More

    ಕರ್ನಾಟಕದಲ್ಲಿ ನಡೆದ ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ

    ಲಖನೌ: ಬಳ್ಳಾರಿ ಜಿಲ್ಲೆಯಲ್ಲಿ ಕೊವಿಡ್​-19 ಸೋಂಕಿನಿಂದ ಮೃತಪಟ್ಟವರ ಶವವನ್ನು ಗುಂಡಿಯಲ್ಲಿ ಎಸೆದು, ಅಮಾನವೀಯವಾಗಿ ಅಂತ್ಯಕ್ರಿಯೆ ನಡೆಸಿದ ವಿಡಿಯೋ ಎಲ್ಲೆಡೆ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಆರೋಗ್ಯ ಕಾರ್ಯಕರ್ತರು ಮೂರ್ನಾಲ್ಕು ಶವವನ್ನು ಒಂದೇ ದೊಡ್ಡದಾದ ಗುಂಡಿಯಲ್ಲಿ ಬಿಸಾಕಿ ಮಣ್ಣು ಮಾಡಿದ್ದನ್ನು ಹಲವರು ಖಂಡಿಸಿದ್ದಾರೆ.

    ಬಳ್ಳಾರಿಯಲ್ಲಿ ನಡೆದ ಈ ಕೃತ್ಯವನ್ನು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರೂ ಖಂಡಿಸಿದ್ದು, ಇದು ಕ್ರೂರತನದ ಪರಮಾವಧಿ ಎಂದಿದ್ದಾರೆ.  ಶವಗಳನ್ನು ಇಷ್ಟು ಅಮಾನವೀಯವಾಗಿ ಸಮಾಧಿ ಮಾಡಿದವರಿಗೆ ರಾಜ್ಯ ಸರ್ಕಾರ ಶಿಕ್ಷೆ ನೀಡಬೇಕು. ಮೃತ ಕರೊನಾ ರೋಗಿಗಳೊಂದಿಗೆ ಮಾನವೀಯತೆಗೆ ಅವಮಾನ ಮಾಡುವಂತಹ ವರ್ತನೆ ತೋರಿಸಿದ್ದಾರೆ ಎಂದು ಮಾಯಾವತಿ ಟ್ವೀಟ್​ ಮಾಡಿದ್ದಾರೆ.

    ಹಾಗೇ ಇನ್ನೊಂದು ಟ್ವೀಟ್​ ಮಾಡಿರುವ ಅವರು, ಕರೊನಾ ಸಾಂಕ್ರಾಮಿಕ ಸಂಪೂರ್ಣ ಕೊನೆಗಾಣುವವರೆಗೂ ಬಡವರಿಗೆ ನೆರವಾಗಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪ್ರಧಾನಮಂತ್ರಿ ಗರೀಬ್​ ಕಲ್ಯಾಣ್​ ಯೋಜನೆಯಡಿ ಬರಿ ನವೆಂಬರ್​ವರೆಗೆ ಮಾತ್ರ ಉಚಿತ ರೇಷನ್​ ನೀಡದೆ, ಈ ಕರೊನಾ ಸಂಕಷ್ಟ ಮುಗಿಯುವವರೆಗೂ ವಿತರಣೆ ಮಾಡಿ ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts