More

    ದೇವಸ್ಥಾನ ಜೀರ್ಣೋದ್ಧಾರದಿಂದ ಊರಿನ ಉದ್ಧಾರ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

    ಪಡುಬಿದ್ರಿ: ದೇವಸ್ಥಾನದ ಜೀರ್ಣೋದ್ಧಾರ ಇಡೀ ಊರಿನ ಭಕ್ತರ ಜೀವನ ಜೀರ್ಣೋದ್ಧಾರ ಆದಂತೆ. ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಳ್ಳುವುದು ಭಕ್ತರಾದ ನಮ್ಮೆಲ್ಲರ ಕರ್ತವ್ಯ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

    ಜೀರ್ಣೋದ್ಧಾರಗೊಳ್ಳುತ್ತಿರುವ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೆಜಮಾಡಿ ಬಸ್‌ನಿಲ್ದಾಣ ಬಳಿಯ ಪುರಾತನ ಅಶ್ವತ್ಥಕಟ್ಟೆಯಿಂದ ಭಾನುವಾರ ಮೆರವಣಿಗೆಯಲ್ಲಿ ತಂದ ನೂತನ ಧ್ವಜಸ್ತಂಭವನ್ನು ಸ್ವಾಗತಿಸಿ, ಆಶೀರ್ವಚನ ನೀಡಿದರು.

    ದೇವಳದ ತಂತ್ರಿ ರಾಧಾಕೃಷ್ಣ ತಂತ್ರಿ ಎಡಪದವು, ಅರ್ಚಕರಾದ ರಾಮಚಂದ್ರ ಭಟ್, ಪದ್ಮನಾಭ ಭಟ್, ಶ್ರೀನಿವಾಸ ಆಚಾರ್ಯ, ಪದ್ಮನಾಭ ಆಚಾರ್ಯ ಧ್ವಜಸ್ತಂಭ ಸ್ವಾಗತದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಬಳಿಕ ಸುತ್ತು ಪೌಳಿ ನಿರ್ಮಾಣ ಕಾಮಗಾರಿಗೆ ಗ್ರಾಮಸ್ಥರು ಕರಸೇವೆ ನಡೆಸಿದರು.
    ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ್ ಶೆಟ್ಟಿ ಪುಣೆ, ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಮಾಜಿ ಸಚಿವ

    ವಿನಯಕುಮಾರ್ ಸೊರಕೆ, ಜಿ.ಪಂ. ಸದಸ್ಯರಾದ ಶಶಿಕಾಂತ ಪಡುಬಿದ್ರಿ, ಗೀತಾಂಜಲಿ ಎಂ.ಸುವರ್ಣ, ತಾಪಂ ಸದಸ್ಯರಾದ ರೇಣುಕಾ ಪುತ್ರನ್, ನೀತಾ ಗುರುರಾಜ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಪ್ರಭಾಕರ ಪೂಜಾರಿ ಕಾಪು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ದೇವಳದ ಮೊಕ್ತೇಸರರಾದ ಶಂಕರ ಶೆಟ್ಟಿ, ರವೀಂದ್ರ ಕೋಟ್ಯಾನ್, ಜಯಂತ್ ಪುತ್ರನ್, ಸಂಜೀವ ಟಿ., ಗಣೇಶ್ ಸಿ.ಆಚಾರ್ಯ, ಸುರೇಶ್ ದೇವಾಡಿಗ, ಪಾಂಡುರಂಗ ಕರ್ಕೇರ, ಇಂದಿರೇಶ್ ಸಾಲ್ಯಾನ್, ಜಯಂತಿ ಅಚಾರ್ಯ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಘುಪತಿ ರಾವ್, ಉಪಾಧ್ಯಕ್ಷರಾದ ಅರುಣ್ ಶೆಟ್ಟಿ ಪಡುಮನೆ, ಜಿನರಾಜ ಬಂಗೇರ, ಸುಧಾಕರ ಕರ್ಕೇರ, ಲೋಕೇಶ್ ಅಮೀನ್, ಹರೀಶ್ ದೇವಾಡಿಗ, ರಾಜೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ದಿವಾಕರ ಹೆಜಮಾಡಿ, ಕೋಶಾಧಿಕಾರಿ ಎಚ್.ಆರ್. ರಮೇಶ್ ಭಟ್, ಮುಂಬೈ ಸಮಿತಿ ಅಧ್ಯಕ್ಷ ಪುಷ್ಪರಾಜ್ ಎಸ್.ಶೆಟ್ಟಿ, ಹೆಜಮಾಡಿ ಏಳೂರು ಮೊಗವೀರ ಸಭಾ ಅಧ್ಯಕ್ಷ ಸದಾಶಿವ ಕೋಟ್ಯಾನ್, ನಾರಾಯಣ ಮೆಂಡನ್, ದಾಮೋದರ ಬಂಗೇರ ಹಾಗೂ ವಿವಿಧ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

    60 ಅಡಿ ಉದ್ದದ ಕೊಡಿಮರ
    ಸುಳ್ಯದಿಂದ ಆಗಮಿಸಿದ 60 ಅಡಿ ಉದ್ದದ ಕೊಡಿಮರವನ್ನು ಮೂಲ್ಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ವಾಹನ ಮೆರವಣಿಗೆಯಲ್ಲಿ ತಂದು ಹೆಜಮಾಡಿ ಪುರಾತನ ಅಶ್ವತ್ಥಕಟ್ಟೆ ಬಳಿಯಿಂದ ವೈಭವಯುತ ಶೋಭಾಯಾತ್ರೆ ಮೂಲಕ ದೇವಳಕ್ಕೆ ತರಲಾಯಿತು. ಹೆಜಮಾಡಿ ಗರಡಿಮನೆ ದಿ.ಕುಮುದಾ ಎಸ್.ಶೆಟ್ಟಿ ಸ್ಮರಣಾರ್ಥ ಅವರ ಪತಿ ಸದಾಶಿವ ಶೆಟ್ಟಿ ಧ್ವಜಸ್ತಂಭ ನಿರ್ಮಾಣ ಕೊಡುಗೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts