More

    ಭಾರೀ ಮಳೆ: ಕೊಡಗಿನಲ್ಲಿ ಕುಸಿದ ರಸ್ತೆ, ಶಿವಮೊಗ್ಗದಲ್ಲಿ ಮನೆಗಳಿಗೆ ನುಗ್ಗಿದ ನೀರು

    ಕೊಡಗು: ಜಿಲ್ಲೆಯಲ್ಲಿ ಮುಂದುವರೆದ ಮಳೆ ಅಬ್ಬರ ಮುಂದುವರಿದಿದ್ದು, ಮಡಿಕೇರಿ- ಮಕ್ಕಂದೂರು ರಸ್ತೆಯಲ್ಲಿ ಬೃಹತ್ ಮರ ಉರುಳಿದೆ. ಮಡಿಕೇರಿ- ಸಿದ್ದಾಪುರ ರಸ್ತೆ ಬದಿ ಕುಸಿತ ಕಂಡಿದೆ. ನೂತನವಾಗಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ಇದಾಗಿದ್ದು, ಹಳ್ಳಕೊಳ್ಳದಲ್ಲಿ ನೀರಿನ ಮಟ್ಟ ಏರಿಕೆಯಾದ್ದರಿಂದಾಗಿ ಕುಸಿತ ಸಂಭವಿಸಿದೆ. ಮುಂದಿನ ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ.

    ಶಿವಮೊಗ್ಗದಲ್ಲಿ ಮನೆಗಳಿಗೆ ನುಗ್ಗಿದ ನೀರು: ಜಿಲ್ಲೆಯಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು, ಭಾರೀ ಮಳೆಯಿಂದಾಗಿ ಶಿವಮೊಗ್ಗದ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗುತ್ತಿದೆ. ಆರ್ ಎಂ ಎಲ್ ನಗರದ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಿಂದ‌ ನೀರು ಹೊರಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ. ಅಗ್ನಶಾಮಕ ವಾಹನಗಳ ನಿಯೋಜನೆ ಮಾಡಲಾಗಿದ್ದು, ಜಲಾವೃತಗೊಂಡಿರುವ ಮನೆಗಳಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

    ಇನ್ನು ಬಿ.ಎಚ್.ರಸ್ತೆ ಮೇಲೆ ನಿಂತಿರುವ ಅರ್ಧ ಅಡಿಗೂ ಹೆಚ್ಚು‌ ನೀರು ನಿಂತಿದ್ದು, ವಾಹನ ಸವಾರು ಪರದಾಡುತ್ತಿದ್ದಾರೆ. ರತ್ನಾಕರ ಲೇ ಔಟ್ ನ ಗಾರೆ ನಾಲೆ ಉಕ್ಕಿ ಹರಿಯಲಾರಂಭಿಸಿದೆ. ಗಾರೆ ನಾಲೆ ಉಕ್ಕಿ ಹರಿಯಲಾರಂಭಿಸಿದ್ದು ಜಲಾಪಾತವನ್ನೇ ಸೃಷ್ಟಿ ಮಾಡಿದೆ.(ದಿಗ್ವಿಜಯ ನ್ಯೂಸ್​)

    ಭಾರೀ ಮಳೆಗೆ ಕುಸಿದ ಸೇತುವೆ : ಬೆಂಗಳೂರು-ಮೈಸೂರು ರಸ್ತೆಯಲ್ಲಿ ಟ್ರಾಫಿಕ್​ ಜಾಮ್​, ವಾಹನ ಸವಾರರ ಪರದಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts