More

    ನಾಳೆ ಗಣಪತಿಕೆರೆ ಬಳಿ ರಾಷ್ಟ್ರಧ್ವಜ ಲೋಕಾರ್ಪಣೆ

    ಸಾಗರ: ಇತಿಹಾಸ ಪ್ರಸಿದ್ಧ ಗಣಪತಿಕೆರೆ ಮೇಲ್ದಂಡೆ ಸಮೀಪ ನಿರ್ವಿುಸಿರುವ ರಾಜ್ಯದಲ್ಲಿಯೇ ಎರಡನೇ ಅತೀ ಎತ್ತರದ ಶಾಶ್ವತ ಧ್ವಜಸ್ತಂಭ ಲೋಕಾರ್ಪಣೆ ಜ.26ರ ಬೆಳಗ್ಗೆ 8ಕ್ಕೆ ನಡೆಯಲಿದೆ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದ್ದಾರೆ.

    ಧ್ವಜಸ್ತಂಭದ ಸಮೀಪ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಂಗಳೂರು ತಂಡದ ರಸಮಂಜರಿ ಕಾರ್ಯಕ್ರಮ, ಕಬಡ್ಡಿ ಪಂದ್ಯಾವಳಿ, ರಂಗೋಲಿ ಸ್ಪರ್ಧೆ ಹಾಗೂ ಆಹಾರ ಮೇಳ ನಡೆಯಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

    ಸೋಮವಾರ ಬೆಳಗ್ಗೆ ಕಾಮಗಾರಿಯ ಪೂರ್ವಸಿದ್ಧತೆ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಹಲವು ವರ್ಷಗಳಿಂದ ಗಣಪತಿಕೆರೆಯಲ್ಲಿ ಹೂಳು ತುಂಬಿತ್ತು. ಸರ್ಕಾರ ಮತ್ತು ಸಾರ್ವಜನಿಕರ ಸಹಕಾರದಿಂದ ಜೀಣೋದ್ಧಾರ ಕಾರ್ಯ ನಡೆದಿದೆ. ಈಗ ಕೆರೆ ಸಂಪೂರ್ಣ ಕಾಯಕಲ್ಪಗೊಂಡಿದ್ದು, ಕೆರೆಹಬ್ಬದ ಪ್ರಯುಕ್ತ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.

    ಪ್ರವಾಸೋದ್ಯದಮ ದೃಷ್ಟಿಯಿಂದ ಕೆರೆ ಅಭಿವೃದ್ಧಿಗೊಳಿಸಲಾಗುತ್ತಿದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

    9.85 ಕೋಟಿ ರೂ. ವೆಚ್ಚದಲ್ಲಿ ನೂತನ ವಿನ್ಯಾಸದೊಂದಿಗೆ ತಾಲೂಕು ಕಚೇರಿ ಜಾಗದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಆಗುತ್ತಿದೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ ಹಣ ಬಿಡುಗಡೆಯಾಗಿರಲಿಲ್ಲ. ಈಗ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದೆ. ಹಿಂದಿನ ಸರ್ಕಾರದ ಅಡಿಗಲ್ಲು ಹಾಗೂ ಪ್ರಸ್ತುತ ಕಾರ್ಯಕ್ರಮದ ಶಂಕುಸ್ಥಾಪನೆ ಫಲಕವೂ ಇರಲಿದೆ. ಕಾಗೋಡು ತಿಮ್ಮಪ್ಪ ಮಂತ್ರಿ ಆಗಿದ್ದಾಗ ಮಿನಿ ವಿಧಾನಸೌಧ ನಿರ್ವಣಕ್ಕೆ ಪ್ರಯತ್ನಿಸಿದ್ದರು ಎಂದು ತಿಳಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಬಿಜೆಪಿ ನಗರಾಧ್ಯಕ್ಷ ಗಣೇಶ್​ಪ್ರಸಾದ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ಯು.ಎಚ್.ರಾಮಪ್ಪ, ವಿನಾಯಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts