More

    ಮುಂದುವರಿಯಲಿದೆ ಮಳೆ ಶಾಲೆಗಳಿಗೆ ರಜೆ ಇದ್ಯಾ..?

    ಕಾರವಾರ: ಜು.27 ರಂದೂ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ರೆಡ್ ಅಲರ್ಟ್ ಮುಂದುವರಿಸಲಾಗಿದೆ. 215 ಮಿಮೀಗಿಂತ ಹೆಚ್ಚು ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.

    ಪರಿಸ್ಥಿತಿ ನೋಡಿ ಶಾಲೆ, ಕಾಲೇಜ್‌ಗಳಿಗೆ ರಜೆ ನೀಡುವ ಜವಾಬ್ದಾರಿಯನ್ನು ಆಯಾ ತಹಸೀಲ್ದಾರ್‌ಗಳಿಗೆ ವಹಿಸಲಾಗಿದ್ದು, ಇದುವರೆಗೂ ಎಲ್ಲೂ ರಜೆ ಘೋಷಣೆಯಾಗಿಲ್ಲ.
    ಬುಧವಾರ ಬೆಳಗಿನ ವರದಿಯಂತೆ ಅಂಕೋಲಾ-80.2, ಭಟ್ಕಳ-113.3, ಹಳಿಯಾಳ-38.3, ಹೊನ್ನಾವರ-109.2, ಕಾರವಾರ-64.3, ಕುಮಟಾ-73.1, ಮುಂಡಗೋಡ-21.7, ಸಿದ್ದಾಪುರ-94.5, ಶಿರಸಿ-70.8, ಜೊಯಿಡಾ-105.8, ಯಲ್ಲಾಪುರ-43.3, ದಾಂಡೇಲಿ-57.1 ಮಿಮೀ ಮಳೆಯಾಗಿದೆ.

    ಇದನ್ನೂ ಓದಿ:ಮುಂದುವರಿದ ಮಳೆ-ಗಾಳಿ
    ಮಳೆಯಿಂದ ಹಳಿಯಾಳದಲ್ಲಿ 1 ಮನೆಗೆ ಸಂಪೂರ್ಣ ಹಾನಿಯಾಗಿದ್ದು, ಭಟ್ಕಳ-4, ಮುಂಡಗೋಡ-2, ಅಂಕೋಲಾ-1 ಮನೆಗೆ ಭಾಗಶಃ ಹಾನಿಯಾಗಿದೆ. ಸಿದ್ದಾಪುರ-4, ಅಂಕೋಲಾ, ಶಿರಸಿ ತಲಾ-3, ಕುಮಟಾ-6, ಹೊನ್ನಾವರ-2, ಹಳಿಯಾಳ-1 ಮನೆಗೆ ಭಾಗಶಃ ಹಾನಿಯಾಗಿದೆ. ಮುಂಡಗೋಡ ಹಾಗೂ ಸಿದ್ದಾಪುರದ ತಲಾ 1 ಜಾನುವಾರುಗಳು ಕೊಚ್ಚಿ ಹೋಗಿವೆ.

    ಹೆಚ್ಚುವರಿ ನೀರು ಬಿಡುಗಡೆ

    ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಿದ್ದರಿಂದ ಕದ್ರಾ ಅಣೆಕಟ್ಟೆಯಿಂದ ನೀರು ಬಿಡುವ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಇದುವರೆಗೆ 6 ಗೇಟ್‌ಗಳನ್ನು ತೆರೆದು ನೀರು ಬಿಡಲಾಗುತ್ತಿತ್ತು.

    ಬುಧವಾರ ಮತ್ತೆರಡು ಗೇಟ್ ಎತ್ತಿ ಒಟ್ಟು 8 ಗೇಟ್‌ಗಳ ಮೂಲಕ 40,673 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ವಿದ್ಯುತ್ ಉತ್ಪಾದಿಸಿ 18,889 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, 59,662 ಕ್ಯೂಸೆಕ್ ನೀರು ನದಿಗೆ ಹರಿಯುತ್ತಿದೆ.

    54,365 ಕ್ಯೂಸೆಕ್ ಒಳಹರಿವಿದ್ದು, ಗರಿಷ್ಠ 34.50 ಮೀಟರ್ ಸಂಗ್ರಹಿಸಬಹುದಾದ ಅಣೆಕಟ್ಟೆಯಲ್ಲಿ ಸದ್ಯ 30.44 ಮೀಟರ್ ನೀರಿದೆ.
    ಕೊಡಸಳ್ಳಿ ಅಣೆಕಟ್ಟೆಯಿಂದ 5 ಗೇಟ್‌ಗಳ ಮೂಲಕ 17,761 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ವಿದ್ಯುತ್ ಉತ್ಪಾದಿಸಿ 13,125 ಸೇರಿ, 30,886 ಕ್ಯೂಸೆಕ್ ನೀರು ಹೊರ ಹೋಗುತ್ತಿದೆ. 24,019 ಕ್ಯೂಸೆಕ್ ನೀರಿದ್ದು, ಗರಿಷ್ಠ 75.50 ಮೀಟರ್ ನೀರು ಸಂಗ್ರಹಿಸಬಹುದಾದ ಅಣೆಕಟ್ಟೆಯಲ್ಲಿ 69.85 ಮೀಟರ್ ನೀರಿದೆ. ಸೂಪಾ ಅಣೆಮಟ್ಟೆಗೆ 44,581 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಗರಿಷ್ಠ 564 ಮೀಟರ್ ಸಂಗ್ರಹಣಾ ಸಾಮರ್ಥ್ಯದ ಅಣೆಕಟ್ಟೆಯಲ್ಲಿ 541 ಮೀಟರ್ ನೀರು ಸಂಗ್ರಹವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts