More

    ಕೋಲಾರ ಜಿಲ್ಲೆಯಲ್ಲಿ ಚಿತ್ತೈಸಿದ ಮಳೆರಾಯ

    ಕೋಲಾರ: ಜಿಲ್ಲೆಯಾದ್ಯಂತ ಶುಕ್ರವಾರ ಮಧ್ಯಾಹ್ನದಿಂದ ಆರಂಭವಾಗಿ ವಿವಿಧೆಡೆ ಉತ್ತಮ ಹಾಗೂ ಇನ್ನೂ ಕೆಲ ಭಾಗಗಳಲ್ಲಿ ಗುಡುಗು-ಮಿಂಚು ಸಹಿತ ಸಾಧಾರಣ ಮಳೆಯಾಗಿದೆ.

    ಚಿತ್ತ ಮಳೆ ಕಡೇ ದಿನದಂದು ನಗರದಲ್ಲಿ ಮಧ್ಯಾಹ್ನದಿಂದಲೇ ಮೋಡ ಮುಸುಕಿದ ವಾತಾವರಣ ಮಳೆ ಮುನ್ಸೂಚನೆ ನೀಡಿತ್ತು. ಸಂಜೆ 5.30ರಿಂದ ಒಂದು ಗಂಟೆಗೂ ಹೆಚ್ಚು ಕಾಲ ಸಾಧಾರಣ ಮಳೆಯಾಗಲಾರಂಭಿಸಿತಲ್ಲದೆ ಗುಡುಗು, ಮಿಂಚು ಮಳೆಗಾಲದ ಅನುಭವ ನೀಡಿತು. ರಸ್ತೆ ಅಭಿವೃದ್ಧಿ ಪ್ರಗತಿಯಲ್ಲಿರುವುದರಿಂದ ಅಲ್ಲಲ್ಲಿ ಕೆಸರುಗದ್ದೆಯಂತಾಗಿ ವಾಹನ ಸವಾರರು ಪರದಾಡುವಂತಾಯಿತು.

    ಗ್ರಾಮೀಣ ಭಾಗದಲ್ಲಿ ಸಂಜೆಯಿಂದಲೇ ಸಾಧಾರಣ ಮಳೆಯಾಗಿ ಕಾಲುವೆಗಳಲ್ಲಿ ಸ್ವಲ್ಪ ನೀರು ಹರಿದಿದೆ. ರಾಗಿ ಬೆಳೆ ತೆನೆ ಕಟ್ಟಿ ಬಲಿಯುವ ಹಂತದಲ್ಲಿದೆ. ಕಳೆದ ಹತ್ತು ದಿನಗಳಿಂದ ಆಗಾಗ್ಗ ಸುರಿಯುತ್ತಿರುವ ಮಳೆಗೆ ರಾಗಿ ತೆನೆಗಳು ಧರಾಶಾಹಿಯಾಗಿದ್ದು, ಬೆಳೆ ನಷ್ಟದ ಆತಂಕದಲ್ಲಿ ರೈತರಿದ್ದಾರೆ.

    ಮುಳಬಾಗಲು, ಶ್ರೀನಿವಾಸಪುರದಲ್ಲಿ ಮಧ್ಯಾಹ್ನವೇ ಮಳೆಯಾದರೆ ಬಂಗಾರಪೇಟೆ, ಬೂದಿಕೋಟೆ ಭಾಗ, ಕೆಜಿಎಫ್ ಸುತ್ತಮುತ್ತಲ ಪ್ರದೇಶದಲ್ಲಿ ಸಂಜೆಯಿಂದ ಮಳೆಯಾಗಿದೆ. ಮಾಲೂರು ಪಟ್ಟಣ, ಲಕ್ಕೂರು ಗ್ರಾಮೀಣ ಭಾಗದಲ್ಲಿ ಸಂಜೆ 6.10ರಿಂದ ತುಂತುರು ಮಳೆ ಸುರಿಯಲಾರಂಭಿಸಿ ಕೆಲ ಕಾಲ ಸುರಿದು ತಣ್ಣಗಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts