More

    ’10 ವರ್ಷದಲ್ಲಿ ಅದನ್ನು ಮಾಡುವುದು ಕಷ್ಟ’: ನಾಮಪತ್ರ ಸಲ್ಲಿಸಿದ ಹೇಮಾ ಮಾಲಿನಿ ಹೀಗೆ ಹೇಳಿದ್ದೇಕೆ?

    ಮಥುರಾ: ಮಥುರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ನಟಿ-ರಾಜಕಾರಣಿ ಕ್ರಮವಾಗಿ 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಮಥುರಾದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

    ಇದನ್ನೂ ಓದಿ: ಈ ಪಕ್ಷದ ಬಂಪರ್‌ ಆಫಾರ್.. ಅಭ್ಯರ್ಥಿ ಗೆಲ್ಲಿಸಿದ್ರೆ ಕಾರು, ಚಿನ್ನದ ಚೈನ್ ಉಡುಗೊರೆ..!

    ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಹೇಮಾಮಾಲಿನಿ, ಮುಂದಿನ ಅಭಿವೃದ್ಧಿಗಾಗಿ ಮೂರನೇ ಬಾರಿಗೆ ಇಲ್ಲಿಗೆ ಬಂದಿದ್ದು, ಬಾಕಿ ಉಳಿದಿರುವ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುತ್ತೇನೆ. ಎಲ್ಲರ ಸಹಕಾರದಿಂದ ಇಲ್ಲಿ ಅಭಿವೃದ್ಧಿ ಆಗಲಿದೆ ಎಂದು ಭರವಸೆ ನೀಡಿದರು.

    ಮಥುರಾದಲ್ಲಿ ಯಮುನಾ ನದಿಯ ಸ್ವಚ್ಛತಾ ಕಾಮಗಾರಿ, ಕೋಸಿ ನದಿ ಹರಿವು ಮಾರ್ಗ ನಿರ್ಮಾಣ, ರೈಲ್ವೆ ಹಳಿ ನಿರ್ಮಾಣದ ಕುರಿತು ಅವರು ಮಾತನಾಡಿದರು.

    ಒಂದು ದಶಕದಿಂದ ಯಮುನಾ ನದಿಯನ್ನು ಏಕೆ ಸ್ವಚ್ಛಗೊಳಿಸಲು ಸಾಧ್ಯವಾಗಲಿಲ್ಲ ಎಂದು ಕೇಳಿದಾಗ, ಅದು ಅಷ್ಟು ಸುಲಭವಲ್ಲ, 50 ವರ್ಷಗಳಲ್ಲಿ ಯಾರೂ ಮಾಡಲಿಲ್ಲ, 10 ವರ್ಷಗಳಲ್ಲಿ ಅದನ್ನು ಮಾಡುವುದು ಕಷ್ಟ. ಇನ್ನೂ 50ವರ್ಷ ಇದಕ್ಕೆ ಬೇಕು, ಆದರೂ, ನಾವು ಶುದ್ಧೀಕರಣಕ್ಕೆ ಶ್ರಮ ಹಾಕುತ್ತಿದ್ದೇವೆ. ಮೋದಿಜೀ, ಯೋಗಿಜಿ ಇದ್ದಾರೆ, ನಾವೆಲ್ಲರೂ ಒಟ್ಟಾಗಿ ಶುದ್ಧೀಕರಣ ಕಾಮಗಅರಿಯನ್ನು ತ್ವರಿತವಾಗಿ ಮಾಡುತ್ತೇವೆ ಎಂದರು..

    ತಮ್ಮ ವಿರುದ್ಧ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಅವರ ಟೀಕೆಗಳ ಬಗ್ಗೆ ಕೇಳಿದಾಗ, ಜೀವನದಲ್ಲಿ ಏನನ್ನಾದರೂ ಸಾಧಿಸಿದವರನ್ನು ಮಾತ್ರ ಗುರಿಯಾಗಿಸಲಾಗುತ್ತದೆ ಎಂದು ಮಾಲಿನಿ ಹೇಳಿದರು.

    ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ರಾಜ್ಯ ಜಲಶಕ್ತಿ ಸಚಿವ ಸ್ವತಂತ್ರ ದೇವ್ ಸಿಂಗ್ ಹಾಜರಿದ್ದರು. ಚುನಾವಣೆ 2ನೇ ಹಂತದಲ್ಲಿ ಅಂದರೆ ಏಪ್ರಿಲ್ 26 ರಂದು ಮಥುರಾದಲ್ಲಿ ಮತದಾನ ನಡೆಯಲಿದೆ.

    ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 4. ನಾಮಪತ್ರಗಳ ಪರಿಶೀಲನೆಯು ಏಪ್ರಿಲ್ 5 ರಂದು ನಡೆಯಲಿದೆ, ನಾಮಪತ್ರಗಳನ್ನು ಹಿಂಪಡೆಯಲು ಏಪ್ರಿಲ್ 8 ರವರೆಗೆ ಕಾಲಾವಕಾಶವಿದೆ.

    ಗೆಳೆಯನನ್ನು ಕೊಂದ ವ್ಯಕ್ತಿ 29 ವರ್ಷದ ನಂತರ ಸಿಕ್ಕಿಬಿದ್ದ​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts