More

    ಶಿಸ್ತಿನ ಜೀವನದಿಂದ ಕಾಯಿಲೆಮುಕ್ತ ಜೀವನ

    ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
    ಈ ಶತಮಾನ ಕಾಯಿಲೆಗಳ ಶತಮಾನವಾಗಿದೆ. ಕಂಡರಿಯದ ಕಾಯಿಲೆಗಳಿಗೆ ಗಣನೀಯವಾಗಿ ಯುವ ಜನತೆ ತುತ್ತಾಗುತ್ತಿರುವುದು ಆಘಾತಕಾರಿ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ತಿಮ್ಮಹನುಮಯ್ಯ ಕಳವಳ ವ್ಯಕ್ತಪಡಿಸಿದರು.
    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಐಕ್ಯೂಎಸಿ, ಎನ್‌ಎಸ್‌ಎಸ್ ಘಟಕ, ಯುವ ರೆಡ್‌ಕ್ರಾಸ್, ಲಯನ್ಸ್ ಕ್ಲಬ್ ಬೆಂಗಳೂರು ಎಲೈಟ್, ಸಪ್ತಗಿರಿ ಆಸ್ಪತ್ರೆ, ಲಯನ್ಸ್ ಬ್ಲಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
    ಯುವ ಜನತೆ ಶೈಕ್ಷಣಿಕ ಜೀವನದಲ್ಲೇ ಶಿಸ್ತಿನ ಜೀವನ ರೂಢಿಸಿಕೊಂಡರೆ ಕಾಯಿಲೆಗಳಿಂದ ದೂರವಿರಬಹುದು. ಇತ್ತೀಚೆಗೆ ಯುವಜನಾಂಗಕ್ಕೆ ರಕ್ತದಾನದ ಬಗ್ಗೆ ಅರಿವು ಉಂಟಾಗಿ, ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.
    ರಕ್ತದಾನ ಮಾಡಿದ ಕೇವಲ ಹದಿನೈದು ದಿನದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ರಕ್ತದಾನದಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಒಬ್ಬರ ರಕ್ತದಾನದಿಂದ ಮೂವರ ಪ್ರಾಣ ಉಳಿಸಬಹುದು, ಉಹಾಪೋಹಗಳಿಗೆ ಕಿವಿಗೊಡದೆ ಈ ಶ್ರೇಷ್ಠ ಕಾರ್ಯಕ್ಕೆ ಮುಂದಾಗಬೇಕು ಹಾಗೂ ಇತರರಲ್ಲೂ ಅರಿವು ಮೂಡಿಸಬೇಕು ಎಂದರು.
    ಲಯನ್ಸ್ ಕ್ಲಬ್ ಸದಸ್ಯ ರಾಮಕೃಷ್ಣಪ್ಪ ಮಾತನಾಡಿ, ಪ್ರಪಂಚದ 220 ದೇಶಗಳಲ್ಲಿ ನಮ್ಮ ಕ್ಲಬ್ ಅಸ್ತಿತ್ವದಲ್ಲಿದ್ದು, ಅತ್ಯಂತ ದೊಡ್ಡ ಸೇವಾ ಸಂಸ್ಥೆಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಅನೇಕ ಕಾರಣಗಳಿಂದ ದಿನದಿಂದ ದಿನಕ್ಕೆ ರಕ್ತದ ಅವಶ್ಯಕತೆ ಹೆಚ್ಚಾಗುತ್ತಿದೆ. ಒಂದು ದಿನಕ್ಕೆ 900ರಿಂದ 1100 ಯುನಿಟ್ ರಕ್ತದ ಬೇಡಿಕೆ ಹೆಚ್ಚಾಗಿದೆ ಎಂದರು.
    ಶಿಬಿರದಲ್ಲಿ 44 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಲಯನ್ ಗುರುಪ್ರಸಾದ್, ಸಪ್ತಗಿರಿ ಆಸ್ಪತ್ರೆಯ ಶಿಬಿರ ಸಂಯೋಜಕ ಫಣೀಂದ್ರನ್, ಡಾ.ಭರತ್,ಲಯನ್ಸ್ ಬ್ಲಡ್ ಬ್ಯಾಂಕ್ ಸುರೇಶ್, ಅಧ್ಯಾಪಕರಾದ ಡಾ.ಆರ್.ರತ್ನಮ್ಮ, ಎಸ್.ತಾರಾಮಣಿ, ಅರವಿಂದ್, ಮಂಜುನಾಥ್, ಆನಂದ್, ಡಿ.ಸಾಯಿಪ್ರಸಾದ್, ಸಿ.ಜಿ.ರಮೇಶ್, ಸಿದ್ದೇಶ್ವರಪ್ಪ, ವೀಣಾ, ಆಶಾ, ಯಲ್ಲಪ್ಪ, ಆಶೋಕ್ ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts