More

    ಹೂಬಳ್ಳಿಯಲ್ಲಿ ಮತ್ತೆ ರಭಸವಾದ ಮಳೆ

    ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಒಂದು ವಾರದಿಂದ ಕಡಿಮೆಯಾಗಿದ್ದ ಮಳೆರಾಯನ ಆರ್ಭಟ ಮತ್ತೆ ಶುರುವಾಗಿದೆ. ನಗರದಲ್ಲಿ ಭಾನುವಾರ ಸಂಜೆ ಎರಡು ಗಂಟೆಗಳ ಕಾಲ ರಭಸವಾದ ಮಳೆ ಸುರಿಯಿತು.
    ಮಳೆಯಿಂದಾಗಿ ಕೆಲಕಾಲ ಜನಜೀವನ ಅಸ್ತವ್ಯಸ್ತವಾಗಿತ್ತು. ರಸ್ತೆ ತುಂಬ ನೀರು ತುಂಬಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಕೆಲವೆಡೆ ಸಂಚಾರ ದಟ್ಟಣೆ ಉದ್ಬವಿಸಿತ್ತು. ಕೆಲವೆಡೆ ಕಾಲುವೆಗಳಲ್ಲಿ ಹೂಳು ತುಂಬಿದ್ದರಿಂದ ಮಳೆ ನೀರು ರಸ್ತೆ ಮೇಲೆ ಹರಿಯಿತು. ಮಾರುಕಟ್ಟೆಗಳಿಗೆ ಆಗಮಿಸಿದ್ದ ಜನ ಬಸ್​ ನಿಲ್ದಾಣ, ಮತ್ತಿತರೆಡೆಗೆ ನಿಂತುಕೊಂಡಿದ್ದ ದೃಶ್ಯ ಸಾಮಾನ್ಯವಾಗಿತ್ತು.
    ಒಂದು ಮಳೆಯಿಂದ ಹಲವು ರಸ್ತೆಗಳ ನಿಜ ಬಣ್ಣ ಬಯಲಾಗಿದೆ. ರಸ್ತೆಗಳಲ್ಲಿನ ಗುಂಡಿಗಳಲ್ಲಿ ನೀರು ನಿಂತಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಗಿತ್ತು. ಕೊಪ್ಪಿಕರ ರಸ್ತೆ ಸೇರಿ ಇತರೆಡೆಗಳಲ್ಲಿ ಇತ್ತೀಚೆಗೆ ನಿಮಿರ್ಸಿದ್ದ ಕೆಲ ರಸ್ತೆಗಳಲ್ಲೂ ನೀರು ನಿಂತಿತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts