನಾನು ಇದಕ್ಕಾಗಿ ಬಹಳ ಹುಡುಕಾಡಿದ್ದೆ. ಎಷ್ಟು ಹುಡುಕಾಡಿದರೂ ಸಿಗದ್ದಕ್ಕೆ ತುಂಬ ಬೇಸರವಾಗಿತ್ತು. ಕೊನೆಗೂ ಈಗ ಸಿಕ್ಕಿದ್ದರಿಂದ ತುಂಬ ಖುಷಿಯಾಗಿದೆ. ಹೀಗಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಅವರು ದೇವಿಯ ಗೆಟಪ್​ನಲ್ಲಿದ್ದ ಹಳೆಯ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಹೇಮಮಾಲಿನಿ ಆಗ ಹುಡುಕಿದ್ದರೂ ಸಿಗದ್ದು ಇತ್ತೀಚೆಗೆ ಸಿಕ್ಕಿತು!

    ಇದೊಂದು ಮ್ಯಾಗಜಿನ್​ಗಾಗಿ ಮಾಡಿದ್ದ ಫೋಟೋಶೂಟ್​. ಮ್ಯಾಗಜಿನ್ ಹೆಸರು ನೆನಪಿಲ್ಲ. ಆದರೆ ಇದನ್ನು ನಾನು ಅಂದು ರಾಜ್​ಕಪೂರ್ ಅವರ ಜತೆಗಿನ ಮೊದಲ ಹಿಂದಿ ಸಿನಿಮಾ “ಸಪ್ನೋಂಕಾ ಸೌದಾಗರ್”​ ಶೂಟಿಂಗ್​ಗೆ ಹೋಗುತ್ತ ಎವಿಎಂ ಸ್ಟುಡಿಯೋಸ್​ನಲ್ಲಿ ಕ್ಲಿಕ್ಕಿಸಿದ್ದು. ಆಗ ನನಗೆ 14-15 ವರ್ಷ ಎಂದು ಹೇಮಮಾಲಿನಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts