More

    ಭಾರೀ ಮಳೆಗೆ ಕುಸಿದ ಸೇತುವೆ : ಬೆಂಗಳೂರು-ಮೈಸೂರು ರಸ್ತೆಯಲ್ಲಿ ಟ್ರಾಫಿಕ್​ ಜಾಮ್​, ವಾಹನ ಸವಾರರ ಪರದಾಟ

    ಮಂಡ್ಯ: ರಾಜ್ಯದ ಹಲವೆಡೆ ಎಡಬಿಡದೇ ಸುರಿಯುತ್ತಿರುವ ಮಳೆಗೆ ಭಾರೀ ಅನಾಹುತವೇ ಸೃಷ್ಟಿಯಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಸಂಕಷ್ಟ ಎದುರಾಗಿದೆ.

    ಇನ್ನು ಸಕ್ಕರೆ ನಾಡು ಮಂಡ್ಯದಲ್ಲಿ ಸೇತುವೆಯೇ ಕುಸಿದಿದೆ. ನಿನ್ನೆಯಿಂದ ಸುರಿಯುತ್ತಿರುವ ಮಳೆಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಡ್ಡಲಾಗಿ ನಿರ್ಮಿಸಿದ್ದ ಮಂಡ್ಯದ ಇಂಡುವಾಳು ಬಳಿ ಸೇತುವೆ ಕೊಚ್ಚಿಹೋಗಿದೆ.

    ಹಳ್ಳದಲ್ಲಿ ನೀರು ಹೆಚ್ಚಾದ ಕಾರಣದಿಂದ ಸೇತುವೆ ಕೊಚ್ಚಿಹೋಗಿದ್ದು, ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿರುವ ವಾಹನ ಸವಾರರು ಹೈರಾಣಾಗಿದ್ದಾರೆ. ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.ಮಳೆ ಹೆಚ್ಚಾದ್ರೆ ಹೆದ್ದಾರಿ ಇನ್ನಷ್ಟು ಕುಸಿಯುವ ಆತಂಕ ವ್ಯಕ್ತವಾಗಿದೆ.

    ಈ ಮಧ್ಯೆ ಮಂಡ್ಯದ ಬೀಡಿ ಕಾಲನಿ ಸಂಪೂರ್ಣ ಜಲಾವೃತಗೊಂಡಿದ್ದು, 1000 ಕ್ಕೂ ಹೆಚ್ಚು ಮನೆಗಳಿರುವ ಕಾಲೋನಿ ರಾತ್ರಿಯಿಡೀ ನೀರಿನಿಂದ ಜಲಾವೃತಗೊಂಡಿದೆ. ಊಟ, ನಿದ್ದೆ ಇಲ್ಲದೇ ಕಂಗಾಲದ ಮಕ್ಕಳು, ವೃದ್ಧರು.ಸಂಕಷ್ಟದಲ್ಲಿದ್ದಾರೆ. ಸದ್ಯ ಜನಪ್ರತಿನಿಧಿಗಳ ನೆರವಿಗೆ ಇಲ್ಲಿನ ಜನರು ಕಾಯುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts